ಬಾಲಿವುಡ್ ಸ್ಟಾರ್ ನಟ ರಣ್‌ಬೀರ್ ಕಪೂರ್ ಸದ್ಯ `ಶಂಶೇರಾ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಆಲಿಯಾ ಜೊತೆಗಿನ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದಾರೆ. ಮದುವೆ, ಸಂಸಾರದ ಕುರಿತು ಆಲಿಯಾ ಇದ್ದ ಕನಸುಗಳ ಬಗ್ಗೆ ರಣ್‌ಬೀರ್ ಮಾತನಾಡಿದ್ದಾರೆ.

ರಣ್‌ಬೀರ್ ಮತ್ತು ಆಲಿಯಾ ಪ್ರೀತಿಸಿದ ಮೊದಲ ದಿನದಿಂದಲೂ ಮಕ್ಕಳನ್ನು ಹೊಂದುವ ವಿಚಾರವನ್ನು ಆಲಿಯಾ ಮಾತನಾಡುತ್ತಿದ್ದರು. ಆಲಿಯಾ ಮಕ್ಕಳನ್ನು ಹೊಂದುವ ಮನಸ್ಸಿದೆ. ಮದುವೆ, ಸಂಸಾರದ ಕುರಿತು ಆಸಕ್ತಿ ಇದೆ. ನಟನೆ ಮತ್ತು ಕುಟುಂಬ ಎರಡು ಸರಿದೂಗಿಸಿಕೊಂಡು ಹೋಗುವ ಗಟ್ಟಿತನ ಆಲಿಯಾಗೆ ಇದೆ ಎಂದು ರಣ್‌ಬೀರ್ ಕಪೂರ್ ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]


