ಚಂದನವನದ ಖ್ಯಾತ ನಿರೂಪಕಿ ಅನುಶ್ರೀ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ನಿರೂಪಣೆ ಮಾಡುವ ಖಾಸಗಿ ಶೋನಲ್ಲಿ ನಟ ಶಿವಣ್ಣ ಅನುಶ್ರೀಗೆ ವಿಶೇಷ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಈ ಕುರಿತು ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಈಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
Advertisement
ನಟಿ ಅನುಶ್ರೀ ಪುನೀತ್ ಅವರ ಅಪ್ಪಟ ಅಭಿಮಾನಿ ಎಂಬ ವಿಚಾರ ಎಲ್ಲರಿಗೂ ಗೊತ್ತು. ಹಾಗೆಯೇ ನಟ ಶಿವಣ್ಣ ಮತ್ತು ಅವರ ಕುಟುಂಬದವರ ಜತೆ ಕೂಡ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದೀಗ ಶಿವಣ್ಣ ಅನುಶ್ರೀಗೆ ಜಾಕೆಟ್ ಗಿಫ್ಟ್ ಮಾಡಿರುವ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಈ ಶೋನಲ್ಲಿ ನಡೆದಿರುವ ಘಟನೆಯೊಂದನ್ನು ನಟಿ ಶೇರ್ ಮಾಡಿ, ಶಿವಣ್ಣ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.
Advertisement
Advertisement
ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿರುವ ಅನುಶ್ರೀ, ಅದೇ ಶೋನಲ್ಲಿ ಶಿವಣ್ಣ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೋನಲ್ಲಿ ಸ್ಟೈಲೀಶ್ ಆಗಿ ಭಾಗವಹಿಸಿದ್ದ ಶಿವಣ್ಣ, ಚೆಂದದ ಜಾಕೆಟ್‌ವೊಂದನ್ನು ಧರಿಸಿದ್ದರು. ನಿರೂಪಣೆಯ ವೇಳೆ ನಿಮ್ಮ ಜಾಕೆಟ್ ಚೆನ್ನಾಗಿದೆ ಎಂದಿದ್ದಾರೆ. ಸರಿ ಕಣಮ್ಮ ಶೋ ಮುಗಿದ ಮೇಲೆ ನಿನಗೆ ಕೊಡ್ತೀನಿ ಎಂದಿದ್ದಾರೆ. ಈ ಮಾತನ್ನು ತಮಾಷೆಯಾಗಿ ಹೇಳಿದ್ದಾರೆ ಶಿವಣ್ಣ ಎಂದು ಭಾವಿಸಿದ್ದ ಅನುಶ್ರೀಗೆ ಅಚ್ಚರಿ ಕಾದಿತ್ತು. ಮಾತಿನಂತೆ ಶೋ ನಂತರ ಅನುಶ್ರೀಗೆ ಜಾಕೆಟ್ ಗಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ:ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ
Advertisement
View this post on Instagram
ಅನುಶ್ರೀಗೆ ಇಷ್ಟವಾದ ಜಾಕೆಟ್ ಮೇಲೆ ಶಿವರಾಜ್ ಕುಮಾರ್, ಪ್ರೀತಿಪೂರ್ವಕವಾಗಿ ಪ್ರೀತಿಯ ಗೆಳತಿ ಅನುಶ್ರೀಗೆ ಎಂದು ಬರೆದು ತಮ್ಮ ಜಾಕೆಟ್ ಅನ್ನು ತಾವೇ ಕೈಯಾರೆ ಅನುಶ್ರೀಗೆ ತೊಡಿಸಿದ್ದಾರೆ. ಇದರಿಂದ ಬಹಳ ಖುಷಿಯಾಗಿರುವ ಅನುಶ್ರೀ, ಶಿವಣ್ಣರ ಕೈಹಿಡಿದು ಧನ್ಯವಾದ ಅರ್ಪಿಸಿದ್ದಾರೆ. `ಇದು ಯಾವ ಜನ್ಮದ ಪುಣ್ಯ, ಕಳೆದ ವಾರ ಶೂಟ್ ವೇಳೆ ಹೇಳಿದೆ ಅಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ, ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು, ನಾನು ಸುಮ್ನೆ ಹೇಳಿರ್ತಾರೆ ಅನ್ಕೊಂಡೆ, ಆದ್ರೆ ಎಷ್ಟೇ ಆದ್ರೂ ಅಣ್ಣಾವರ ರಕ್ತ ಅಲ್ವಾ, ಆಕಾಶ ನೋಡದ ಕೈ ಪ್ರೀತಿ ಹಂಚಿದ ಕೈಗಳು ಅದು’ ಎಂದು ಬರೆದುಕೊಂಡಿದ್ದಾರೆ. ಇನ್ನು ಅನುಶ್ರೀಯ ಖುಷಿ ನೋಡಿ ನೀವು ಎಷ್ಟು ಲಕ್ಕಿ ಎಂದು ಫ್ಯಾನ್ಸ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
Live Tv