BollywoodCinemaLatestMain PostTV Shows

ಮೈ ತುಂಬಾ ಬಟ್ಟೆ ಹಾಕು ಅಂದಿದ್ದಕ್ಕೆ, ಉರ್ಫಿಗೆ ಬಂತು ಜ್ವರ

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಚಾಹತ್ ಖನ್ನಾ ಇತ್ತೀಚೆಗಷ್ಟೇ ಉರ್ಫಿ ಉಡುಗೆ ಬಗ್ಗೆ ಕಾಮೆಂಟ್ ಮಾಡಿದ್ದರು. ಇವರಿಬ್ಬರ ಜಟಾಪಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಈಗ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದಾ ಬೋಲ್ಡ್ ಫೋಟೋಶೂಟ್ ವಿಚಾರವಾಗಿ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ ಈಗ ತಮ್ಮ ವೈಯಕ್ತಿಕ ವಿಚಾರವಾಗಿ ಸಖತ್ ಸೌಂಡ್ ಮಾಡ್ತಿದ್ದಾರೆ. ಬಟ್ಟೆ ಇಲ್ಲದೇ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದರು. ನಟಿಯ ಈ ಲುಕ್ ಸಾಕಷ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಚಾರವಾಗಿ ನಟಿ ಚಾಹತ್ ಖನ್ನಾ ಕೂಡ ಧ್ವನಿ ಎತ್ತಿದ್ದರು. ಉರ್ಫಿಗೆ ಶೇಮ್ ಶೇಮ್ ಎಂದಿದ್ದರು. ಉಡುಗೆ ವಿಚಾರವಾಗಿ ನಟಿಗೆ ಚಾಹತ್ ಕ್ಲಾಸ್ ತೆಗೆದುಕೊಂಡಿದ್ದ ಬೆನ್ನಲ್ಲೇ ಈಗ ಉರ್ಫಿ ಆಸ್ಪತ್ರೆ ದಾಖಲಾಗಿದ್ದಾರೆ. ಇದನ್ನೂ ಓದಿ:ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಬಿಗ್ ಬಾಸ್‌ನಲ್ಲಿ ಸೋನು ಗೌಡ ಬೋಲ್ಡ್ ಮಾತು

ಉರ್ಫಿ ಜಾವೇದ್ ಜ್ವರದಿಂದ ಬಳಲುತ್ತಿದ್ದಾರೆ. 104 ಡಿಗ್ರಿಯಷ್ಟು ಜ್ವರವಿದ್ದು, ಮುಂಬೈನ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನಟಿ ಉರ್ಫಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಸದಾ ತಮ್ಮ ಬೋಲ್ಡ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದ ನಟಿಗೆ ಬೇಗ ಹುಷಾರಿಗಿ ಬನ್ನಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

Live Tv

Leave a Reply

Your email address will not be published.

Back to top button