InternationalLatestLeading NewsMain Post

ಪುಟಿನ್‌ ಮಲ, ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ ಅಂಗರಕ್ಷಕರು – ಯಾಕೆ ಗೊತ್ತಾ?

- ಆರೋಗ್ಯದ ಗುಟ್ಟು ರಟ್ಟಾಗದಿರಲೆಂದು ರಷ್ಯಾ ಅಧ್ಯಕ್ಷರ ದೇಹದ ತ್ಯಾಜ್ಯಕ್ಕೂ ರಕ್ಷಣೆ!

ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯದ ಸುದ್ದಿ ಜಗತ್ತಿನ ಪ್ರಮುಖ ಚರ್ಚಾ ವಿಚಾರಗಳಲ್ಲಿ ಒಂದಾಗಿದೆ. ಪುಟಿನ್‌ ಆರೋಗ್ಯದ ವಿಚಾರವಾಗಿ ಹಲವು ಅಚ್ಚರಿದಾಯಕ ಅಂಶಗಳನ್ನು ವಿದೇಶಿ ಮಾಧ್ಯಮಗಳು ಬಹಿರಂಗಪಡಿಸುತ್ತಿವೆ.

ಪುಟಿನ್‌ ಆರೋಗ್ಯದ ವಿಚಾರವಾಗಿ ಫಾಕ್ಸ್‌ ಸುದ್ದಿ ಸಂಸ್ಥೆ ಈಚೆಗೆ ಅಚ್ಚರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಪುಟಿನ್‌ ಆರೋಗ್ಯದ ಗುಟ್ಟು ರಟ್ಟಾಗದಿರಲಿ ಎಂಬ ಕಾರಣಕ್ಕೆ ಅವರ ಮಲ, ಮೂತ್ರವನ್ನು ಅಂಗರಕ್ಷಕರೇ ಸಂಗ್ರಹಿಸಿ ಅದಕ್ಕೂ ರಕ್ಷಣೆ ನೀಡುತ್ತಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ. ಇದನ್ನೂ ಓದಿ: ಈ ದೇಶದಲ್ಲಿ ಸ್ಮಾರ್ಟ್‌ ಟಿವಿಗಿಂತ ಕಾಂಡೋಮ್ ಬೆಲೆ ದುಬಾರಿ – ಎಷ್ಟು ಅಂದ್ರೆ ನೀವು ಬೆಚ್ಚಿಬೀಳ್ತೀರಾ!

putin

ಬ್ರೀಫ್‌ಕೇಸ್‌ನಲ್ಲಿ ಮಲ, ಮೂತ್ರ ಸಂಗ್ರಹ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿದೇಶಿ ಪ್ರವಾಸದಲ್ಲಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯು ವಿದೇಶಿ ಗುಪ್ತಚರ ಸೇವೆಗಳ ಕೈಗೆ ಸಿಗುವ ಸಾಧ್ಯತೆಯ ಬಗ್ಗೆ ಪುಟಿನ್ ಭಯಪಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಮಲ, ಮೂತ್ರವನ್ನೂ ಅಂಗರಕ್ಷಕರು ಸಂಗ್ರಹಿಸಿ, ವಿಲೇವಾರಿಗೆ ಮಾಸ್ಕೋಗೆ ಸೂಟ್‌ಕೇಸ್‌ನಲ್ಲಿ ರವಾನಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪುಟಿನ್‌ ಅಧಿಕಾರದ ಬದಲಾವಣೆಗೆ ಸಂಬಂಧಿಸಿದ ಯಾವುದೇ ಅವ್ಯವಸ್ಥೆಯನ್ನು ತಡೆಯಲು ಮತ್ತು ಅನಿರ್ದಿಷ್ಟವಾಗಿ ರಷ್ಯಾವನ್ನು ಆಳುತ್ತಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಡಿಐಎ ಗುಪ್ತಚರ ಅಧಿಕಾರಿ ರೆಬೆಕಾ ಕಾಫ್ಲರ್ ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

ಪುಟಿನ್‌ ದೇಹದ ತ್ಯಾಜ್ಯವನ್ನು ವಿಶೇಷ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಅದನ್ನು ತವರಿಗೆ ಪ್ರಯಾಣಕ್ಕಾಗಿ ಮೀಸಲಾದ ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ಕುರಿತು ಎರಡು ಪುಸ್ತಕಗಳನ್ನು ಬರೆದಿರುವ ಲೇಖಕ ರೆಗಿಸ್ ಗೆಂಟೆ ಹಾಗೂ ಕಳೆದ ಒಂದು ದಶಕದಿಂದ ರಷ್ಯಾದಲ್ಲಿ ಬೀಡುಬಿಟ್ಟಿರುವ ಮಿಖಾಯಿಲ್ ರೂಬಿನ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಮಲವಿಸರ್ಜನೆಯ ಸಂಗ್ರಹದ ಬಗ್ಗೆ ಮಾಹಿತಿಯನ್ನು ಲೇಖಕರು ನೀಡಿದ್ದಾರೆ. ಪುಟಿನ್ ಅವರು 2017 ಮೇ 29ರಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗ ಹಾಗೂ 2019ರ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾಗ ಹೀಗೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಕ್ಷಿಗಳಿಗೆ ಆಹಾರವಿಡುವ ಟ್ರೇ ಹೊಂದಿದ್ದಕ್ಕೆ 3 ವಾರದಲ್ಲಿ 3 ಬಾರಿ ವ್ಯಕ್ತಿ ಅರೆಸ್ಟ್

ಉಕ್ರೇನ್‌ ವಿರುದ್ಧ ಯುದ್ಧ ಸಾರಿದಾಗಿನಿಂದ ಪುಟಿನ್‌ ಆರೋಗ್ಯದ ವಿಚಾರದ ಬಗ್ಗೆಯೂ ಪ್ರಮುಖ ಚರ್ಚೆಗಳಾಗುತ್ತಿವೆ. ಪುಟಿನ್‌ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಅವರ ಆಪ್ತರಾದ ಒಲಿಗಾರ್ಚ್‌ ಈಚೆಗೆ ತಿಳಿಸಿದ್ದರು.

Leave a Reply

Your email address will not be published.

Back to top button