ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಮತ್ತು ಪೂಜಾ ಹೆಗ್ಡೆ (Pooja Hegde) ಇತ್ತೀಚೆಗೆ ಬಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಸ್ಟಾರ್ ಜೋಡಿ ಡೇಟ್ ಮಾಡ್ತಿದ್ದಾರೆ ಎಂದು ಕೆಲ ದಿನಗಳಿಂದ ಸಖತ್ ಸುದ್ದಿಯಾಗುತ್ತಿದೆ. ಈ ಬೆನ್ನಲ್ಲೇ ಸಲ್ಮಾನ್ ಆಪ್ತರು ಡೇಟಿಂಗ್ ವದಂತಿಗೆ ಬ್ರೇಕ್ ಹಾಕಿದ್ದಾರೆ.
`ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಡೇಟಿಂಗ್ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಸಲ್ಲು ಭಾಯ್ ಬದುಕಲ್ಲೂ ಸಾಕಷ್ಟು ಹುಡುಗಿರು ಬಂದು ಹೋಗಿದ್ದರು. ಆದರೆ ಮದುವೆ ತನಕ ಯಾವ ಪ್ರೀತಿಯೂ ಉಳಿಯಲಿಲ್ಲ. ಸಲ್ಮಾನ್‌ಗೆ ವಯಸ್ಸು 56 ಆದ್ರೂ ಮದುವೆಯ ಬಗ್ಗೆ ಆಲೋಚನೆ ಮಾಡಿದಂತೆ ಇಲ್ಲ. ಹಾಗಾಗಿ ಆಗಾಗ ನಟಿಯರ ಜೊತೆ ಸಲ್ಲು ಡೇಟಿಂಗ್ ಸುದ್ದಿ ಚಾಲ್ತಿಯಲ್ಲಿರುತ್ತದೆ. ಈಗ ಪೂಜಾ ಹೆಗ್ಡೆ ಜೊತೆಗಿನ ಸಲ್ಲು ಡೇಟಿಂಗ್ ವಿಚಾರ ಶುದ್ಧ ಸುಳ್ಳು ಎಂದು ಖಾಸಗಿ ವಾಹಿನಿಗೆ ಸಲ್ಮಾನ್ ಖಾನ್ ಆಪ್ತರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಹೊರಬಿತ್ತು ಕೆ.ಎಲ್ ರಾಹುಲ್ -ಅಥಿಯಾ ಮದುವೆ ಡೇಟ್
ಇಂತಹ ಸುಳ್ಳು ಸುದ್ದಿ ಹಬ್ಬಿಸುವವರಿಗೆ ನಾಚಿಕೆ ಆಗಬೇಕು. ಪೂಜಾ ಅವರಿಗೆ ಸಲ್ಮಾನ್ ಅವರ ಮಗಳ ವಯಸ್ಸು. ಪ್ರೀತಿ, ಡೇಟಿಂಗ್ ಕೇವಲ ಗಾಸಿಪ್ ಅಷ್ಟೇ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತ್ರಕ್ಕೆ ಹೀಗೆಲ್ಲಾ ಸುಳ್ಳು ಸೃಷ್ಟಿ ಮಾಡಬಹುದಾ ಎಂದು ಸಲ್ಲು ಸ್ನೇಹಿತರು ವದಂತಿ ಹಬ್ಬಿಸುವವರ ಮೇಲೆ ಫುಲ್ ಗರಂ ಆಗಿದ್ದಾರೆ.
ಇನ್ನೂ ಈ ಗಾಸಿಪ್ ಹಬ್ಬಲು ಕಾರಣ ವಿದೇಶಿ ಸೆನ್ಸಾರ್ ಮಂಡಳಿ ಸದಸ್ಯ ಉಮೈರ್ ಸಂಧು ಅವರ ಟ್ವೀಟ್ ಆಗಿತ್ತು. ಸಲ್ಮಾನ್ ಮತ್ತು ಪೂಜಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹಾಗಾಗಿ ತಮ್ಮ ಎರಡು ಸಿನಿಮಾಗೆ ಪೂಜಾರನ್ನೇ ನಾಯಕಿಯಾಗಿ ಮಾಡಿದ್ದಾರೆ. ಇಬ್ಬರು ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಹಾಗಾಗಿ ಅವರ ಮೇಲೂ ಸಲ್ಲು ಆಪ್ತರು ಗರಂ ಆಗಿದ್ದಾರೆ. ಈ ಮೂಲಕ ಡೇಟಿಂಗ್ ಸುದ್ದಿ ಸುಳ್ಳು ಎಂಬ ಸ್ಪಷ್ಟನೆ ನೀಡಿದ್ದಾರೆ.