ರಾಜಮೌಳಿ ಚಿತ್ರದಲ್ಲಿ 8 ಗೆಟಪ್‌ನಲ್ಲಿ ಕಾಣಿಸಿಕೊಳ್ತಾರೆ ಪ್ರಿನ್ಸ್

Public TV
1 Min Read
FotoJet 6 5

ಸ್ಟಾರ್ ಡೈರೆಕ್ಟರ್ ರಾಜಮೌಳಿ, ಪ್ರಿನ್ಸ್ ಮಹೇಶ್ ಬಾಬು (Mahesh Babu) ಹೊಸ ಯುದ್ಧಕ್ಕೆ ಸಜ್ಜಾಗುತ್ತಿದ್ದಾರೆ. ಇಷ್ಟು ವರ್ಷ ರಾಜಮೌಳಿ (Rajamouli) ಮಾಡಿದ ಸಿನಿಮಾಗಳದ್ದು ಒಂದು ತೂಕ. ಈಗ ಹೊಸ ಹಿಸ್ಟರಿ ಕ್ರಿಯೇಟ್ ಮಾಡಲು ಹೊರಟಿದ್ದಾರೆ. ಅದಕ್ಕೆ ಕಾರಣ ಹಲವಾರಿವೆ. ಅದರಲ್ಲಿ ಕೆಲವು ಮಾತ್ರ ಹೊರ ಬಿದ್ದಿವೆ. ಚಿತ್ರದಲ್ಲಿ ಹೀರೋ ಲುಕ್ ಹೇಗಿರಲಿದೆ. ಎಲ್ಲೆಲ್ಲಿ ಶೂಟಿಂಗ್ ನಡೆಸಲಿದೆ? ಎಷ್ಟು ಕೋಟಿ ಸುರಿಯಲಿದ್ದಾರೆ ಈ ಚಿತ್ರಕ್ಕೆ? ಇಲ್ಲಿದೆ ಮಾಹಿತಿ.

mahesh babu

ರಾಜಮೌಳಿ ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿಲ್ಲ. ಅದನ್ನು ದಾಟಿ ಹೋಗಲಿದ್ದಾರೆ. ಇದು ಗ್ಲೋಬಲ್ ಸಿನಿಮಾ. ಬರೀ ಭಾರತೀಯ ಭಾಷೆಗಳಲ್ಲಿ ಮಾತ್ರ ಅಲ್ಲ. ಇಂಗ್ಲಿಷ್ ಹಾಗೂ ಇತರ ದೇಶದ ಭಾಷೆಗೂ ಡಬ್ ಆಗಲಿದೆ. ಅಲ್ಲಿಗೆ ಜಕ್ಕಣ್ಣನ ಸವಾರಿ ಸಪ್ತಸಾಗರ ದಾಟಿ ಹೊಸ ಹಬ್ಬ ಮಾಡಲಿದೆ. ಇದನ್ನೂ ಓದಿ:ಶರಣ್ ನಟನೆಯ ‘ಛೂ ಮಂತರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

mahesh babu 1

ಅದಕ್ಕೆ ಸಾಕ್ಷಿಯಾಗಿ ಸಿಕ್ಕಿದೆ ಈ ಸುದ್ದಿ. ಹೆಚ್ಚು ಕಮ್ಮಿ ಇಪ್ಪತ್ತು ದೇಶಗಳಲ್ಲಿ ಇದರ ಶೂಟಿಂಗ್ ನಡೆಯಲಿದೆ. ಬಹುತೇಕ ಕಾಡಿನಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅದಷ್ಟೇ ಅಲ್ಲ, 8 ಗೆಟಪ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪಾತ್ರ ಹೀಗೆ ಬರಬೇಕು ಅದಕ್ಕೆ ಏನೆಲ್ಲಾ ಮಾಡಬೇಕೋ ಅದರ ತಯಾರಿಯಲ್ಲಿದ್ದಾರೆ. ಅದು ಎಲ್ಲೆಲ್ಲಿ ಎನ್ನುವುದು ನಿಗೂಢ. ಹೀಗಾಗಿ ಮಹೇಶ್ ಬಾಬು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹೇಗಿರಲಿದೆಯೋ ರುಸ್ತುಂ ಜೋಡಿ ಬೆಳ್ಳಿತೆರೆ?

ಇನ್ನೇನು ಮುಂದಿನ ತಿಂಗಳಲ್ಲಿ ಮುಹೂರ್ತ ನಡೆಸಲಿದೆ. ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಅದಕ್ಕೆ ಏನೇನು ಮಸಾಲೆ ಬೇಕು ರಾಜಮೌಳಿ ತುಂಬಿದ್ದಾರೆ. ಭರ್ತಿ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟು ಕೋಟಿ ಖರ್ಚು ಮಾಡುತ್ತಿರುವುದು ಇದೇ ಮೊದಲು. ಗ್ಲೋಬಲ್ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಇದೆ. ಇದರಲ್ಲಿ ಹೀರೋ ಬಿಟ್ಟರೆ ಇನ್ಯಾರ ಹೆಸರೂ ಗೊತ್ತಾಗಿಲ್ಲ. ಅದಕ್ಕೂ ಅಂತಿಮ ತೆರೆ ಬೀಳುವ ದಿನ ದೂರ ಇಲ್ಲ. ಪ್ರಿನ್ಸ್ ಈ ಸಿನಿಮಾದಿಂದ ಇನ್ನೆಲ್ಲಿಗೆ ಹೋಗಿ ಮುಟ್ಟುತ್ತಾರೊ? ಏನಾಗಲಿದೆಯೋ? ಎಲ್ಲವೂ ಸಿನಿಮಾ ತೆರೆ ಕಂಡ ನಂತರ ಗೊತ್ತಾಗಲಿದೆ.

Share This Article