CrimeLatestMain PostNational

ಕೊರೊನಾದಿಂದ MPSC ಪರೀಕ್ಷೆ ವಿಳಂಬ – ಉದ್ಯೋಗಾಕಾಂಕ್ಷಿ ಆತ್ಮಹತ್ಯೆ?

ಪುಣೆ: ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ (ಎಂಪಿಎಸ್‍ಸಿ) ಹುದ್ದೆ ಆಕಾಂಕ್ಷಿಯೊಬ್ಬರು ನಿನ್ನೆ ಮಧ್ಯಾಹ್ನ ಪುಣೆಯ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

33 ವರ್ಷದ ವ್ಯಕ್ತಿಯೊಬ್ಬ ಎಂಪಿಎಸ್‍ಸಿ ಆಕಾಂಕ್ಷಿಯಾಗಿದ್ದು, ಅವರು ಪುಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಎಂಪಿಎಸ್‍ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಅವರನ್ನು ನಿರಾಕರಿಸಲಾಗಿತ್ತು. ನಂತರ ಇವರು ರಾಜ್ಯ ಪೊಲೀಸ್ ಪಡೆಗೆ ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಯಾಗಲು ತಯಾರಿ ನಡೆಸುತ್ತಿದ್ದರು. ಆದರೆ ಈಗ ಅವರು ವಾಸವಾಗಿದ್ದ ಕೋಣೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನ್

ಘಟನೆ ಕುರಿತು ಪೊಲೀಸ್ ಇನ್ಸ್ ಪೆಕ್ಟರ್ ಕುಂಡಲಿಕ್ ಕೈಗುಡೆ ಪ್ರತಿಕ್ರಿಯಿಸಿದ್ದು, ಆಕಾಂಕ್ಷಿಯು 2010ರಿಂದ ಸದಾಶಿವ ಪೇಟೆಯ ಹಾಸ್ಟೆಲ್‍ನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಸಬ್ ಇನ್ಸ್‍ಪೆಕ್ಟರ್ ಆಗಲು ಅವರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಅವರಿಗೆ ಕೌಟುಂಬಿಕ ಸಮಸ್ಯೆಗಳಿತ್ತು ಎಂದು ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಇದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಿದ್ದಾರೆ.

ಈ ಹಿಂದೆ ಜುಲೈ 2021 ರಲ್ಲಿ ಎಂಪಿಎಸ್‍ಸಿ ಆಕಾಂಕ್ಷಿಯೊಬ್ಬ ಪುಣೆ ನಗರದ ಹಡಪ್ಸರ್ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಾರಪೂರ್ತಿ ಜನಜಾತ್ರೆ, ವಾರಾಂತ್ಯದಲ್ಲಿ ಕರ್ಫ್ಯೂ – ಆತಂಕದಲ್ಲಿ ಕಾಫಿನಾಡು ಜನತೆ

ಡಿಸೆಂಬರ್ 2021 ರಲ್ಲಿ ಮತ್ತೊಬ್ಬ ಯುವಕನ ಶವ ದೌಂಡ್ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇವರೆಲ್ಲರೂ ಎಂಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ (ಎಂಪಿಎಸ್‍ಸಿ) ಪರೀಕ್ಷೆಯು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published.

Back to top button