ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಏನೂ ಇಲ್ಲ ಅನ್ನುವ ಸುದ್ದಿಯ ನಡುವೆಯೇ ಮತ್ತೊಂದು ಹೊಸ ಸುದ್ದಿಯನ್ನು ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಒಂದೂವರೆ ವರ್ಷದಿಂದ ಈ ಲವ್ ಗೆ ಬ್ರೇಕ್ ಅಪ್ ಆಗಿದೆ ಎನ್ನುವ ಮಾತಿದೆ. ಆದರೂ, ರಶ್ಮಿಕಾ ಅವರು ವಿಜಯ್ ದೇವರಕೊಂಡ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಜೀವನದ ಪ್ರಮುಖ ವ್ಯಕ್ತಿಗಳು ಹೆಸರಿನಲ್ಲಿ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ರಶ್ಮಿಕಾ, ಆ ಫೋಟೋಗಳಲ್ಲಿ ವಿಜಯ್ ದೇವರಕೊಂಡ ಕೂಡ ಇದ್ದಾರೆ. ಅಲ್ಲದೇ, ತನ್ನ ಬದುಕಿಗೆ ಮೆಟ್ಟಿಲಾದವರು ಇವರು ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇಂದು ಅವರು ಸಿನಿಮಾ ರಂಗಕ್ಕೆ ಬರಲು ಕನ್ನಡದ ನಟರೊಬ್ಬರು ಕಾರಣ. ಆದರೆ, ಆ ನಟರ ಒಂದೇ ಒಂದು ಫೋಟೋ ಕೂಡ ಅಲ್ಲಿಲ್ಲ. ಇದನ್ನೂ ಓದಿ: ಮೈ ತುಂಬಾ ಬಟ್ಟೆ ಹಾಕು ಅಂದಿದ್ದಕ್ಕೆ, ಉರ್ಫಿಗೆ ಬಂತು ಜ್ವರ
ದೇವರಕೊಂಡ ಜೊತೆ ಇರುವಂತಹ ಫೋಟೋವನ್ನು ರಶ್ಮಿಕಾ ಅಪ್ ಲೋಡ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಮತ್ತೆ ಕುತೂಹಲದಿಂದ ಕಾಮೆಂಟ್ ಮಾಡಿದ್ದಾರೆ. ಲವ್ ಬ್ರೇಕ್ ಅಪ್ ಅಂತ ಹೇಳಿದ್ದವರು, ಇದೇನಿದು ಹೊಸ ಆಟ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಂದು ನಿಮ್ಮನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ನಟರನ್ನೇ ಮರೆತಿದ್ದೀರಿ ಎಂದೂ ಕಾಮೆಂಟ್ ಮಾಡಿದ್ದಾರೆ.