ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಅತ್ಯಾಚಾರಿಗಳ ರಕ್ಷಕ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಟೀಕಿಸಿದ್ದಾರೆ.
ಲೋಕಸಭೆಯ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯು ಅತ್ಯಾಚಾರಿಗಳನ್ನು ಬೆಂಬಲಿಸುವ ವ್ಯಕ್ತಿಯನ್ನು ಈ ಹುದ್ದೆಯಲ್ಲಿ ತಂದುಕೂರಿಸಿದೆ. ಅತ್ಯಾಚಾರಿಗಳಿಗೆ ರಕ್ಷಣೆ ಬೇಕು ಎಂದು ಹೇಳುವವನಿಗಿಂತ ಕೆಟ್ಟ ವ್ಯಕ್ತಿ ಇನ್ನೊಬ್ಬನಿರಲು ಸಾಧ್ಯವಿಲ್ಲ. ಅಂತಹ ವ್ಯಕ್ತಿ ಇಂದು ಭಾರತದ ಶಿಕ್ಷಣ ಸಚಿವನಾಗಿದ್ದಾರೆ ಎಂದು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಬಿಡುಗಡೆಯಾಗಿದ್ದನ್ನು ಸಮರ್ಥಿಸಿಕೊಂಡಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಇಲಾಖೆಯಂತಹ ಜವಾಬ್ದಾರಿಯುತ ಖಾತೆಯನ್ನು ನೀಡಬಾರದಿತ್ತು. ಅವರ ಸಚಿವಂಪುಟದಲ್ಲಿ ಎಷ್ಟೋ ಜನರಿದ್ದರು, ಅವರಲ್ಲಿ ಯಾರನ್ನಾದರೂ ಶಿಕ್ಷಣ ಸಚಿವರನ್ನಾಗಿ ಮಾಡಬಹುದಿತ್ತು. ಆದರೆ ಅತ್ಯಾಚಾರಿಗಳನ್ನು ರಕ್ಷಿಸುವ ವ್ಯಕ್ತಿಯನ್ನೇ ಪ್ರಧಾನಿ ಆಯ್ಕೆ ಮಾಡಿದ್ದಾರೆ ಎಂದು ದೂರಿದರು.
#WATCH | Delhi: Lok Sabha LoP Rahul Gandhi says, “Education Minister of India – the BJP puts a man who is a defender of rapists. That is the most filthy type of man. There can be no flithier man than somebody who says that rapists need protection. That is the Education Minister… pic.twitter.com/7YXzD79lIR
— ANI (@ANI) July 28, 2026
ರಾಹುಲ್ ಗಾಂಧಿಗಿಂತ ಮೊದಲು ಸಹೋದರಿ ಪ್ರಿಯಾಂಕಾ ವಾದ್ರಾ ಈ ವಿಚಾರವನ್ನು ಪ್ರಸ್ತಾಪ ಮಾಡಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಅತ್ಯಾಚಾರಿಗಳ ಬಿಡುಗಡೆಯನ್ನು ಬೆಂಬಲಿಸಿದ್ದ ವ್ಯಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶಿಕ್ಷಣ ಸಚಿವರನ್ನಾಗಿ ನೇಮಿಸಿದ್ದಾರೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದರು.
ಅತ್ಯಾಚಾರಿಗಳ ಬಿಡುಗಡೆಯನ್ನು ಬೆಂಬಲಿಸಿದ್ದ ವ್ಯಕ್ತಿಯನ್ನು ನರೇಂದ್ರ ಮೋದಿ ಅವರು ದೇಶದ ಶಿಕ್ಷಣ ಸಚಿವರನ್ನಾಗಿ ನೇಮಿಸಿದ್ದಾರೆ. ಈ ಮೂಲಕ ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ಪ್ರಧಾನಿ ಏನು ಸಂದೇಶ ನೀಡುತ್ತಿದ್ದಾರೆ ಎಂದು ಪ್ರಿಯಾಂಕಾ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು.
VIDEO | Parliament: Speaking in the Lok Sabha, Congress MP Priyanka Gandhi Vadra says, “Prime Minister Modi chose a new Education Minister (Pralhad Joshi) and appointed a person to this position who had expressed support for the release of the rapists of a pregnant woman. What… pic.twitter.com/XYRzI7qEdQ
— Press Trust of India (@PTI_News) July 28, 2026
ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅವರ ಹೇಳಿಕೆಗಳನ್ನು ಸಂಸತ್ತಿನ ಕಡತಕ್ಕೆ ಸೇರಿಸಬಾರದು ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಕಿರಣ್ ರಿಜಿಜು ಮಾತನಾಡಿ, ಈ ರೀತಿಯ ಹೇಳಿಕೆಗಳು ವ್ಯಕ್ತಿತ್ವ ಹರಣಕ್ಕೆ ಸಮಾನವಾಗಿದ್ದು, ಸಂಸತ್ತಿನಲ್ಲಿ ಇಂತಹ ಭಾಷೆಯನ್ನು ಬಳಸಬಾರದು. ಪ್ರಿಯಾಂಕಾ ಗಾಂಧಿ ಅವರಿಂದ ಇಂತಹ ಭಾಷೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಹೀಗಾಗಿ ಅವರ ಈ ಆಕ್ಷೇಪಾರ್ಹ ಹೇಳಿಕೆಗಳನ್ನು ಲೋಕಸಭೆಯ ಅಧಿಕೃತ ದಾಖಲೆಗಳಿಂದ ತೆಗೆದುಹಾಕಬೇಕು ಎಂದು ರಿಜಿಜು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.
