ChikkaballapurDistrictsKarnatakaLatestMain Post

ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಂದಾದ ಸಿದ್ದು, ಡಿಕೆ – ಜಂಟಿ ರೋಡ್ ಶೋ

- ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹೆಸರಲ್ಲಿ ಚುನಾವಣಾ ಪ್ರಚಾರ

Advertisements

ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಜಂಟಿ ರೋಡ್ ಶೋ ನಡೆಸಿದ್ದಾರೆ.

ಚಿಂತಾಮಣಿ ವಿಧಾನ ಕ್ಷೇತ್ರದಲ್ಲಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರೋ ಪಾದಯಾತ್ರೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಆಗಮಿಸಿದ್ದರು. ಇಬ್ಬರು ನಾಯಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದು, ಚಿಂತಾಮಣಿ ಬೆಂಗಳೂರು ರಸ್ತೆಯ ಟೋಲ್ ಗೇಟ್ ಬಳಿಯೇ ಜೆಸಿಬಿ ಮೂಲಕ ಹೂ ಸುರಿಮಳೆ ಹಾಗೂ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ ಕೋರಿದ್ದಾರೆ. ಇದನ್ನೂ ಓದಿ:  ವರಮಹಾಲಕ್ಷ್ಮಿ ಪೂಜೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದ ಮುಸ್ಲಿಂ ಕುಟುಂಬ 

ತದನಂತರ ಕೈವಾರ ಕ್ರಾಸ್‍ನಿಂದ ತೆರೆದ ವಾಹನದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದ್ದು, ದಾರಿಯುದ್ದಕ್ಕೂ ಇಬ್ಬರು ನಾಯಕರನ್ನು ನೋಡಲು ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದಿದ್ರು. ಚಿಂತಾಮಣಿ ನಗರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇನ್ನೂ ರೋಡ್ ಶೋನಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದ್ದಾರೆ.

Live Tv

Leave a Reply

Your email address will not be published.

Back to top button