ಹೈದರಾಬಾದ್: ಪುಷ್ಪ ಸಿನಿಮಾದಲ್ಲಿ ಸಮಂತಾ ಐಟಂ ಡಾನ್ಸ್ನಲ್ಲಿ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಸಮಂತಾ ಸೆಕ್ಸಿ ಅವತಾರಕ್ಕೆ ಅನೇಕರು ನಿಬ್ಬೆರಗಾಗಿದ್ದರು. ಈ ಬಗ್ಗೆ ಮೊದಲ ಬಾರಿಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಚೆನ್ನಾಗಿ ಅಭಿನಯಿಸಿದ್ದೇನೆ. ಕೆಟ್ಟದ್ದಾಗಿ ಅಭಿನಯಿಸಿದ್ದೇನೆ. ನಾನು ಕಾಮಿಡಿ, ಗಂಭೀರವಾಗಿವಾಗಿದ್ದಿರಬಹುದು. ಚಾಟ್ ಶೋವೊಂದರ ನಿರೂಪಕಿಯಾಗಿದ್ದೆ ಹೀಗೆ ಎಲ್ಲದನ್ನು ನಿಭಾಯಿಸಲು ನಾನು ತುಂಬ ಕಷ್ಟಪಟ್ಟಿದ್ದೇನೆ. ಆದರೆ ಸೆಕ್ಸಿ ಆಗಿರೋದು ಮಾತ್ರ ನೆಕ್ಸ್ಟ್ ಲೆವೆಲ್ ಹಾರ್ಡ್ ವರ್ಕ್. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ಬರೆದುಕೊಂಡು ಸಮಂತಾ ಪುಷ್ಪ ಸಾಂಗ್ನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಮಂತಾ ಕಾಮೆಂಟ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕ ಸೆಲೆಬ್ರಿಟಿಗಳು ಕೂಡ ಹೊಗಳಿಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ
View this post on Instagram
ಪುಷ್ಪ ಸಿನಿಮಾದ ಹಾಡಿಗೆ ಸಮಂತಾ ಭಾರೀ ಮೊತ್ತದ ಸಂಭಾವನೆ ಕೂಡ ಪಡೆದಿದ್ದಾರೆ ಎನ್ನಲಾಗಿದೆ. ಸಮಂತಾ ವೃತ್ತಿ ಜೀವನದಲ್ಲಿ ಮೊದಲ ಐಟಂ ಡ್ಯಾನ್ಸ್ ಎಂದರೆ ಅದು Oo Antava Oo Oo Antava.. ಹಾಡು ಬರ್ಜರಿಯಾಗಿ ಮೂಡಿ ಬಂದಿದೆ. ಈ ಹಾಡಿನ ಕುರಿತಾಗಿ ಪರ ವಿರೋಧಗಳ ಚರ್ಚೆಗಳು ಆಗಿವೆ. ಏನೇ ಆಗಲಿ ಸಮಂತಾ ಅವರಿಗೆ ಈ ಸಾಂಗ್ ಒಳ್ಳೆಯ ಹೆಸರು ತಂದು ಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದನ್ನೂ ಓದಿ: ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ: ಹೇಮಾಮಾಲಿನಿ