Bengaluru CityDistrictsKarnatakaLatestMain Post

ಹೈದರಾಬಾದ್ ಕರ್ನಾಟಕಕ್ಕೆ ಹಣ ಇಟ್ಟಿರುವುದು ಅವರಿಗೆ ಇಷ್ಟವಿಲ್ಲವೇನೋ: ಖರ್ಗೆಗೆ ಸಿಎಂ ತಿರುಗೇಟು

ಬೆಂಗಳೂರು: ಮಹಾನ್ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ನಾವು ಹೈದರಾಬಾದ್ ಕರ್ನಾಟಕದ (Hyderabad Karnataka) ಅಭಿವೃದ್ಧಿಗೆ (Development) 5 ಸಾವಿರ ಕೋಟಿ ರೂ. ಇಟ್ಟಿರುವುದು ಇಷ್ಟವಿಲ್ಲವೇನೋ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆಗೆ (Priyank Kharge) ತಿರುಗೇಟು ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿ ಸಿಎಂ ಅವರು ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಮುಂದೆ ಚುನಾವಣೆ ಬರುತ್ತಿದ್ದು, ಈ ಅನುದಾನ ಬಿಡುಗಡೆ ಸಾಧ್ಯಾನಾ? ಎಂದು ಖರ್ಗೆ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹಣ ಇಟ್ಟಿರುವುದು ಅವರಿಗೆ ಇಷ್ಟವಿಲ್ಲವೇನೋ. ಆ ಭಾಗದ ಅಭಿವೃದ್ಧಿ ಆಗುವುದು ಅವರಿಗೆ ಇಷ್ಟವಾಗುತ್ತಿಲ್ಲ ಎನಿಸುತ್ತದೆ. ವಿನಾಕಾರಣ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಸಾಧ್ಯವಿಲ್ಲ: ಕೇರಳಕ್ಕೆ ಕರ್ನಾಟಕ ಸರ್ಕಾರ ಸ್ಪಷ್ಟನೆ

ಇದೇ ವೇಳೆ ತೆಲಾಂಗಣದಲ್ಲಿ 40% ಪರ್ಸೆಂಟ್ ಎಂಬ ಬ್ಯಾನರ್ ಅಳವಡಿಕೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಇದೊಂದು ವ್ಯವಸ್ಥಿತ ಷಡ್ಯಂತ್ರ. ಈ ಬ್ಯಾನರ್ ಹಾಕಿದ್ದಾರೆ ಎನ್ನುವ ವಿಚಾರ ನನಗೆ ತಿಳಿದಿಲ್ಲ. ಆದರೆ ಇದು ರಾಜ್ಯಗಳ ನಡುವಿನ ಸಂಬಂಧವನ್ನು ಹಾಳು ಮಾಡುತ್ತಿದೆ ಎಂದಿದ್ದಾರೆ.

ಬಳ್ಳಾರಿ ವಿಮ್ಸ್‌ಗೆ ಆರೋಗ್ಯ ಸಚಿವರು ಭೇಟಿ ನೀಡಿಲ್ಲ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕ ಖಾಸಗಿ ಆಸ್ಪತ್ರೆ ಬಿಲ್ ತಂದಿದ್ದರು. ಆಗ ಎಲ್ಲಾ ವೈದ್ಯರು ಸುಮಾರು 5 ದಿನ ಪ್ರತಿಭಟನೆ ಮಾಡಿದ್ದರು. ಆ ವೇಳೆ ಸುಮಾರು 80 ಜನ ಸಾವನ್ನಪ್ಪಿದ್ದಾರೆ. ಅಂದು ಆರೋಗ್ಯ ಸಚಿವರು ರಾಜೀನಾಮೆ ಕೊಟ್ಟಿದ್ರಾ? ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಯವರ ಬಂಡಲ್‍ನಿಂದಾಗಿ ಕಲ್ಯಾಣ ಕರ್ನಾಟಕ ಹಿನ್ನೆಡೆ – ಪ್ರಿಯಾಂಕ್ ಖರ್ಗೆ ಟೀಕೆ

Live Tv

Leave a Reply

Your email address will not be published.

Back to top button