ಮನೆ ಮನೆಗಳಲ್ಲೂ ಸಂಕ್ರಾಂತಿ ಸಂಭ್ರಮ (Sankranti Festival) ಮುಗಿಲು ಮುಟ್ಟಿದೆ. ಸ್ಯಾಂಡಲ್ವುಡ್ (Sandalwood) ಮತ್ತು ಸೌತ್ ಸಿನಿಮಾರಂಗದಲ್ಲೂ ಸಂಕ್ರಾಂತಿ ಹಬ್ಬ ಜೋರಾಗಿದೆ. ಹಾಗಾದ್ರೆ ಸೆಲೆಬ್ರೆಟಿಗಳ ಮನೆಯಲ್ಲಿ ಹಬ್ಬ ಹೇಗಿತ್ತು ಎಂಬುದರ ಝಲಕ್ ಇಲ್ಲಿದೆ ನೋಡಿ.
View this post on Instagram
ಹ್ಯಾಟ್ರಿಕ್ ಹೀರೋ ಶಿವಣ್ಣ (Shivarajkumar), ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿಗುರಲಿ ಎಂದು ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬಕ್ಕೆ ವೀಡಿಯೋ ಮೂಲಕ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಮ್ಯಾರೇಜ್ ಆಫರ್ ಕೊಟ್ಟವನಿಗೆ ನೋ ನೋ ಎಂದ ಅನುಶ್ರೀ
View this post on Instagram
ಸಿಂಪಲ್ ಸುಂದರಿ ಶ್ವೇತಾ ಶ್ರೀವಾಸ್ತವ್ (Shwetha Srivastav) ಸಂಕ್ರಾಂತಿ ಹಬ್ಬದಲ್ಲಿ ಮಿಂಚಿದ್ದಾರೆ. ನೀಲಿ ಸೀರೆಯುಟ್ಟು, ಕಬ್ಬು ಹಿಡಿದು ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ.
View this post on Instagram
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devraj) ತಮ್ಮ ಕುಟುಂಬದ ಜೊತೆ ಸಂಕ್ರಾಂತಿ ಹಬ್ಬವನ್ನ ಸೆಲೆಬ್ರೆಟ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
View this post on Instagram
ಗೋಲ್ಡನ್ ಕ್ವೀನ್ ಅಮೂಲ್ಯ(Amulya), ಪತಿ ಜಗದೀಶ್ ಮತ್ತು ಅವಳಿ ಮಕ್ಕಳ ಜೊತೆ ಹಬ್ಬವನ್ನ ಖುಷಿ ಖುಷಿಯಾಗಿ ಆಚರಿಸಿದ್ದಾರೆ. ಅಮೂಲ್ಯರ ಮುದ್ದಾದ ಮಕ್ಕಳ ಜೊತೆ ಹಸು ಕೂಡ ಹೈಲೈಟ್ ಆಗಿದೆ.
View this post on Instagram
ಬಾಲಿವುಡ್ (Bollywood) ಸಿನಿಮಾ ಸೇರಿದಂತೆ ಏಳು ಸಿನಿಮಾಗಳಲ್ಲಿ ಬ್ಯುಸಿಯಿರುವ ತುಪ್ಪದ ಬೆಡಗಿ ರಾಗಿಣಿ (Ragini Dwivedi), ಸಂಕ್ರಾಂತಿ ಹಬ್ಬದಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಕೇಸರಿ ಮತ್ತು ನೀಲಿ ಲಂಗ ದಾವಣಿಯಲ್ಲಿ ಕ್ಯೂಟ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹಬ್ಬಕ್ಕೆ ಶುಭಹಾರೈಸಿದ್ದಾರೆ.
Telugu boys wishing you all a Happy Sankranti ????❤️ pic.twitter.com/GssIQXt77R
— Vijay Deverakonda (@TheDeverakonda) January 15, 2023
ಟಾಲಿವುಡ್ ನಟ ವಿಜಯ್ ದೇವರಕೊಂಡ (Actor Vijay Devarakonda) ತಮ್ಮ ಸ್ನೇಹಿತರು ಮತ್ತು ಕುಟುಂಬದ ಜೊತೆ ಸಂಕ್ರಾಂತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k