Bengaluru CityCinemaDistrictsKarnatakaLatestSandalwood

ಮಾಡಿದ ತಪ್ಪಿಗೆ ದಂಡ ಕಟ್ಟಿದ ಸಂಜನಾ ಗಲ್ರಾನಿ

Advertisements

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಮಾಡಿದ್ದ ತಪ್ಪಿಗೆ 2 ಸಾವಿರ ರೂ. ದಂಡ ಕಟ್ಟಿ, ಕ್ಷಮೆ ಕೇಳಿದ್ದಾರೆ.

ನಟಿ ಸಂಜನಾ ಗಲ್ರಾನಿ ದುಬಾರಿ ಬೆಲೆಯ ಆಡಿ ಕಾರ್ ಖರೀದಿ ಮಾಡಿದ್ದ ಜೋಶ್‍ನಲ್ಲಿ ಡ್ರೈವಿಂಗ್ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡಿ ವೈರಲ್ ಮಾಡಿದ್ದರು. ಮೈಲೇಜ್ ತಗೆದುಕೊಳ್ಳೊದಕ್ಕೆ ವಿಡಿಯೋ ಮಾಡಿದ ಸಂಜನಾಗೆ ಇದು ಕಂಟಕವಾಗಿ ಪರಿಣಮಿಸಿತ್ತು. ಕಾರು ಚಲಿಸುತ್ತಲೇ ಸೆಲ್ಫಿ ವಿಡಿಯೋ ಮಾಡಿದ್ದು ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಸಂಜನಾಗೆ ನೋಟಿಸ್ ನೀಡಿದ್ದರು.

ಸಂಚಾರಿ ನಿಯಮ ಉಲ್ಲಂಘನೆ ಆರೋಪದಡಿ ಸಂಜನಾಗೆ ಇಂದಿರಾನಗರ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದರು. ಸಂಚಾರಿ ನಿಯಮ ಉಲ್ಲಂಘನೆಯ ನೋಟಿಸ್ ಪಡೆದಿದ್ದ ಸಂಜನಾ ಇಂದು ದಂಡ ಕಟ್ಟಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿರುವ ಮುಖ್ಯ ಕಚೇರಿಗೆ ಹಾಜರಾಗಿ 2000 ರೂ. ದಂಡ ಕಟ್ಟಿ ಹೋಗಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡರ ಮುಂದೆ ಸಂಜನಾ ದಂಡ ಪಾವತಿಸಿದ್ದಾರೆ.

ಅಲ್ಲದೇ ಸಂಚಾರಿ ಪೊಲೀಸರಿಗೆ ಪತ್ರ ಬರೆದು ಘಟನೆ ನಡೆದ ವಿಚಾರದ ಬಗ್ಗೆ ವಿಷಾದಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಬೇಕು ಎನ್ನುವ ಕಾರಣಕ್ಕೆ ನಾನು ವಿಡಿಯೋ ಮಾಡಿಲ್ಲ. ಕಾಮನ್ ಆಗಿ ಹೊಸ ಕಾರು ಖರೀದಿಸಿದ್ದರಿಂದ ಸಂತೋಷಕಷ್ಟೇ ವಿಡಿಯೋ ಮಾಡಿದ್ದೆ. ನನಗೆ ಪೊಲೀಸರ ಬಗ್ಗೆ ಸಾಕಷ್ಟು ಗೌರವವಿದೆ. ಆದ್ದರಿಂದ ನಾನು ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡುವ ಕೆಲಸ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿ, ಸಂಜನಾ ಕ್ಷಮೆ ಯಾಚಿಸಿದ್ದಾರೆ.

Leave a Reply

Your email address will not be published.

Back to top button