‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ‘ಗೇಮ್ ಚೇಂಜರ್’ ಸಿನಿಮಾದ ಚಿತ್ರೀಕರಣದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದರು. ಈಗ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟು ಪತ್ನಿ ಉಪಾಸನಾ (Upasana) ಜೊತೆ ಪ್ಯಾರಿಸ್‌ಗೆ ಹೋಗಿ ಬಂದಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಸ್ನೇಹಿತರೊಬ್ಬರ ಮದುವೆಗೆ ರಾಮ್ ಚರಣ್- ಉಪಾಸನಾ ಪ್ಯಾರಿಸ್‌ಗೆ (Paris) ಹಾಜರಿ ಹಾಕಿದ್ದರು. ಐಫೆಲ್ ಟವರ್ ಮುಂದೆ ಔತಣಕೂಟ ಏರ್ಪಡಿಸಿದ್ದು, ಹೈಲೆಟ್ ಆಗಿದೆ. ಮದುವೆಯಲ್ಲಿ ಈ ಜೋಡಿ ಮಸ್ತ್ ಆಗಿ ಮಿಂಚಿದ್ದಾರೆ. ಸದ್ಯ ಸುಂದರ ಫೋಟೋಗಳು ವೈರಲ್ ಆಗುತ್ತಿವೆ. ಇದನ್ನೂ ಓದಿ:‘ರಣಹದ್ದು’ ಫಸ್ಟ್ ಲುಕ್ ರಿಲೀಸ್ ಮಾಡಿದ ಜಂಭದ ಹುಡುಗಿ
ಇತ್ತೀಚಿಗೆ ರಾಮ್ ಚರಣ್ ದಂಪತಿ ಮುದ್ದಾದ ಮಗಳನ್ನ ಬರಮಾಡಿಕೊಂಡಿದ್ದರು. ಕ್ಲಿನ್ ಕಾರ ಕೊನಿಡೆಲಾ ಎಂದು ಹೆಸರಿಟ್ಟಿದ್ದು, ಆಪ್ತರ ಸಮ್ಮುಖದಲ್ಲಿ ಸಿಂಪಲ್ ಆಗಿ ಮಗುವಿಗೆ ನಾಮಕರಣ ಮಾಡಿದ್ದರು.
ಗೇಮ್ ಚೇಂಜರ್ ಬಳಿಕ ಕನ್ನಡದ ಮಫ್ತಿ ಚಿತ್ರದ ನಿರ್ದೇಶಕ ನರ್ತನ್ (Narthan) ಜೊತೆ ರಾಮ್ ಚರಣ್ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.