ಹೆಸರಾಂತ ನಟ ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ಅನೇಕ ತಾರೆಯರು ವಿಶ್ ಮಾಡಿದ್ದಾರೆ. ಅದರಲ್ಲೂ ಸಮಂತಾ ಬರ್ತಡೇ ಪಾರ್ಟಿಯಲ್ಲೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೀರ್ತಿ ಸುರೇಶ್, ಸಾಯಿ ಪಲ್ಲವಿ ಸೇರಿದಂತೆ ಸಾಲು ಸಾಲು ನಟ ನಟಿಯರು ವಿಜಯ್ ಗೆ ನಾನಾ ರೀತಿಯಲ್ಲಿ ಶುಭಾಶಯ ಹೇಳಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ಈವರೆಗೂ ವಿಶ್ ಮಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಶ್ವಾನ ನಿಧನ
Advertisement
ಹೊಸ ವರ್ಷವನ್ನು ಗೋವಾದಲ್ಲಿ ಒಟ್ಟಿಗೆ ಆಚರಿಸಿದವರು, ಅನೇಕ ಬಾರಿ ತಡರಾತ್ರಿ ಹೊಟೆಲ್ ನಲ್ಲಿ ಕಾಣಿಸಿಕೊಂಡವರು ಏಕಾಏಕಿ ಹುಟ್ಟು ಹಬ್ಬದ ದಿನದಂದು ರಶ್ಮಿಕಾ ಮೌನವಹಿಸಿದ್ದು ಯಾಕೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಎತ್ತಿದ್ದಾರೆ. ತಮ್ಮೊಂದಿಗೆ ನಟಿಸಿದ ನಟ ನಟಿಯರಿಗೆ ವಿಶ್ ಮಾಡುವ ರಶ್ಮಿಕಾ ಮಂದಣ್ಣ, ತಮ್ಮ ಕನಸಿನ ಹುಡುಗನಿಗೆ ಶುಭಾಶಯ ಹೇಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
Advertisement
Advertisement
ತಮ್ಮ ಮಧ್ಯೆ ಅಂಥದ್ದು ಏನೂ ಇಲ್ಲ ಎಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಹೇಳುತ್ತಾ ಬಂದರೂ, ಅವರ ನಡೆ ಮಾತ್ರ ಯಾವಾಗಲೂ ಅನುಮಾನ ಮೂಡಿಸುತ್ತಿತ್ತು. ಹಾಗಾಗಿ ಇಬ್ಬರೂ ಡೇಟ್ ಮಾಡುತ್ತಿದ್ದಾರೆ, ಇನ್ನೇನು ಮದುವೆನೂ ಆಗುತ್ತಾರೆ ಎನ್ನುವಲ್ಲಿಗೆ ಗಾಸಿಪ್ ಗಳು ಸಿನಿಮಾ ರಂಗದಲ್ಲಿ ತೇಲಿ ಬಂದವು. ಈ ಕುರಿತಾಗಿ ಜೋಡಿಯು ಗರಂ ಆಗಿಯೂ, ತಮ್ಮದೇ ಆದ ರೀತಿಯಲ್ಲೂ ಉತ್ತರಿಸುತ್ತಾ ಬಂತು. ಪುಷ್ಪಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ ಎನ್ನುವ ಮಾತೂ ಇದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ
Advertisement
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದರೆ ಮಾತ್ರ ಶುಭಾಶಯ ಹೇಳಿದಂತೆಯೇ? ಇಬ್ಬರೂ ಒಟ್ಟಾಗಿಯೇ ಹುಟ್ಟು ಹಬ್ಬ ಆಚರಿಸಿರಬಹುದು ಎಂದೂ ಕೆಲ ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಅವರಿಬ್ಬರ ಮಧ್ಯೆ ಅಂಥದ್ದೇನೂ ಆಗಿಲ್ಲ. ಅವರು ಚೆನ್ನಾಗಿಯೇ ಇದ್ದಾರೆ ಎಂದು ಆಪ್ತ ವಲಯಗಳು ಖಚಿತ ಪಡಿಸಿವೆ.