ಪುಣೆ: ಮಹಿಳೆಯನ್ನು ಒಬ್ಬ ಪುರುಷ ಕೆಟ್ಟದಾಗಿ ಮುಟ್ಟಿದ್ದು, ಅದಕ್ಕೆ ಆಕೆ ಛೀಮಾರಿ ಹಾಕಿದ್ದಾಳೆ. ಪರಿಣಾಮ ಆಕೆಯನ್ನು ಈತ ಕೊಲ್ಲಲು ಪ್ರಯತ್ನಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ಗುರುವಾರ್ ಪೇಠ್ ಪ್ರದೇಶದ 38 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಅನುಚಿತ ರೀತಿಯಲ್ಲಿ ಮುಟ್ಟಿದ್ದಾನೆ. ಇದನ್ನು ಖಂಡಿಸಿ ಮಹಿಳೆ ಆತನನ್ನು ಬೈದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಘಟನೆ ನಡೆದ ಒಂದು ದಿನದ ನಂತರ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ನಂತರ ಆಕೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಕೊಂಡ್ವಾ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ
Advertisement
Advertisement
ಜನವರಿ 11 ರಂದು ಮಹಿಳೆ ಪತಿಯೊಂದಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಳು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಎಲ್ಲರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಮಹಿಳೆ ಕಿಡಿಕಾರಿದ್ದಾಳೆ.
Advertisement
ಮರುದಿನ ಮಹಿಳೆ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿರುವಾಗ ಅದೇ ವ್ಯಕ್ತಿ ಅವಳನ್ನು ಹಿಂಬಾಲಿಸಿದ್ದಾನೆ. ನಂತರ ಕೊಂಡ್ವಾ ಪ್ರದೇಶದಲ್ಲಿ ಆರೋಪಿ ಬೈಕ್‍ನಿಂದ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿದ್ದಾನೆ. ಏಕೆ ಈ ರೀತಿ ಓಡಿಸುತ್ತಿದ್ದಿರಾ ಎಂದು ಆಕೆಯ ಪತಿ ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿ, ಮಹಿಳೆಯ ಪತಿಯನ್ನು ಆರೋಪಿ ಥಳಿಸಿದ್ದಾನೆ. ಇತ್ತ ಕಾರಿನಲ್ಲಿದ್ದ ಮಹಿಳೆಯನ್ನು ಆರೋಪಿ ಕೊಲ್ಲಲು ಯತ್ನಿಸಿದ್ದಾನೆ.
Advertisement
ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಪತಿ ಗಾಯಗೊಂಡಿದ್ದು, ಈ ಕುರಿತು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ದೂರಿನ ಆಧಾರ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: MPSC ಹುದ್ದೆ ಆಕಾಂಕ್ಷಿ ಅನುಮಾನಾಸ್ಪದ ರೀತಿಯಲ್ಲಿ ಕೊಠಡಿಯಲ್ಲಿ ಶವವಾಗಿ ಪತ್ತೆ
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307(ಕೊಲೆ ಯತ್ನ), 323(ಗಾಯಗೊಳಿಸುವುದು) ಮತ್ತು 354(ಹೆಣ್ಣಿನ ಮೇಲೆ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.