ಮಂಗಳೂರು/ಹಾಸನ: ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ಚರ್ಚ್ ಪಾದ್ರಿಯನ್ನು (Church Priest) ಪಾಂಡೇಶ್ವರ ಠಾಣೆಯ ಪೊಲೀಸರು ಸಕಲೇಶಪುರದಲ್ಲಿ (Sakaleshpur) ಬಂಧಿಸಿದ್ದಾರೆ.
ಮಂಗಳೂರಿನ (Mangaluru) ವೆಲೆನ್ಸಿಯಾ ಚರ್ಚ್ನ ಫಾದರ್ ಸಿಪ್ರಿಯನ್ ಪಿಂಟೋ ಬಂಧಿತ ಆರೋಪಿ. ಈತ ಪ್ರಾರ್ಥನೆಗೆ ಹೋದ ಸಂಧರ್ಭದಲ್ಲಿ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಬ್ಬರು ಮಕ್ಕಳು ಪೋಷಕರ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಪೋಕ್ಸೋ (POCSO Case) ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಇದನ್ನೂ ಓದಿ: ಗರ್ಬಾ ನೃತ್ಯದಿಂದ ಬಾಲಕಿಯನ್ನು ಹೊರಗೆ ತಳ್ಳಿದ ಬಿಜೆಪಿ ನಾಯಕ – ಪೋಕ್ಸೋ ಪ್ರಕರಣ ದಾಖಲು
ಸಕಲೇಶಪುರದ ಸಂಬಂಧಿ ಮನೆಯಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಈತನಿಗಾಗಿ ಬೆಂಗಳೂರಿನ ಹಲವೆಡೆ ಪೊಲೀಸರು ಹುಡುಕಾಟ ನಡೆಸಿದ್ದರು. ಆರೋಪಿ ಚರ್ಚ್ಗೆ ಬರುವ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: Video Viral | ಬಿಹಾರದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ – ಒಂದೇ ವಾರದಲ್ಲಿ 3ನೇ ಕೇಸ್
