Connect with us

Bollywood

ಪ್ರಿಯಾಂಕ ಬಳಿಕ ನಾನೇ ಹಾಲಿವುಡ್ ಸ್ಟಾರ್: ರಾಖಿ ಸಾವಂತ್

Published

on

-ಬಕ್ವಾಸ್ ಮಾತಾಡೋದು ಬಿಟ್ಟು ಹಾರ್ದಿಕ್ ದೇಶಕ್ಕಾಗಿ ಆಡಲಿ

ಮುಂಬೈ: ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಬಾಲಿವುಡ್ ಬಳಿಕ ಹಾಲಿವುಡ್ ನಲ್ಲಿಯೂ ದೊಡ್ಡ ಮಟ್ಟದ ಹೆಸರು ಮಾಡುತ್ತಿದ್ದಾರೆ. ನಾನು ಸಹ ಬಾಲಿವುಡ್, ಟಾಲಿವುಡ್ ದೇಶದ ಎಲ್ಲ ಭಾಷೆಗಳಲ್ಲಿಯೂ ನಟಿಸಿದ್ದೇನೆ. ಹಾಲಿವುಡ್ ನನಗೆ ಸೂಕ್ತವಾದ ಸ್ಥಳ. ಪ್ರಿಯಾಂಕ ಚೋಪ್ರಾ ಬಳಿಕ ನಾನೇ ಹಾಲಿವುಡ್ ನಲ್ಲಿ ಧಮಾಲ್ ಮಾಡಲಿದ್ದೇನೆ ಎಂದು ಡ್ರಾಮಾ ಕ್ವೀನ್ ರಾಖಿ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ‘ಭಾರತ್’ ಸಿನಿಮಾ ನೋಡಿ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ರಾಖಿ ಸಾವಂತ್, ಎಲ್ಲ ಆಟಗಾರರು ದೇಶಕ್ಕಾಗಿ ಆಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಸಹ ಬಕ್ವಾಸ್ ಮಾತನಾಡೋದನ್ನು ಬಿಟ್ಟು ದೇಶಕ್ಕಾಗಿ ಚೆನ್ನಾಗಿ ಆಡಲಿ. ನಿರ್ದೇಶಕ ಕರಣ್ ಜೋಹರ್ ನಿರೂಪಣೆಯ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದ್ದರು. ಮನಸ್ಸಿಗೆ ತೋಚಿದಂತೆ ಮಾತನಾಡದೇ ಚೆನ್ನಾಗಿ ಕ್ರಿಕೆಟ್ ಆಡಲಿ. ತಂಡದ ನಾಯಕ ವಿರಾಟ್ ಕೊಹ್ಲಿ ನನ್ನ ಮೆಚ್ಚಿನ ಆಟಗಾರ ಎಂದು ತಿಳಿಸಿದರು.

ಸಲ್ಮಾನ್ ಖಾನ್ ಅಭಿನಯದ ‘ಭಾರತ್’ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಸುಮಾರು 200 ರಿಂದ 250 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು, 1 ಸಾವಿರ ಕೋಟಿ ರೂ. ಗಳಿಸುವ ಸಿನಿಮಾ ಇದಾಗಿದೆ. ಕೆಲ ಪ್ರೇಕ್ಷಕರು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳ್ತಾ ಇರೋದು ಯಾಕೆ ಎಂದು ಗೊತ್ತಾಗುತ್ತಿಲ್ಲ. ಈ ಹಿಂದೆ ಶಾರೂಖ್ ಖಾನ್ ಅಭಿನಯದ ‘ಝೀರೋ’ ಸಿನಿಮಾವನ್ನು ತಿರಸ್ಕರಿಸಿದ್ದು ಯಾಕೆ ಅಂತ ಗೊತ್ತಿಲ್ಲ ಎಂದರು.

Click to comment

Leave a Reply

Your email address will not be published. Required fields are marked *