ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಈ ಹಿಂದೆ ಸಲ್ಮಾನ್ ಖಾನ್ 350 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದೀಗ ಹಿಂದಿ ಬಿಗ್ ಬಾಸ್ ಸೀಸನ್ 16ಕ್ಕೆ ಕ್ಷಣಗಣನೆ ಶುರುವಾಗಿದ್ದು, ಮತ್ತೆ ಸಲ್ಮಾನ್ ಖಾನ್ ಸಂಭಾವನೆಯ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಾರಿ ಓಟಿಟಿ ಮತ್ತು ಟಿವಿಯಲ್ಲಿ ಪ್ರತ್ಯೇಕ ಕಾರ್ಯಕ್ರಮವನ್ನು ನಡೆಸಿ ಕೊಡಬೇಕಾಗಿದ್ದರಿಂದ ಸಲ್ಮಾನ್ ಖಾನ್ ಬರೋಬ್ಬರಿ ಸಾವಿರ ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಸಲ್ಮಾನ್ ಖಾನ್ ಅಷ್ಟೊಂದು ಸಂಭಾವನೆ ಕೇಳಿದ್ದಾರೆ ಎಂದು ಸುದ್ದಿ ಆಗುತ್ತಿದ್ದಂತೆಯೇ ಕನ್ನಡದಲ್ಲಿ ಬಿಗ್ ಬಾಸ್ ನಡೆಸಿಕೊಡುವ ಕಿಚ್ಚ ಸುದೀಪ್ ಅವರ ಸಂಭಾವನೆ ಬಗ್ಗೆಯೂ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಶುರುವಾಗಿದೆ. ಹಿಂದಿ ಬಿಗ್ ಬಾಸ್ ಮತ್ತು ಕನ್ನಡದ ಬಿಗ್ ಬಾಸ್ ಬಗ್ಗೆ ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲವಾದರೂ, ಕಿಚ್ಚನ ಸಂಭಾವನೆ ಕೂಡ ಕಡಿಮೆ ಇಲ್ಲ ಎನ್ನುತ್ತಾರೆ ಆಪ್ತರು. ಸುದೀಪ್ ಕೂಡ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ನೂರು ಕೋಟಿಯಲ್ಲಿ ಬೇರೆ ಬೇರೆ ಲೆಕ್ಕಾಚಾರಗಳು ಇರುತ್ತವೆ ಎನ್ನುತ್ತವೆ ಮೂಲಗಳು. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್
Advertisement
Advertisement
ಹಿಂದಿಯಲ್ಲಿ ಒಂದು ರೀತಿಯಲ್ಲಿ ಸಂಭಾವನೆ ಫಿಕ್ಸ್ ಆದರೆ, ಕನ್ನಡದಲ್ಲಿ ಬೇರೆ ರೀತಿಯ ಲೆಕ್ಕಾಚಾರಗಳನ್ನು ಹಾಕಿ ಸಂಭಾವನೆ ನಿಗದಿ ಮಾಡಲಾಗುತ್ತದೆ ಅಂತೆ. ಹಾಗಾಗಿ ಕನ್ನಡದಲ್ಲಿ ಒಂದೇ ಸಲ ನೂರು ಕೋಟಿ ಕೊಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತವೆ ಮೂಲಗಳು. ಬಿಗ್ ಬಾಸ್ ಮಾತ್ರವಲ್ಲ, ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಕಲಾವಿದರ ಸಂಭಾವನೆ ನಿಗದಿ ಆಗುವುದು, ಕೇವಲ ಆ ಶೋಗೆ ಮಾತ್ರ ಆಗಿರುವುದಿಲ್ಲ. ಅವರ ಸಿನಿಮಾಗಳು ಸೇರಿದಂತೆ ಒಟ್ಟಾರೆ ಸಂಭಾವನೆ ನಿಗದಿ ಆಗುತ್ತವಂತೆ. ಹಾಗಾಗಿ ಕಿಚ್ಚ ಸುದೀಪ್ ಕೂಡ ನೂರಾರು ಕೋಟಿ ಸಂಭಾವನೆ ಪಡೆಯುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.
Advertisement
ಆದರೆ, ವಾಹಿನಿಯಾಗಲಿ ಮತ್ತು ಸುದೀಪ್ ಅವರಾಗಲಿ ಈ ಬಗ್ಗೆ ಯಾವತ್ತೂ ಮಾತೂ ಆಡಿಲ್ಲ. ಅಧಿಕೃತವಾಗಿ ಘೋಷಣೆಯನ್ನೂ ಮಾಡಿಲ್ಲ. ಆಪ್ತರಲ್ಲಿ ಮಾತ್ರ ಈ ರೀತಿಯ ಗುಸುಗುಸು ಕೇಳಬಹುದಷ್ಟೇ. ಏನೇ ಆಗಲಿ, ನೂರಾರು ಕೋಟಿ ಸಂಭಾವನೆ ಪಡೆದುಕೊಂಡು ಕಾರ್ಯಕ್ರಮ ನಡೆಸಿಕೊಡುವಂತಹ ಅದೃಷ್ಟ ಸಿಗುವುದು ಕೆಲವೇ ಕೆಲವು ಜನರಿಗೆ. ಅದರಲ್ಲಿ ಸುದೀಪ್ ಕೂಡ ಒಬ್ಬರಾಗಿದ್ದಾರೆ.