ಬೆಂಗಳೂರು: ಯಲಹಂಕದ (Yelahanka) ನ್ಯೂ ಟೌನ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು (Real Estate Businessman) ದುಷ್ಕರ್ಮಿಗಳು ಪತ್ನಿ (Wife) ಎದುರೇ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾರೆ.
ಚರಣ್ (35) ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ʻಧಣಿ ಪ್ರಾಪರ್ಟಿಸ್’ ಮಾಲೀಕರಾಗಿದ್ದ ಚರಣ್ ತಮ್ಮ ಕಚೇರಿಗೆ ಆಗಮಿಸುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ನಾಲ್ಕೈದು ಮಂದಿಯ ತಂಡ ಏಕಾಏಕಿ ದಾಳಿ ನಡೆಸಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಬೆಳಗ್ಗೆ 10:45ರ ಸುಮಾರಿಗೆ ಈ ಘಟನೆ ನಡೆದಿದೆ. ಇದನ್ನೂ ಓದಿ: 10 ವರ್ಷದ ಪ್ರೀತಿಗೆ ಮೋಸ – ಎರಡು ಮಕ್ಕಳ ತಾಯಿಯನ್ನ ಗುಟ್ಟಾಗಿ ಮದುವೆಯಾದ ಸದಾಕತ್!
ಸ್ಥಳಕ್ಕೆ ಯಲಹಂಕ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಹಳೇ ವೈಷಮ್ಯವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅರುಣಾಚಲದಲ್ಲಿ ಭಾರೀ ಅಗ್ನಿ ಅವಘಡ – ಮೂವರು ಅಪ್ರಾಪ್ತರು ಸೇರಿ 4 ಮಂದಿ ಸಜೀವ ದಹನ
