‘ಕೆಜಿಎಫ್’ ಸ್ಟಾರ್ ಯಶ್ (Yash) ಅವರು ಪಕ್ಕಾ ಫ್ಯಾಮಿಲಿ ಮೆನ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಎಷ್ಟೇ ಕೆಲಸವಿದ್ದರೂ ಕುಟುಂಬಕ್ಕೆ ಅಂತಾ ಒಂದಿಷ್ಟು ಸಮಯಾವಕಾಶ ಕೊಡುತ್ತಾರೆ. ಇದೀಗ ಯಶ್, ಸಂಕ್ರಾಂತಿ ಹಬ್ಬವನ್ನು (Makar Sankranti) ಸಂಭ್ರಮದಿಂದ ಕುಟುಂಬ ಜೊತೆ ಆಚರಿಸಿದ್ದಾರೆ.
ಹೊಸ ಪ್ರಾಜೆಕ್ಟ್ಗಳ ಕೆಲಸ ಸದ್ಯಕ್ಕೆ ಪಕ್ಕಕ್ಕೆ ಇಟ್ಟು ಹಬ್ಬ-ಹರಿದಿನಗಳಲ್ಲಿ ಮಿಸ್ ಇಲ್ಲದೇ ಕುಟುಂಬದ ಜೊತೆಗೆ ಯಶ್ ಕಾಲ ಕಳೆದಿದ್ದಾರೆ. ಅಂತೆಯೇ ಈ ಬಾರಿಯೂ ಕೂಡ ಸಂಕ್ರಾಂತಿ ಹಬ್ಬವನ್ನು ಅವರು ಸಡಗರದಿಂದ ಕುಟುಂಬದ ಜೊತೆಗೆ ಆಚರಿಸಿದ್ದಾರೆ. ಹಾಸನದಲ್ಲಿರುವ (Hassan) ತಮ್ಮ ಫಾರ್ಮ್ಹೌಸ್ನಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ತಂದೆ, ತಾಯಿ ಹಾಗೂ ಪತ್ನಿ ರಾಧಿಕಾ ಪಂಡಿತ್ (Radhika Pandit), ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಜೊತೆಗೆ ಯಶ್ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಹಬ್ಬದ ಸಂಭ್ರಮದ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಸಂಕ್ರಾಂತಿಯಂದು ಬೇಬಿ ಬಂಪ್ ಫೋಟೋಶೂಟ್ನಲ್ಲಿ ಮಿಂಚಿದ ರಾಮ್ ಚರಣ್ ಪತ್ನಿ ಉಪಾಸನಾ
View this post on Instagram
ಇನ್ನೂ ಈ ಫೋಟೋದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡದಲ್ಲಿ ಯಶ್ ಕುಟುಂಬದವರು ಸಂಕ್ರಾಂತಿ ಹಬ್ಬ ಆಚರಿಸೋದನ್ನ ನೋಡಬಹುದಾಗಿದೆ. ಅವರು ಹೊಸ ಮನೆ ಕಟ್ಟಿಸುತ್ತಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಹೊಸ ಮನೆ ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
‘ಕೆಜಿಎಫ್ 2’ ಸಕ್ಸಸ್ ನಂತರ ಯಶ್ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಯಶ್ ಮುಂದಿನ ನಡೆಯ ಬಗ್ಗೆ ನೆಟ್ಟಿಗರು ಕ್ಯೂರಿಯಸ್ ಆಗಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಸೆಲೆಬ್ರೆಟಿಗಳ ಸಂಭ್ರಮ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k