CinemaDistrictsKarnatakaLatestMain PostSandalwoodSouth cinema

‘ಗಾರ್ಗಿ’ ಸಿನಿಮಾದ ಮೂಲಕ ಕನ್ನಡಕ್ಕೆ ಬಂದ ಸಾಯಿ ಪಲ್ಲವಿ

ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ಸಿನಿಮಾದ ಮೂಲಕ ಸಾಯಿ ಪಲ್ಲವಿ ಕನ್ನಡಕ್ಕೆ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು. ಮಂಸೋರೆ ಕೂಡ ಸಾಯಿ ಪಲ್ಲವಿಯನ್ನು ಭೇಟಿ ಮಾಡಿ ಕಥೆ ಹೇಳಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಆದರೆ, ಅದಕ್ಕೂ ಮುನ್ನ ಸಾಯಿ ಪಲ್ಲವಿ ಹೊಸ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ, ನಾಲ್ಕು ಭಾಷೆಗಳಲ್ಲಿ ತಯಾರಾಗಲಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ಇಂದು ಸಾಯಿ ಪಲ್ಲವಿ ಅವರ ಹುಟ್ಟು ಹಬ್ಬ. ಈ ಬರ್ತಡೇಗಾಗಿ ಅವರ ನಟನೆಯ ಹೊಸ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಈ ಚಿತ್ರಕ್ಕೆ ಗಾರ್ಗಿ ಎಂದು ಹೆಸರಿಡಲಾಗಿದೆ. ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ನಿರ್ಮಾಣವಾಗಲಿದೆಯಂತೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ನ್ಯಾಯಕ್ಕಾಗಿ ಹೋರಾಟ ಮಾಡುವ ಮಹಿಳೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.  ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

ಗಾರ್ಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸ್ವತಃ ಸಾಯಿ ಪಲ್ಲವಿ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದು, ಹೊಸ ಚಿತ್ರಕ್ಕೆ ಹಾರೈಸಿ ಎಂದು ಕೇಳಿಕೊಂಡಿದ್ದಾರೆ. ಈ ಫಸ್ಟ್ ಲುಕ್ ವಿಶೇಷ ಅರ್ಥ ನೀಡುತ್ತಿದ್ದು, ನ್ಯಾಯ ದೇವತೆಯ ಮುಂದೆ ಬ್ಯಾಗ್ ಹಾಕಿಕೊಂಡು ಅಸಹಾಯಕ ಮಹಿಳೆಯಂತೆ ಸಾಯಿ ಪಲ್ಲವಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

ಸಾಯಿ ಪಲ್ಲವಿ ಸಿನಿಮಾ ರಂಗದಿಂದಲೇ ದೂರವಾಗುತ್ತಾರೆ ಎನ್ನುವ ಮಾತಿತ್ತು. ಕೆಲವೇ ದಿನಗಳಲ್ಲೇ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಅದಕ್ಕೆ ಅವರು ಬೇರೆ ರೀತಿಯಲ್ಲೇ ಉತ್ತರ ಕೊಟ್ಟಿದ್ದರು. ಇದೀಗ ಮದುವೆ ಮತ್ತು ಸಿನಿಮಾ ರಂಗದಿಂದ ದೂರವಾಗುವ ಪ್ರಶ್ನೆಗಳಿಗೆ ‘ಗಾರ್ಗಿ’ ಮೂಲಕ ಉತ್ತರಿಸಿದ್ದಾರೆ ಸಾಯಿ ಪಲ್ಲವಿ.

Leave a Reply

Your email address will not be published.

Back to top button