‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಖ್ಯಾತಿಯ ಶರಣ್ಯ ಶೆಟ್ಟಿಗೆ (Sharanya Shetty) ಬೇಡಿಕೆ ಹೆಚ್ಚಾಗಿದೆ. ಸ್ಟಾರ್ ನಟನಿಗೆ ನಾಯಕಿಯಾಗುವ ಟಾಲಿವುಡ್‌ನತ್ತ (Tollywood) ಶರಣ್ಯ ಮುಖ ಮಾಡಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್‌ಡೇ ಸಂಭ್ರಮ
Advertisement
ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ, ಆಶಿಕಾ ರಂಗನಾಥ್, ರುಕ್ಮಿಣಿ ವಸಂತ್ (Rukmini Vasanth) ತೆಲುಗಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅದೇ ಹಾದಿಯಲ್ಲಿ ಶರಣ್ಯ ಶೆಟ್ಟಿ ಹೆಜ್ಜೆ ಇಡುತ್ತಿದ್ದಾರೆ. ತೆಲುಗಿನ ನಿರ್ಮಾಣ ಸಂಸ್ಥೆಯೊಂದು ನಟಿಯ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸಿದೆ. ಅತೀ ಶೀಘ್ರದಲ್ಲಿ ಈ ಸಿನಿಮಾದ ಬಗ್ಗೆ ಘೋಷಣೆ ಆಗಲಿದೆ. ಇದನ್ನೂ ಓದಿ:ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮಂಡ್ ನೆಕ್ಲೇಸ್ ಕಳ್ಳತನ
Advertisement
Advertisement
ಶರಣ್ಯ ಶೆಟ್ಟಿ ಚೊಚ್ಚಲ ತೆಲುಗು ಸಿನಿಮಾಗೆ ಅಲ್ಲಿನ ಸ್ಟಾರ್ ನಟರೊಬ್ಬರು ಹೀರೋ ಆಗಿ ಬಣ್ಣ ಹಚ್ಚಲಿದ್ದಾರೆ. ಅದು ಯಾರು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಕನ್ನಡದ ನಟಿಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಇದೆ ಎಂಬುದು ಪದೇ ಪದೇ ಸಾಬೀತು ಆಗುತ್ತಿದೆ. ಸದ್ಯ ನಟಿಯ ಬಗೆಗಿನ ಸಿನಿಮಾ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಟಿಯ ಹೊಸ ಹೆಜ್ಜೆಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
Advertisement
ಇನ್ನೂ ಕಿರುತೆರೆಯ ಜನಪ್ರಿಯ ಸೀರಿಯಲ್ ಗಟ್ಟಿಮೇಳ ಮೂಲಕ ವಿಲನ್ ಆಗಿ ಶರಣ್ಯ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಕಳೆದ ವರ್ಷ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಮೂಲಕ ಶರಣ್ಯ ಸಕ್ಸಸ್ ಸಿಕ್ಕಿತ್ತು. ಸಿನಿಮಾ ಸೂಪರ್ ಹಿಟ್ ಆಯಿತು.