ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಶುಕ್ರವಾರ ತನ್ನ ರೆಪೊ ದರವನ್ನು ಶೇ.0.50 ಬೇಸಿಸ್ ಪಾಯಿಂಟ್ ಹೆಚ್ಚಿಸಿದೆ. ಈ ಮೂಲಕ ರೆಪೊ ದರ ಶೇ.5.40 ರಷ್ಟು ಹೆಚ್ಚಳವಾಗಿದೆ.
ಏರುತ್ತಿರುವ ಹಣದುಬ್ಬರವನ್ನು ಸರಿಪಡಿಸಲು ಆರ್‌ಬಿಐ ಸತತ 3ನೇ ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಎಲ್ಲಾ 6 ಸದಸ್ಯರು ರೆಪೊ ದರ ಏರಿಕೆಗೆ ಒಮ್ಮತ ಸೂಚಿಸಿದ್ದಾರೆ. ಇದನ್ನೂ ಓದಿ: Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ
Advertisement
Advertisement
ರೆಪೊ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇದರಿಂದ ಗೃಹ, ವಾಹನ ಹಾಗೂ ಇರತ ಸಾಲಗಳ ಮೇಲಿನ ಬಡ್ಡಿ ದರ ಇನ್ನಷ್ಟು ಜಾಸ್ತಿಯಾಗಲಿದೆ. ಇದನ್ನೂ ಓದಿ: ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು
Advertisement
ಆರ್‌ಬಿಐ ರೆಪೊ ದರವನ್ನು ಮೇ ತಿಂಗಳಿನಲ್ಲಿ ಶೇ.0.40 ರಷ್ಟು ಹಾಗೂ ಜೂನ್‌ನಲ್ಲಿ ಶೇ.0.50 ರಷ್ಟು ಹೆಚ್ಚಿಸಿತ್ತು. ಇದೀಗ ಸತತ 3ನೇ ಬಾರಿ ಹೆಚ್ಚಿಸಿದ್ದು, ಈ ದರ 2019ರಿಂದ ನಡೆದ ಮೊದಲ ಅತಿದೊಡ್ಡ ಏರಿಕೆಯಾಗಿದೆ.