ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅಂತ ಮತ್ತೊಮ್ಮೆ ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಿಕೆಟ್ ಹೇಳಿಕೆಗೆ ಪಕ್ಷದಲ್ಲೆ ಅಪಸ್ವರ ಕೇಳಿ ಬಂದಿದೆ. ಶಾಸಕ ದಿನೇಶ್ ಗುಂಡೂರಾವ್ ಬಳಿಕ ಹಿರಿಯ ನಾಯಕ ಆರ್. ದೇಶಪಾಂಡೆ ಕೂಡಾ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಎಲ್ಲರಿಗೂ ಅಡ್ಜೆಸ್ಟ್ ಆಗುತ್ತೇನೆ. ಎಲ್ಲದ್ದಕ್ಕಿಂತ ಪಕ್ಷ ನನಗೆ ದೊಡ್ಡದು.ಪಕ್ಷ ನನಗೆ ಮುಖ್ಯ. ಪಕ್ಷ ನನ್ನನ್ನು ಮಂತ್ರಿ ಮಾಡಿದೆ. ಅಧ್ಯಕ್ಷ ಸ್ಥಾನ ಕೊಟ್ಟಿದೆ. ಹೀಗಾಗಿ ಗೊಂದಲಗಳಿಗಿಂತ ನನಗೆ ಪಕ್ಷ ಬೆಳೆವಣಿಗೆ ಆಗಬೇಕು ಅಷ್ಟೆ. ಸಣ್ಣ ಸಣ್ಣ ವಿಚಾರವನ್ನು ದೊಡ್ಡದು ಮಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಯಾರೇ ಆಗ್ಲಿ.. ನನ್ನಿಂದ ಟಿಕೆಟ್ ಘೋಷಣೆ ಅಂತ ಹೇಳಿದ್ರೆ, ಅದು ಕಾಂಗ್ರೆಸ್‍ನಲ್ಲಿ ಸಾಧ್ಯವಿಲ್ಲ: ಡಿಕೆಶಿ ವಿರುದ್ಧ ಗುಂಡೂರಾವ್ ಕಿಡಿ
Advertisement
Advertisement
ಡಿ.ಕೆ. ಶಿವಕುಮಾರ್ ಅವರು ವೇಗವಾಗಿ ಹೋಗುತ್ತಿದ್ದಾರೆ. ಅದು ಸರಿಯೇ. ಚುನಾವಣೆಗೆ ಸಮಯ ಕಡಿಮೆ ಇದೆ. ಹೀಗಾಗಿ ವೇಗವಾಗಿ ಹೋಗುತ್ತಿದ್ದಾರೆ. ಒಂದು ಮನೆಯಲ್ಲಿ 4 ಜನ ಮಕ್ಕಳು ಇರುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಎಲ್ಲರ ಅಭಿಪ್ರಾಯ ಒಂದೇ ಇರುವುದಿಲ್ಲ ಅಂತ ತಮ್ಮ ಮೇಲೆ ಡಿ.ಕೆ.ಶಿವಕುಮಾರ್ ಮಾಡಿದ ಆರೋಪಕ್ಕೂ ಟಾಂಗ್ ನೀಡಿದರು. ಇದನ್ನೂ ಓದಿ: ಹೈದರಾಬಾದ್ ಕರ್ನಾಟಕಕ್ಕೆ ಹಣ ಇಟ್ಟಿರುವುದು ಅವರಿಗೆ ಇಷ್ಟವಿಲ್ಲವೇನೋ: ಖರ್ಗೆಗೆ ಸಿಎಂ ತಿರುಗೇಟು
Advertisement
ಕೆಲಸ ಮಾಡದ ಶಾಸಕರಿಗೆ ಟಿಕೆಟ್ ಕೊಡುವುದಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ದೇಶಪಾಂಡೆ, ಕಾಂಗ್ರೆಸ್ ದೊಡ್ಡ ಪಕ್ಷ. ಕೆಲಸ ಮಾಡದೇ ಹೋದರೆ ಟಿಕೆಟ್ ಕೊಡುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಟಿಕೆಟ್ ಬಗ್ಗೆ ನಾನು ಹೆಚ್ಚಾಗಿ ಮಾತಾಡುವುದಿಲ್ಲ. ಆದರೆ ಅಂತಿಮವಾಗಿ ಟಿಕೆಟ್ ತೀರ್ಮಾನ ಮಾಡುವುದು ಹೈಕಮಾಂಡ್. ಅಭಿಪ್ರಾಯ ಕೊಡುವುದು ಅಷ್ಟೆ ನಮ್ಮ ಕೆಲಸ. ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್ ಎನ್ನುವ ಮೂಲಕ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು.