BollywoodCinemaCricketLatestMain Post

8 ಎಕರೆ ಜಮೀನಿನಲ್ಲಿ ಅನುಷ್ಕಾ-ವಿರಾಟ್ ಫಾರ್ಮ್ ಹೌಸ್: ದುಡ್ಡಿದ್ದೋರ ದುನಿಯಾ ಎಂದ ಫ್ಯಾನ್ಸ್

ಕ್ರಿಕೆಟಿಗ ವಿರಾಟ್ ಕೋಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಮದುವೆಯ ನಂತರ ಭಾರೀ ಮೊತ್ತದ ಜಮೀನು ಖರೀದಿಸಿ, ಅಲ್ಲೊಂದು ಫಾರ್ಮಹೌಸ್ ಕಟ್ಟುತ್ತಿದ್ದಾರೆ. ಸದ್ಯ ಬಿಟೌನ್ ನಲ್ಲಿ ಈ ಮನೆಯದ್ದೇ ಸದ್ದು. ಭಾರೀ ಮೊತ್ತ ಕೊಟ್ಟು ಖರೀದಿಸಿದ ಜಮೀನು ಬರೋಬ್ಬರಿ ಎಂಟು ಎಕರೆ ವಿಸ್ತೀರ್ಣ  ಹೊಂದಿದ್ದು, ಅಲ್ಲಿ ಬೃಹತ್ ಫಾರ್ಮಹೌಸ್ ತಲೆಯೆತ್ತಲಿದೆ. ಅದಕ್ಕಾಗಿ ನೂರು ಕೋಟಿಗೂ ಅಧಿಕ ಖರ್ಚು ಮಾಡಲಿದ್ದಾರಂತೆ ಅನುಷ್ಕಾ ದಂಪತಿ.

ಈ ಎಂಟು ಎಕರೆ ಜಮೀನಿನಲ್ಲಿ ನಿರ್ಮಿಸಲ್ಪಡುತ್ತಿರುವ ಫಾರ್ಮಹೌಸ್ ಇರುವುದು ಮುಂಬೈನ ಪ್ರತಿಷ್ಠಿತ ಏರಿಯಾ ಬಾಗ್ ಪ್ರದೇಶದಲ್ಲಿ ಎಂದು ವರದಿಯಾಗಿದೆ. ಅಲಿಬಾಗ್ ಪ್ರದೇಶದ ಜಿರಾದ್ ಎಂಬ ಗ್ರಾಮದಲ್ಲಿ ತಮ್ಮ ಕನಸಿನ ಫಾರ್ಮಹೌಸ್ ಕಟ್ಟಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ವಾರಾಂತ್ಯಕ್ಕೆ ಕಳೆಯುವುದಕ್ಕಾಗಿ ಅವರು ಈ ಫಾರ್ಮಹೌಸ್ ಗೆ ಕೋಟಿ ಕೋಟಿ ಸುರಿಯುತ್ತಿದ್ದಾರೆ. ಹಾಗಾಗಿ ದುಡ್ಡಿದ್ದೋರು ದುನಿಯಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಧ್ರುವ ಸರ್ಜಾ

ಹೆಂಡತಿಗೆ ಗಣಶೋತ್ಸವದ ಉಡುಗೊರೆಯಾಗಿ ಈ ಜಮೀನನನ್ನು ವಿರಾಟ್ ಕೊಟ್ಟಿದ್ದು, ಗಣೇಶ ಚತುರ್ಥಿಯ ಒಂದು ದಿನ ಮುಂಚೆಯೇ ಅದನ್ನು ಖರೀದಿಸಲಾಗಿದೆ. ವಿರಾಟ್ ಸದ್ಯ ದುಬೈನಲ್ಲಿದ್ದರೂ, ರಿಯಲ್ ಎಸ್ಟೇಟ್ ಕಂಪನಿಯ ಈ ವಹಿವಾಟಿನ ಉಸ್ತುವಾರಿ ವಹಿಸಿದೆಯಂತೆ. ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕೂಡ ಇದೇ ಏರಿಯಾದಲ್ಲೇ ಮನೆ ಹೊಂದಿದ್ದು, ಮತ್ತೊಬ್ಬ ಕ್ರಿಕೆಟಿಗ ಅದೇ ಏರಿಯಾದಲ್ಲಿ ಜಮೀನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

Live Tv

Leave a Reply

Your email address will not be published.

Back to top button