ಪ್ರಭಾಸ್ (Prabhas) ಮತ್ತೆ ವಿದೇಶಕ್ಕೆ ಹಾರಿದ್ದಾರೆ. ಕೆಲವೇ ತಿಂಗಳ ಹಿಂದೆ ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದರು. ಇದೀಗ ಮತ್ತೆ ಇನ್ನೊಂದು ದೇಶಕ್ಕೆ ಹೋಗಿದ್ದಾರೆ. ಮೊಣಕಾಲಿನ ಶಸ್ತ್ರ ಚಿಕಿತ್ಸೆಗಾಗಿ (Surgery) ವಿಮಾನ ಏರಿದ್ದಾರೆ ಅನ್ನೋರು ಕೆಲವರು. ಇಲ್ಲ ವಿಶ್ರಾಂತಿಗಾಗಿ ಅನ್ನೋರು ಹಲವರು. ಯಾವುದು ಸತ್ಯ? ಇಲ್ಲಿದೆ ಮಾಹಿತಿ.


‘ಆದಿಪುರುಷ್’ (Adipurush) ಬಿಡುಗಡೆಗೂ ಮುನ್ನ ಪ್ರಭಾಸ್ ಅಮೆರಿಕಾಕ್ಕೆ ಹೋಗಿದ್ದರು. ಹೆಚ್ಚು ಕಮ್ಮಿ ಎರಡು ತಿಂಗಳು ಅಲ್ಲಿದ್ದರು. ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆಯಿತಾ ಇಲ್ಲವಾ? ಗೊತ್ತಾಗಲಿಲ್ಲ. ಇದೀಗ ಮತ್ತೆ ಅದೇ ಆಪರೇಶನ್‌ಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಹಾಗಲ್ಲ. ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಿಂದ ಹೈರಾಣಾಗಿದ್ದಾರೆ. ಹೀಗಾಗಿ ರೆಸ್ಟ್ ಮಾಡಲು ಈ ಪ್ರವಾಸ. ಯಾವುದಕ್ಕೂ ಸ್ಪಷ್ಟ ಉತ್ತರ ಇಲ್ಲ. ಪ್ರಭಾಸ್ ಫ್ಯಾನ್ಸ್ ಮಾತ್ರ ಸಲಾರ್ ಯಾವಾಗ ಬರುತ್ತೋ ಎಂದು ಕಾಯ್ತಿದ್ದಾರೆ.
‘ಸಲಾರ್’ (Salaar) ಪಾರ್ಟ್ 1, ದೀಪಿಕಾ ಪಡುಕೋಣೆ (Deepika Padukone) ಜೊತೆಗಿನ 2898 AD, ವಿಷ್ಣ ಮಂಜು ಜೊತೆ ಭಕ್ತ ಕಣ್ಣಪ್ಪ, ನಿಧಿ ಅಗರ್‌ವಾಲ್ ಜೊತೆ ‘ರಾಜಾ ಡಿಲಕ್ಸ್’ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಪ್ರಭಾಸ್ ಕೈಯಲ್ಲಿದೆ.
Web Stories

