ನವದೆಹಲಿ: ಕ್ರಿಕೆಟ್ ಫೀಲ್ಡಲ್ಲಿ ಕಪಿಲ್ ದೇವ್ ಹೆಸರು ಕೇಳದವರಿಲ್ಲ. ಕ್ರಿಕೆಟ್‍ನಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್. ಅವರಂತೆ ತಾನೂ ಆಗಬೇಕು ಅಂತ ಹೊರಟಿದ್ದ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅವರಿಗೆ ಏನೇನು ಕಸರತ್ತು ಮಾಡಿದ್ರು ನಿಮಗೆ ಗೊತ್ತಾ?
ಕಪಿಲ್ ದೇವ್ ಆಗಲು ಹೊರಟಿದ್ದ ರಣವೀರ್ ಸಿಂಗ್, ಸತತ ಆರು ತಿಂಗಳಿಂದ ನಿತ್ಯ 4 ಗಂಟೆ ಕ್ರಿಕೆಟ್ ಅಭ್ಯಾಸ ಮಾಡಿದ್ರಂತೆ. ಅಷ್ಟೇ ಅಲ್ಲ ಕ್ರೀಡಾಪಟುವಂತೆ ದೈಹಿಕ ಸಮತೋಲನ ಕಾಪಾಡಲು ಪ್ರತಿದಿನ 2 ಗಂಟೆ ಫಿಸಿಕಲ್ ಕಂಡೀಷನಿಂಗ್ ಕೂಡ ಮಾಡ್ತಿದ್ದರು. ಪ್ರಾಕ್ಟಿಸ್ ವೇಳೆ ಹಲವು ಬಾರಿ ಗಾಯ ಕೂಡ ಮಾಡಿಕೊಂಡಿದ್ದರು. ಇದನ್ನೂ ಓದಿ: ಸೆಕ್ಸಿ ಆಗಿರೋದು ಮಾತ್ರ ನೆಕ್ಸ್ಟ್ ಲೆವೆಲ್ ಹಾರ್ಡ್ ವರ್ಕ್: ಸಮಂತಾ
ಕಪಿಲ್ ದೇವ್ ಥರ ಆಗೋದು ಅಷ್ಟು ಸುಲಭದ ಮಾತಲ್ಲ. ಅವರ ಬೌಲಿಂಗ್, ಬ್ಯಾಟಿಂಗ್ ಶೈಲಿಯನ್ನು ಸಿನಿಮಾದಲ್ಲಿ ಇಫೆಕ್ಟಿವ್ ಆಗಿ ಕೊಡ್ಬೇಕು ಅಂತ ಸಾಕಷ್ಟು ಪ್ರಾಕ್ಟಿಸ್‌ಗೆ ಸಾಕಷ್ಟು ಪರಿಶ್ರಮ ಹಾಕಿದ್ದೆ ಎಂದು ರಣವೀರ್ ಸಿಂಗ್ ಅನುಭವ ಹಂಚಿಕೊಂಡಿದ್ದಾರೆ.
1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವ ಕಪ್ ಗೆದ್ದಿತು. ಆ ರೋಮಾಂಚನಕಾರಿ ಸನ್ನಿವೇಶವನ್ನು ಮುಖ್ಯವಾಗಿಟ್ಟುಕೊಂಡು ನಿರ್ದೇಶಕ ಕಬೀರ್ ಖಾನ್ ʼ83ʼ ಅಂತ ಶೀರ್ಷಿಕೆಯಿಟ್ಟು ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ನಟ ರಣವೀರ್ ಸಿಂಗ್ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ಮೇಘನಾ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ – ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಖುಷ್
2018ರಲ್ಲಿ ತೆರೆ ಕಂಡ ಸಿಂಬಾ ಸಿನಿಮಾದಲ್ಲಿ ನಟಿಸಲು ರಣವೀರ್ ಸಿಂಗ್ ದಪ್ಪಗಿದ್ದರು. ಆದರೆ ʼ83ʼ ಸಿನಿಮಾದಲ್ಲಿ ನಟಿಸಬೇಕಾದರೆ ಅವರ ದೇಹದ ತೂಕ ಇಳಿಸಬೇಕಿತ್ತು. ನೀವು ತೂಕ ಇಳಿಸಬೇಕು, ಕ್ರೀಡಾಪಟುಗಳಂತೆ ದೈಹಿಕ ಸಮತೋಲನ ಸಾಧಿಸಬೇಕು ಎಂದು ರಣವೀರ್‌ಗೆ ಕ್ರಿಕೆಟ್ ತರಬೇತಿ ನೀಡುತ್ತಿರುವ ಕೋಚ್ ಸಲಹೆ ನೀಡಿದ್ದರು.
ಕ್ರಿಕೆಟ್ ಅಭ್ಯಾಸ ಅನುಭವ ಕುರಿತು ರಣವೀರ್ ಏನ್ ಹೇಳ್ತಾರೆ ಗೊತ್ತಾ?
ಕಪಿಲ್ ದೇವ್ ಅವರು ವಿಶಿಷ್ಟ ಬೌಲಿಂಗ್ ಶೈಲಿ ರೂಢಿಸಿಕೊಂಡಿದ್ದಾರೆ. ಆದ್ರೆ ನನ್ನ ದೇಹ ದಪ್ಪ ಮತ್ತು ಅವರಿಗಿಂತ ಭಿನ್ನ. ಅವರಂತೆ ಬೈಲಿಂಗ್ ಮಾಡಲು ನನ್ನ ಫಿಸಿಕಲ್ ಫಿಟ್ನೆಸ್ ಬದಲಾಗಬೇಕು ಅಂತ ಪ್ರತಿದಿನ ದೈಹಿಕ ಕಸರತ್ತು, ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದೆ ಎಂದು ರಣವೀರ್ ಹೇಳಿಕೊಂಡಿದ್ದಾರೆ.