ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಭಾರತಕ್ಕೆ (India) ಆಗಮಿಸುತ್ತಿದ್ದಾರೆ. ಗುರುವಾರ ಸಂಜೆಯ ವೇಳೆ ಪುಟಿನ್ ಅವರ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಲಿದೆ.
5 ಸ್ತರದ ರಕ್ಷಣಾ ವ್ಯವಸ್ಥೆಯೊಂದಿಗೆ ಪುಟಿನ್ 2 ದಿನಗಳ ಭಾರತದಲ್ಲಿ ತಂಗಲಿದ್ದಾರೆ. ಪುಟಿನ್ ಆಗಮನಕ್ಕೆ ಮೊದಲೇ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲು 50ಕ್ಕೂ ಹೆಚ್ಚು ರಷ್ಯಾದ ಭದ್ರತಾ ಸಿಬ್ಬಂದಿ ದೆಹಲಿಗೆ ಆಗಮಿಸಿದೆ.
ಐದು ಸ್ತರದ ರಕ್ಷಣೆ:
ಪುಟಿನ್ ಅವರ ಭದ್ರತೆಯ ಹೊಣೆ ಪ್ರೆಸಿಡೆನ್ಶಿಯಲ್ ಸೆಕ್ಯೂರಿಟಿ ಸರ್ವಿಸ್(SBP) ವಹಿಸಿಕೊಳ್ಳುತ್ತದೆ. ಈ ತಂಡದ ಸದಸ್ಯರು ಪುಟಿನ್ ಬಳಿಯೇ ಇರುತ್ತಾರೆ. ಇವರ ನಂತರ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಕಮಾಂಡೋಗಳು, ದೆಹಲಿ ಪೊಲೀಸರು ಇರಲಿದ್ದಾರೆ. ಪುಟಿನ್ ಮತ್ತು ಮೋದಿ (Narendra Modi) ಭೇಟಿ ವೇಳೆ ಮಾತ್ರ ಭಾರತದ ಎನ್‌ಎಸ್‌ಜಿ ಕಮಾಂಡೊಗಳು ರಷ್ಯಾ ಭದ್ರತಾ ಅಧಿಕಾರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪುಟಿನ್ ಮಲ, ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ ಅಂಗರಕ್ಷಕರು – ಯಾಕೆ ಗೊತ್ತಾ?
ಜಾಮರ್ ಮತ್ತು ಎಐ ಆಧಾರಿತ ತಂತ್ರಜ್ಞಾನದ ಅಳವಡಿಕೆ, ಮುಖ ಗುರುತು ಪತ್ತೆ ಕ್ಯಾಮರಾ ಸೇರಿ ಪುಟಿನ್ ಭದ್ರತೆಗೆ ಬೃಹತ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.
ಪುಟಿನ್ ಭದ್ರತೆಗೆ 35 ವರ್ಷದ ಒಳಗಿನ ಸಿಬ್ಬಂದಿಯನ್ನೇ ನಿಯೋಜಿಸಲಾಗುತ್ತದೆ. ಈ ಸಿಬ್ಬಂದಿ ಎತ್ತರ 5.8 ಅಡಿ ಎತ್ತರದಿಂದ 6.2 ಅಡಿ ಎತ್ತರ ಇರಬೇಕಾಗುತ್ತದೆ. ಪುಟಿನ್ ಸಂಚರಿಸುವ ಕಾರು ಔರಾಸ್ ಸೆನಾಟ್ ಮಾಸ್ಕೋದಿಂದ ದೆಹಲಿಗೆ ಬಂದಿದ್ದು ಇದು ಪಂಕ್ಚರ್ ಆದರೂ ಸರಾಗವಾಗಿ ಚಲಿಸುವಂತೆ ಅಭಿವೃದ್ಧಿಪಡಿಸಲಾಗಿದೆ.
ಭದ್ರತೆ ಹೇಗೆ ಇರಲಿದೆ?
ಪುಟಿನ್ ಪ್ರವೇಶಿಸಬಹುದಾದ ಪ್ರತಿಯೊಂದು ಕಟ್ಟಡವನ್ನು ರಷ್ಯಾದ ಭದ್ರತಾ ತಂಡ ಪರಿಶೀಲಿಸುತ್ತವೆ. ಪ್ರವೇಶದ್ವಾರಗಳು, ಛಾವಣಿಗಳು, ನೆಲಮಾಳಿಗೆಗಳು ಮತ್ತು ಸ್ಥಳಾಂತರಿಸುವ ಮಾರ್ಗಗಳನ್ನು ಮ್ಯಾಪಿಂಗ್ ಮಾಡುತ್ತವೆ. ಇದನ್ನೂ ಓದಿ: ಚೀನಾದಲ್ಲಿ ಪುಟಿನ್ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ
ಪುಟಿನ್ ಅವರ ಜೊತೆಯಲ್ಲೇ ಮಲವನ್ನು ತೆಗೆದುಕೊಂಡು ಹೋಗುವ ಒಂದು ಸಣ್ಣ ಸೂಟ್‌ಕೇಸ್ ಸಹ ಇರುತ್ತದೆ. ಇದರಿಂದ ಪುಟಿನ್ ಅವರ ಆರೋಗ್ಯದ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಸಹ ಸಿಗುವುದಿಲ್ಲ. ಪುಟಿನ್ ಹೋಟೆಲ್ ಊಟಗಳನ್ನು ಸೇವಿಸುವುದಿಲ್ಲ. ಬಾಣಸಿಗರ ತಂಡವೂ ಪುಟಿನ್ ಜೊತೆ ಪ್ರವಾಸ ಮಾಡುತ್ತದೆ.


