Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ನ್ಯೂ ಇಯರ್ ಸಂಭ್ರಮದಲ್ಲಿ ಕೀಟಲೆ ಮಾಡಿದ್ದ ನಾಲ್ವರ ಬಂಧನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪಬ್ಲಿಕ್ ಟಿವಿ ಇಂಪ್ಯಾಕ್ಟ್: ನ್ಯೂ ಇಯರ್ ಸಂಭ್ರಮದಲ್ಲಿ ಕೀಟಲೆ ಮಾಡಿದ್ದ ನಾಲ್ವರ ಬಂಧನ

Bengaluru City

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ನ್ಯೂ ಇಯರ್ ಸಂಭ್ರಮದಲ್ಲಿ ಕೀಟಲೆ ಮಾಡಿದ್ದ ನಾಲ್ವರ ಬಂಧನ

Public TV
Last updated: January 1, 2020 11:17 pm
Public TV
Share
2 Min Read
new year
SHARE

– ತಲೆಮರೆಸಿಕೊಂಡಿರೋ ನಾಲ್ವರಿಗೆ ಪೊಲೀಸರ ಹುಡುಕಾಟ

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕೆಲ ಕಾಮುಕರು ಕೀಟಲೆ ಮಾಡಿದ್ದ ದೃಶ್ಯಗಳು ಪಬ್ಲಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲದೇ ಮತ್ತೊಂದು ಪ್ರಕರಣದಲ್ಲೂ ಮತ್ತಿಬ್ಬರು ಕಾಮುಕರನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.

Public Tv IMPACTತಮಿಳುನಾಡಿನ ಕೃಷ್ಣಗಿರಿಯ ಅತಿಕ್ ಮತ್ತು ಶಿವಕುಮಾರ್ ಬಂಧಿತ ಕಾಮುಕರು. ಈ ಇಬ್ಬರು ಯುವಕರು ಬೆಂಗಳೂರಿನ ಸ್ನೇಹಿತರ ರೂಂಗೆ ಬಂದಿದ್ದರು. ಎಂ.ಜಿ ರೋಡ್‍ನಲ್ಲಿ ಮಸ್ತಿ ಜೊತೆಗೆ ಕಾಮದಾಟ ಆಡಲು ಹೋಗಿ ಚಪ್ಪಲಿ ಏಟು ತಿಂದಿದ್ದರು. ಉಳಿದಂತೆ ತಲೆಮರೆಸಿಕೊಂಡಿರುವ ನಾಲ್ವರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

BNG 3

ಪೊಲೀಸರು ಚಾಪೆ ಕೆಳಗೆ ನುಗ್ಗಿ ಕಾಮುಕರ ವಿರುದ್ಧ ಅದೆಷ್ಟೇ ಕ್ರಮ ಕೈಗೊಂದರೂ ಕಾಮುಕರು ರಂಗೋಲಿ ಕೆಳಗೆ ನುಗ್ಗಿ ಕಾಡುತ್ತಾರೆ ಎನ್ನುವುದಕ್ಕೆ ನಿನ್ನೆ ನ್ಯೂ ಇಯರ್ ಸೆಲಬ್ರೇಷನ್ ವೇಳೆ ನಡೆದ ಘಟನೆಗಳೇ ಸಾಕ್ಷಿ. ಹೊಸ ವರ್ಷದ ಪಾರ್ಟಿ ವೇಳೆ ಯುವತಿಯರ ಜೊತೆಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು.

ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಕಾಮುಕರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವುದು. ಕಿರುಕುಳಕ್ಕೆ ಒಳಗಾದವರು ಯಾವುದೇ ರೀತಿಯ ದೂರು ನೀಡಿಲ್ಲ. ಆದರೂ ನಾವೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಕಾಮುಕರಿಗೆ ತಕ್ಕ ಪಾಠ ಆಗಬೇಕು ಎಂದು ಹೇಳಿದ್ದರು.

BNG 1

ವ್ಯಕ್ತಿಯೊಬ್ಬ ಸೆಲೆಬ್ರೇಷನ್ ಮಾಡುವುದನ್ನು ಬಿಟ್ಟು ಹುಡುಗಿಯ ಮೈ ಮುಟ್ಟಿ ಮಜಾ ತಗೆದುಕೊಳ್ಳುತ್ತಿದ್ದ. ಹುಡುಗಿ ಆ ಕ್ಷಣಕ್ಕೆ ಕಾಳಿ ಅವತಾರ ತಾಳಿ ಚಪ್ಪಲಿಯಲ್ಲಿ ಮಂಗಳಾರತಿ ತಗೊಂಡಿದ್ದಳು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಕಾಮುಕರಿಗಾಗಿ ಹುಡುಕಾಡಿದ್ದಾರೆ. ಸಂಜೆ ವೇಳೆಗೆ ಪೊಲೀಸರ ಕೈಗೆ ಚಪ್ಪಲಿ ಏಟು ತಿಂದ ಅತಿಕ್ ಮತ್ತು ಶಿವಕುಮಾರ್ ತಗ್ಲಾಕೊಂಡಿದ್ದಾರೆ.

BNG 2

ಇತ್ತ ಹೊಸ ವರ್ಷಾಚರಣೆ ವೇಳೆ ಕಿರುಕುಳ ಕೊಟ್ಟ ಕಾಮುಕರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಗುಡುಗಿದ್ದರು. ಸಚಿವ ಆರ್.ಅಶೋಕ್ ಮಾತನಾಡಿ, ಕಿಡಿಗೇಡಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬಂಧನ ಕುರಿತು ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದರು.

TAGGED:new year celebrationpolicePublic TVPublic TV Impactyouthಕೃಷ್ಣಗಿರಿತಮಿಳುನಾಡುಪಬ್ಲಿಕ್ ಟಿವಿಮಹಿಳೆಯರುಯುವಕರುಹೊಸ ವರ್ಷ
Share This Article
Facebook Whatsapp Whatsapp Telegram

Cinema news

Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories
Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi
kannada actor daali dhananjaya and his wife dr dhanyatha have been blessed with a baby boy
ಡಾಲಿ ಈಗ ಡ್ಯಾಡಿ – ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ
Cinema Karnataka Latest Sandalwood Top Stories

You Might Also Like

EVM
Latest

ಬಂಗಾಳದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌ – ಫಾಲ್ಟಾ ಕ್ಷೇತ್ರದ 285 ಬೂತ್‌ಗಳಲ್ಲಿ ಮೇ 21 ರಂದು ಮರು ಮತದಾನ

Public TV
By Public TV
9 minutes ago
ಸಾಂದರ್ಭಿಕ ಚಿತ್ರ
Latest

ಜುಲೈವರೆಗಿನ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ ಸಂಖ್ಯೆ ಕಡಿತಗೊಳಿಸಿದ ಏರ್ ಇಂಡಿಯಾ

Public TV
By Public TV
27 minutes ago
Bengaluru Kempegowda International Airport 3
Bengaluru City

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 18.62 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

Public TV
By Public TV
1 hour ago
Gabion wall
Districts

ಕಾವೇರಿ ನದಿಯ ಅಂಚಿನಲ್ಲಿ ವಿದೇಶಿ ತಂತ್ರಜ್ಞಾನದ ಗೇಬಿಯನ್ ವಾಲ್ ನಿರ್ಮಾಣ

Public TV
By Public TV
1 hour ago
Delhi Judge
Latest

ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಜಡ್ಜ್‌ ಶವ ಪತ್ತೆ – ಆತ್ಮಹತ್ಯೆ ಶಂಕೆ

Public TV
By Public TV
3 hours ago
Vinay Kulkarni 1 1
Bengaluru City

ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು – ರಾಜ್ಯ ವಿಧಾನಸಭೆ ಅಧಿಕೃತ ಪ್ರಕಟಣೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?