ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜತ್ ರಾವರ್ ಅವರ ಪತ್ನಿ ವರ್ಷಾ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದ ಹಿನ್ನೆಲೆ ಶನಿವಾರ ಬೆಳಗ್ಗೆ ವರ್ಷಾ ರಾವತ್ ಇಡಿ ಕಚೇರಿಗೆ ಆಗಮಿಸಿದ್ದಾರೆ.
2 ದಿನಗಳ ಹಿಂದೆ ಮುಂಬೈನ ವಿಶೇಷ ನ್ಯಾಯಾಲಯ ಸಂಜಯ್ ರಾವತ್ ಅವರ ಇಡಿ ಕಸ್ಟಡಿಯನ್ನು ಆಗಸ್ಟ್ 8ರ ವರೆಗೆ ವಿಸ್ತರಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ವರ್ಷಾ ರಾವತ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್
Advertisement
Advertisement
4 ತಿಂಗಳ ಹಿಂದೆ ಮುಂಬೈನ ಗೊರೆಗಾಂವ್‌ನಲ್ಲಿರುವ ಪಾತ್ರಾ ಚಾವ್ಲ್‌ನ ಮರು ಅಭಿವೃದ್ಧಿಯಲ್ಲಿ 1,000 ಕೋಟಿ ರೂ. ಹಗರಣ ಮಾಡಿರುವುದಾಗಿ ಆರೋಪಿಸಿರುವ ಇಡಿ ವರ್ಷಾ ರಾವತ್ ಹಾಗೂ ಸಂಜಯ್ ರಾವತ್ ಅವರ ಇಬ್ಬರು ಸಹಚರರಿಂದ 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಇದನ್ನೂ ಓದಿ: ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಂದಾದ ಸಿದ್ದು, ಡಿಕೆ – ಜಂಟಿ ರೋಡ್ ಶೋ
Advertisement
ಇಡಿ ಅಧಿಕಾರಿಗಳು ಸಂಜಯ್ ರಾವತ್ ಅವರನ್ನು ಬಂಧಿಸಿರುವ ಹಿನ್ನೆಲೆ ತಮ್ಮನ್ನು ಕಿಟಕಿಯಿಲ್ಲದ, ಉಸಿರಾಡಲು ಕಷ್ಟವಾದ ಕೋಣೆಯೊಳಗೆ ಇರಿಸಿದ್ದಾರೆ ಎಂದು ರಾವತ್ ನ್ಯಾಯಾಲಯದ ಮುಂದೆ ದೂರು ನೀಡಿದ್ದಾರೆ.