CinemaKarnatakaLatestMain PostSandalwood

ಸಂಜಯ್ ದತ್ ಮತ್ತು ರಣ್‌ಬೀರ್ ಸಿನಿಮಾ ಬ್ಯಾನ್ ಮಾಡಲು ಒತ್ತಾಯ

Advertisements

ಬಾಲಿವುಡ್ ಖ್ಯಾತ ನಟರಾದ ಸಂಜಯ್ ದತ್ ಮತ್ತು ರಣ್‌ಬೀರ್ ಕಪೂರ್ ಕಾಂಬಿನೇಷನ್ ನ ಶಮ್ಯೇರಾ ಸಿನಿಮಾದ ಪೋಸ್ಟರ್ ಮತ್ತು ಟ್ರೈಲರ್ ಭಾರೀ ಸದ್ದು ಮಾಡುತ್ತಿವೆ. ಈ ಸಿನಿಮಾದಲ್ಲಿ ಇಬ್ಬರೂ ಕಲಾವಿದರು ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅಲ್ಲದೇ, ವಿಭಿನ್ನವಾದ ಗೆಟಪ್ ಕೂಡ ಧರಿಸಿದ್ದಾರೆ. ಅದರಲ್ಲೂ ಸಂಜಯ್ ದತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆಯೇ ಚಿತ್ರವನ್ನು ಬ್ಯಾನ್ ಮಾಡಬೇಕು ಎನ್ನುವ ಕೂಗು ಕೇಳಿಬಂದಿದೆ.

ಸಂಜಯ್ ದತ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ರಣ್‌ಬೀರ್ ಕೂಡ ಹೊಸ ರೀತಿಯಲ್ಲಿ ಕಂಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆಗುವಂತಹ ದೃಶ್ಯಗಳು ಇವೆಯಂತೆ. ಅಲ್ಲದೇ, ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಅವುಗಳು ಸ್ಪಷ್ಟವಾಗಿವೆ ಅಂತೆ ಹೀಗಾಗಿಯೇ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಡ ಹೆಚ್ಚಿದೆ. ಇಂತಹ ದೃಶ್ಯಗಳನ್ನೇ ಇಟ್ಟುಕೊಂಡು ರಿಲೀಸ್ ಮಾಡಿದರೆ, ಹೋರಾಟ ಮಾಡುವುದಾಗಿ ಹಿಂದೂಪರ ಸಂಘಟನೆಗಳು ತಿಳಿಸಿವೆ. ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

ಈ ಹಿಂದೆ ರಣ್‌ಬೀರ್ ಅವರ ಹೊಸ ಚಿತ್ರಕ್ಕೂ ಇಂಥದ್ದೇ ಮಾತುಗಳು ಕೇಳಿ ಬಂದಿದ್ದವು. ಶೂ ಹಾಕಿಕೊಂಡು ದೇವಸ್ಥಾನದ ಒಳಗೆ ಹೋದರು ಅನ್ನುವ ಕಾರಣಕ್ಕಾಗಿ ದೊಡ್ಡ ಸುದ್ದಿ ಆಗಿತ್ತು. ಅದಕ್ಕೆ ನಿರ್ದೇಶಕರು ಸ್ಪಷ್ಟನೆ ಕೂಡ ಕೊಟ್ಟಿದ್ದರು. ಆದರೆ, ಅದಕ್ಕಿಂತಲೂ ಹೆಚ್ಚು ಶಮ್ಯೇರಾ ಸಿನಿಮಾ ಬಗ್ಗೆ ವಿರೋಧ ವ್ಯಕ್ತವಾಗಿದೆ. ಬಿಡುಗಡೆ ದಿನಗಳಲ್ಲಿ ತೊಂದರೆ ಮಾಡುವುದಾಗಿ ಬಹಿರಂಗವಾಗಿಯೇ ಕಾಮೆಂಟ್ ಮಾಡುತ್ತಿದ್ದಾರೆ.

Live Tv

Leave a Reply

Your email address will not be published.

Back to top button