ಮಾನವೀಯತೆಗೂ ಆರೋಗ್ಯ ವಿಚಾರಿಸದ ವಿನಯ್ & ಟೀಮ್‌ ನಡೆಗೆ ಪ್ರೇಕ್ಷಕರು ಛೀಮಾರಿ

Public TV
3 Min Read
sangeetha 3

ಬಿಗ್ ಬಾಸ್ ಮನೆಗೆ (Bigg Boss Kannada 10) ಸಂಗೀತಾ ಹಾಗೂ ಡ್ರೋನ್ ಪ್ರತಾಪ್ (Drone Prathap) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರ ಕಣ್ಣಿಗೂ ಬಲವಾದ ಪೆಟ್ಟಾಗಿದೆ. ಈ ವೇಳೆ, ಲೈಟ್ ಸೆನ್ಸಿಟಿವ್ ಇರೋದ್ರಿಂದ ಇಬ್ಬರೂ ಕಪ್ಪು ಕನ್ನಡಕ ಧರಿಸಿ ಬಂದರು. ಸಂಗೀತಾ, ಪ್ರತಾಪ್ ಸ್ಥಿತಿ ಕಂಡು ಮನೆಮಂದಿ ಮರುಗಿದ್ದರು. ಆದರೆ ಸಂಗೀತಾ, ಡ್ರೋನ್ ಆರೋಗ್ಯದ ಬಗ್ಗೆ ಕ್ಯಾರೆ ಎನ್ನದೇ ವಿನಯ್, ನಮ್ರತಾ ಕುಳಿತಿದ್ದರು. ಇವರ ನಡೆಗೆ ಇದೀಗ ಪ್ರೇಕ್ಷಕರು ಖಂಡಿಸಿದ್ದಾರೆ.

Bigg Boss 1 2

ಸಂಗೀತಾ ಹಾಗೂ ಡ್ರೋನ್ ಪ್ರತಾಪ್‌ಗೆ ಏನಾಯ್ತು ಎಂದು ಎಲ್ಲರೂ ವಿಚಾರಿಸುತ್ತಿದ್ದರು. ಆದರೆ ಮಾನವೀಯತೆಯನ್ನೇ ಮರೆತು ನಡೆದುಕೊಂಡ ವಿನಯ್ ಮಾತ್ರ ಇಬ್ಬರ ಹತ್ತಿರ ಬರಲೇ ಇಲ್ಲ. ಬಾಯ್ಮಾತಿಗೂ ಸಂಗೀತಾ ಮತ್ತು ಡ್ರೋನ್ ಪ್ರತಾಪ್‌ನ ವಿನಯ್ ಆಗಲಿ, ನಮ್ರತಾ ಆಗಲಿ ಮಾತನಾಡಿಸಲೇ ಇಲ್ಲ. ಇಬ್ಬರ ಆರೋಗ್ಯ ಸ್ಥಿತಿಯ ಬಗ್ಗೆ ರಾಕ್ಷಸರ ತಂಡ ಕ್ಯಾರೆ ಎನ್ನಲಿಲ್ಲ. ಮಾಡಿದ ತಪ್ಪು ಅರಿವಾಗಲೇ ಇಲ್ಲ. ಇದೀಗ ವಿನಯ್‌ ತಂಡದ ನಡೆಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.

Bigg Boss 3 1

ಸೋಪು ನೀರಿನ ದಾಳಿಯಿಂದಾಗಿ ಬುಧವಾರ ರಾತ್ರಿ ಚಿಕಿತ್ಸೆಗೆಂದು ದೊಡ್ಮನೆಯಿಂದ ಸಂಗೀತಾ, ಡ್ರೋನ್ ಪ್ರತಾಪ್ ಹೊರಹೋದರು. ಶನಿವಾರ (ಡಿ.9) ಬಿಗ್ ಬಾಸ್ ಮನೆಗೆ ಮರಳಿದರು. ಇಬ್ಬರೂ ಕಪ್ಪು ಕನ್ನಡಕ ಧರಿಸಿ ಬಂದಿದ್ದನ್ನ ನೋಡಿ ಕಾರ್ತಿಕ್, ತನಿಷಾ ಶಾಕ್ ಆದರು. ಇಬ್ಬರ ಸ್ಥಿತಿ ಕಂಡು ತಬ್ಬಿಕೊಂಡು ಕಾರ್ತಿಕ್, ತನಿಷಾ ಅತ್ತುಬಿಟ್ಟರು.

vinay gowda

ಕಣ್ಣು ಬಿಡೋಕೆ ಆಗ್ತಿರ್ಲಿಲ್ಲ. ವಾಶಿಂಗ್ ಪೌಡರ್ ಎಲ್ಲಾ ಒಳಗೆ ಹೋಗಿತ್ತು. ಪ್ರತಿ ಬಾರಿ ತೊಳೆಯಬೇಕಾದರೂ, ಆ ಪಾರ್ಟಿಕಲ್ಸ್ನಿಂದ ಫೋಮ್ ಕ್ರಿಯೇಟ್ ಆಗಿ ಉರಿಯಾಗುತ್ತಿತ್ತು. ಪ್ರಾಣ ಹೋಗುವ ತರಹ ನೋವಾಗಿತ್ತು. ಕಣ್ಣನ್ನೇ ತೆಗೆದುಹಾಕಿಬಿಡಿ ಅಂತ ಹೇಳೋಣ ಅನಿಸುತ್ತಿತ್ತು. ಡಾಕ್ಟರ್ ಕ್ಲೀನ್ ಮಾಡೋಕೆ ಟ್ರೈ ಮಾಡಿದ್ರೂ, ಹೆಚ್ಚು ಫೋಮ್ ಕ್ರಿಯೇಟ್ ಆಗುತ್ತಿತ್ತು. ಅದು ಪ್ರಾಣ ಹೋಗುವ ಹಿಂಸೆ. ಏನೇನು ಕೆಮಿಕಲ್ಸ್ ಬಿದ್ದಿದೆ ಅಂತ ಹೇಳಿ, ಅದರ ಪ್ರಕಾರ ಟ್ರೀಟ್‌ಮೆಂಟ್ ಆಯ್ತು. 48 ಗಂಟೆ ಕಣ್ಣು ಬಿಡೋಕೆ ಆಗಲಿಲ್ಲ. ಊತ ಕಡಿಮೆ ಆಗಲಿಲ್ಲ. ಕಣ್ಮುಚ್ಚಿಕೊಂಡೇ ಇದೆ. ಇವತ್ತು ಕಣ್ಣು ಬಿಡೋಕೆ ಆಗುತ್ತಿದೆ. ಆದರೆ, ಬಿಸಿಲನ್ನ ಫೇಸ್ ಮಾಡೋಕೆ ಆಗ್ತಿಲ್ಲ. ಪಿನ್ ತಗೊಂಡು ಚುಚ್ಚಿದಂತೆ ನೋವು, ಉರಿ ಇದೆ. ಪ್ರೆಶರ್ ಜಾಸ್ತಿ ಇದ್ದಿದ್ರಿಂದ ಕಾರ್ನಿಯಲ್‌ಗೆ ಎಫೆಕ್ಟ್ ಆಗಿದೆ. ಕ್ಲಿಯರ್ ಆಗಿ ಕಾಣುತ್ತಿಲ್ಲ. ನನಗೀಗ ದೂರದ್ದೇನೂ ಕಾಣ್ತಿಲ್ಲ. ಹತ್ತಿರದಲ್ಲಿ ಎಲ್ಲಾ ಎರಡೆರಡು ಕಾಣುತ್ತಿದೆ ಎಂದು ಸುದೀಪ್ ಮುಂದೆ ಸಂಗೀತಾ (Sangeetha Sringeri) ಮಾತನಾಡಿದ್ದಾರೆ. ಇದನ್ನೂ ಓದಿ:ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟಿದ್ವಿ- ವಿನೋದ್ ರಾಜ್

sudeep 1 1

ಕಣ್ಣೊಳಗೆ ಮರಳು ಮರಳು ಹೋದ ಹಾಗೆ ಆಗುತ್ತಿತ್ತು. ಬಟ್ಟೆ ಕೂಡ ಬಿಗ್ ಬಾಸ್ ಟೀಮ್‌ನವರು ಬದಲಾಯಿಸಿದರು. ಕಣ್ಣುಜ್ಜುವ ಹಾಗೆ ಆಗುತ್ತಿತ್ತು. ಎಷ್ಟೇ ಕಂಟ್ರೋಲ್ ಮಾಡಿದರೂ ತಡೆಯೋಕೆ ಆಗ್ತಿರ್ಲಿಲ್ಲ. ಕಣ್ಣು ಕಿತ್ತು ಹಾಕೋಣ ಅನ್ನೋಷ್ಟು ಉರಿ ಇತ್ತು. ಆಸ್ಪತ್ರೆಯಲ್ಲಿ ಕ್ಲೀನ್ ಮಾಡುವಾಗ ಏನೇನೋ ಕೆಮಿಕಲ್ ಹಾಕಿದಾಗ ಇನ್ನೂ ಜಾಸ್ತಿ ಉರಿ ಆಯ್ತು. ಒಂದು ಕಣ್ಣು ಚಿಕ್ಕದಾಗಿ ಗಾಯ ಆಗಿದೆ ಅಂತ ಹೇಳಿದರು. ಎಲ್ಲಾ ಸರಿ ಹೋಗೋಕೆ ಸ್ವಲ್ಪ ಸಮಯ ಬೇಕು. ಮಾತ್ರೆ, ಐ ಡಾಪ್ಸ್ ಕೊಟ್ಟಿದ್ದಾರೆ. ಬೆಳಕಿಗೆ ಕಣ್ಣು ಬಿಡೋಕೆ ಆಗಲ್ಲ. ಕಣ್ಣು ಬಿಟ್ಟರೆ ನೋವಾಗುತ್ತೆ. ಮಂಜು ಮಂಜಾಗಿ ಕಾಣುತ್ತಿದೆ ಎಂದರು ಡ್ರೋನ್ ಪ್ರತಾಪ್. ನೀವು ಸರಿಹೋಗ್ತೀರಾ. ಆದಷ್ಟು ಬೇಗ ಇಬ್ಬರೂ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇನೆ ಎಂದರು ಕಿಚ್ಚ ಸುದೀಪ್.

ಇಷ್ಟೆಲ್ಲಾ ಆಗುವಾಗ ಬಾಯ್ಮಾತಿಗೂ ಇಬ್ಬರ ಬಳಿ ವಿನಯ್, ನಮ್ರತಾ, ಪವಿ ಪೂವಪ್ಪ, ಮೈಕಲ್ ಮಾತನಾಡಲಿಲ್ಲ. ಕರುಣೆಗೂ ಹೇಗಿದ್ದೀರಾ ಎಂದು ಕೇಳಲಿಲ್ಲ. ಇವರ ನಡೆಗೆ ಇದೀಗ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

Share This Article