ಡಾಲಿ ಧನಂಜಯ್ (Dolly Dhananjay) ಹುಟ್ಟು ಹಬ್ಬದ ದಿನದಂದು ಉತ್ತರಕಾಂಡ (Uttarkanda) ಸಿನಿಮಾ ಟೀಮ್ ಟೀಸರ್ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ಚಿತ್ರದ ನಾಯಕಿಯಾಗಿರುವ ರಮ್ಯಾ (Ramya) ಗೈರಾಗಿದ್ದರು. ಉತ್ತರಕಾಂಡ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮ್ಯಾ, ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಏಕೆ ಬರಲಿಲ್ಲ ಎನ್ನುವ ಪ್ರಶ್ನೆ ಮೂಡಿತ್ತು.
ಉತ್ತರಕಾಂಡ ಸಿನಿಮಾದ ಕೆಲಸ ದೃಶ್ಯಗಳು ಚಿತ್ರೀಕರಣವಾಗಿದ್ದರೂ, ಆ ಶೂಟಿಂಗ್ ನಲ್ಲಿ ಮತ್ತೋರ್ವ ನಾಯಕಿ ಸಪ್ತಮಿ ಗೌಡ (Saptami Gowda) ಮಾತ್ರ ಭಾಗಿಯಾಗಿದ್ದಾರೆ. ಹಾಗಾಗಿ ರಮ್ಯಾ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಿನಿಮಾದಿಂದ ಹೊರ ಬಂದ ಕಾರಣದಿಂದಾಗಿ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುವ ಮಾತೂ ಕೇಳಿ ಬಂದಿತ್ತು. ಆದರೆ, ಅಸಲಿ ಕಾರಣವೇ ಬೇರೆ ಇದೆ. ಇದನ್ನೂ ಓದಿ:ಕುಟುಂಬದೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್
ರಮ್ಯಾ ಸದ್ಯ ವಿದೇಶಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಫ್ರೆಂಡ್ಸ್ ಜೊತೆ ಸಮುದ್ರದ ಆಟದಲ್ಲಿ ವೇಳೆ ಕಳೆಯುತ್ತಿದ್ದಾರೆ. ಆ ವಿಡಿಯೋ ಮತ್ತು ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟೀಸರ್ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಕಾರಣ ತಾವು ವಿದೇಶದಲ್ಲಿ ಇರುವುದೇ ಆಗಿದೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.
ಉತ್ತರಕಾಂಡ ಸಿನಿಮಾದ ಟೀಸರ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದರೂ, ಆ ಟೀಸರ್ ನಲ್ಲಿ ನಾಯಕಿಯರು ಇರುವ ಕುರುಹು ಬಿಟ್ಟುಕೊಟ್ಟಿಲ್ಲ. ಆದರೆ, ಸಪ್ತಮಿ ಗೌಡ ಶೂಟಿಂಗ ನಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಧನಂಜಯ್ ಅವರಿಗೆ ವಿಶ್ ಮಾಡಿದ್ದರು.
Web Stories