ಮುಂಬೈ: ಗಾಯದ ಸಮಸ್ಯೆಯಿಂದ ಏಷ್ಯಾಕಪ್‍ನಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ ಇದೀಗ 2022ರ ಟಿ20 ವಿಶ್ವಕಪ್‍ನಿಂದಲೂ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
Advertisement
ಮೊಣಕಾಲಿನ ಗಾಯದಿಂದಾಗಿ ಏಷ್ಯಾಕಪ್‍ನಿಂದ ಹೊರನಡೆದಿರುವ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ 3 ತಿಂಗಳಕಾಲ ವಿಶ್ರಾಂತಿಯಲ್ಲಿರಬೇಕಾದ ಅನಿವಾರ್ಯತೆ ಇದೆ ಅಲ್ಲದೇ ಕೆಲ ಕೇಸ್‍ಗಳಲ್ಲಿ 6 ತಿಂಗಳು ಇರಬೇಕಾಗುತ್ತದೆ ಎಂದು ಎನ್‍ಸಿಎ ವೈದ್ಯರ ತಂಡ ಹೇಳಿದೆ. ಹಾಗಾಗಿ ಜಡೇಜಾ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ನಾಳೆ ಸೂಪರ್ ಸಂಡೇ – ಕದನ ಕುತೂಹಲ ಮೂಡಿಸಿದ ಇಂಡೋ-ಪಾಕ್ ಹೋರಾಟ
Advertisement
Advertisement
ಎನ್‍ಸಿಎ ವೈದ್ಯಕೀಯ ತಂಡದ ಪ್ರಕಾರ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯಬೇಕು. ಈ ಗಾಯ ವಾಸಿಯಾಗಲು 3 ತಿಂಗಳು ವಿಶ್ರಾಂತಿ ಅತ್ಯಗತ್ಯ. ಕೆಲವೊಮ್ಮೆ 6 ತಿಂಗಳು ವಿಶ್ರಾಂತಿ ಪಡೆಯುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಜಡೇಜಾ ಕುರಿತು ಈಗಲೇ ಯಾವುದೇ ಮಾಹಿತಿ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Advertisement
ಜಡೇಜಾ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರಗಳಲ್ಲಿ ಒಬ್ಬರು. ತನ್ನ ಬಿಗ್‍ಹಿಟ್ ಮತ್ತು ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುವ ತಾಕತ್ ಜಡೇಜಾಗಿದೆ. ಅಲ್ಲದೇ ಕೆಲ ವರ್ಷಗಳಿಂದ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಮೂರು ಮಾದರಿ ಕ್ರಿಕೆಟ್‍ನಲ್ಲೂ ಜಡೇಜಾ ತಂಡಕ್ಕೆ ನೆರವಾಗುತ್ತಿದ್ದಾರೆ. ಇದೆಲ್ಲದರ ಜೊತೆ ಜಡೇಜಾ ಟೀಂ ಇಂಡಿಯಾದ ಗನ್ ಫೀಲ್ಡರ್. ಪ್ರಸ್ತುತ ತಂಡದಲ್ಲಿರುವ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಜಡೇಜಾ ನಂಬರ್ 1 ಸ್ಥಾನದಲ್ಲಿ ನಿಲ್ಲುತ್ತಾರೆ. ಹಾಗಾಗಿ ಜಡೇಜಾ ತಂಡದಿಂದ ಹೊರಗುಳಿದರೆ ಭಾರತ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಇದನ್ನೂ ಓದಿ: 8 ಎಕರೆ ಜಮೀನಿನಲ್ಲಿ ಅನುಷ್ಕಾ-ವಿರಾಟ್ ಫಾರ್ಮ್ ಹೌಸ್: ದುಡ್ಡಿದ್ದೋರ ದುನಿಯಾ ಎಂದ ಫ್ಯಾನ್ಸ್
2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್, ನವೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ಕೆಲ ದೇಶಗಳು ಟಿ20 ವಿಶ್ವಕಪ್‍ಗಾಗಿ ತಂಡವನ್ನು ಆಯ್ಕೆ ಮಾಡಿದೆ. ಭಾರತ ತಂಡ ಆಯ್ಕೆ ಇನ್ನಷ್ಟೇ ಮಾಡಬೇಕಾಗಿದೆ.