16 ವರ್ಷಗಳ ಹಿಂದೆ ನಡೆಸಿದ್ದ ಟಿವಿ ಕಾರ್ಯಕ್ರಮದಿಂದ ಬಾಲಿವುಡ್ನ ವಿವಾದಾತ್ಮಕ ನಟಿ ಎಂದೇ ಫೇಮಸ್ ಆದ ರಾಖಿ ಸಾವಂತ್ಗೆ (Rakhi Sawant) ಕಾನೂನು ಸಂಕಷ್ಟ ಎದುರಾಗಿದೆ.
2010ರಲ್ಲಿ ನಟಿ ನಡೆಸಿದ್ದ ಟಿವಿ ಶೋನಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದ್ದ ರಾಖಿ ಸಾವಂತ್ ವಿರುದ್ಧ ಈಗ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.
2010ರಲ್ಲಿ ನಿರೂಪಿಸಿದ್ದ ‘ರಾಖಿ ಕಾ ಇನ್ಸಾಫ್’ (Rakhi Ka Insaaf) ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಯೊಬ್ಬರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಆರೋಪ ಮೇಲೆ ನಟಿ ರಾಖಿ ಸಾವಂತ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ಈ ಪ್ರಕರಣ ಸಂಬಂಧಿ ಸಾವಂತ್ ನ್ಯಾಯಾಲಯಕ್ಕೆ ಹಾಜರಾಗಲು ಪದೇ ಪದೇ ನಿರಾಕರಿಸಿದ್ದರಿಂದ ಉತ್ತರ ಪ್ರದೇಶದ ಝಾನ್ಸಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಡಿ.1ರೊಳಗೆ ಸಾವಂತ್ ಅವರನ್ನು ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.
2010ರ ಆತ್ಮಹತ್ಯೆ ಪ್ರಕರಣ
ಈ ಪ್ರಕರಣವು ಝಾನ್ಸಿಯ ಪ್ರೇಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹನ್ಸಾರಿ ಪ್ರದೇಶದ ನಿವಾಸಿ ಲಕ್ಷ್ಮಣ್ ಅಹಿರ್ವರ್ ಅವರಿಗೆ ಸಂಬಂಧಿಸಿದೆ. ಈ ವ್ಯಕ್ತಿ ಸಾವಂತ್ ತಮ್ಮ ಟಿವಿ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ, ನಟಿಯ ಹೇಳಿಕೆಗಳಿಂದ ಅವಮಾನಕ್ಕೊಳಗಾಗಿ ನ. 10, 2010 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದೆ.
ಸಾವಂತ್ ಖಾಸಗಿ ಟೆಲಿವಿಷನ್ ಚಾನೆಲ್ನಲ್ಲಿ ನಡೆಸಿಕೊಡುತ್ತಿದ್ದ ʻರಾಖಿ ಕಾ ಇನ್ಸಾಫ್ʼ ಕಾರ್ಯಕ್ರಮದಲ್ಲಿ ಕುಟುಂಬಗಳ ನಡುವಿನ ವಿವಾದಗಳನ್ನು ಬಗೆಹರಿಸಲಾಗುತ್ತಿತ್ತು. ಅಹಿರ್ವರ್ ಮತ್ತು ಪತ್ನಿ ಅನಿತಾ ಅವರ ನಡುವಿನ ವೈವಾಹಿಕ ಭಿನ್ನಾಭಿಪ್ರಾಯ ಬಗೆಹರಿಸಲು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ದಂಪತಿಗಳ ನಡುವಿನ ವಿವಾದಗಳ ನಂತರ ಅನಿತಾ ತನ್ನ ಪೋಷಕರ ಮನೆಗೆ ಮರಳಿದ್ದರು. ನಂತರ ಈ ಎಪಿಸೋಡ್ ಟೀವಿಯಲ್ಲಿ ಪ್ರಸಾರವಾಯಿತು.
ಕೆಲವು ದಿನಗಳ ನಂತರ ಕಾರ್ಯಕ್ರಮದಲ್ಲಿ ಸಾವಂತ್ ತಮ್ಮ ಮಗನ ವಿರುದ್ಧ ಅವಮಾನಕರ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ. ಈ ಹೇಳಿಕೆಗಳಿಂದ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಅಹಿರ್ವರ್ ಅವರ ತಾಯಿ ಸಾವಿತ್ರಿ ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಅಯ್ಯನ ಮನೆಯ ನಿಗೂಢ ಲೋಕ : ಖುಷಿ ರವಿ, ಅಕ್ಷಯ್ ನಟನೆ
ಘಟನೆಯ ನಂತರ, ಪೊಲೀಸರು ಸಾವಂತ್ ಮತ್ತು ಕಾರ್ಯಕ್ರಮದ ನಿರ್ಮಾಣ ತಂಡದ ಇತರ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದರು. ತನಿಖೆಯ ನಂತರ, ಸಾವಂತ್ ಮತ್ತು ಇತರ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು.ಇದನ್ನೂ ಓದಿ: ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ – ಮಂಗಳೂರಿನ ಚರ್ಚ್ ಪಾದ್ರಿ ಅರೆಸ್ಟ್
