ಬೆಂಗಳೂರು: ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ ಆಯೋಜಿಸಿದೆ. ಈ ಎಜುಕೇಷನ್ ಎಕ್ಸ್ ಪೋಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಈ ಎಜುಕೇಶನ್ ಎಕ್ಸ್ ಪೋ ಗೆ ಪೋಷಕರು ಉತ್ತಮ ರೆಸ್ಪಾನ್ಸ್ ಕೊಟ್ಟಿದ್ದಾರೆ. ಎಕ್ಸ್ ಪೋ ಉದ್ಘಾಟನೆಯನ್ನ ಬಿಜಿಎಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಕಾಶ್ ನಾಥ್ ಸ್ವಾಮೀಜಿ, ಗಾರ್ಡನ್ ಸಿಟಿ ಯುನಿವರ್ಸಿಟಿಯ ಚೇರ್ಮನ್ ಡಾ. ವಿ.ಜೆ.ಜೋಸೆಫ್, ಕೆಂಬ್ರಿಡ್ಜ್ ಸಂಸ್ಥೆಯ ಚಕ್ರವರ್ತಿ, ಪಬ್ಲಿಕ್ ಟಿವಿಯ ಸಿಇಓ ಅರುಣ್ ಕುಮಾರ್ ಹಾಗೂ ಪಬ್ಲಿಕ್ ಟಿವಿ ಮಾರ್ಕೆಟಿಂಗ್ ಹೆಡ್ ಹರೀಶ್ ನೆರವೇರಿಸಿದರು.
ಇಂದು ಈ ಎಜುಕೇಶನ್ ಎಕ್ಸ್ ಪೋಗೆ ಎರಡನೇ ಹಾಗೂ ಕೊನೆ ದಿನ. ಮೊದಲ ದಿನವೇ 1000 ಕ್ಕೂ ಹೆಚ್ವು ಪೋಷಕರು ಎಕ್ಸ್ ಪೋ ಆಗಮಿಸಿ ತಮ್ಮ ಮಕ್ಕಳಿಗೆ ಸೂಕ್ತವಾದ ಶಾಲೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒಂದು ಜಾಗದಲ್ಲಿ ಇಷ್ಟೊಂದು ಶಾಲೆಗಳ ಬಗ್ಗೆ ಮಾಹಿತಿ ಸಿಗುತ್ತಿದ್ದು ಇದು ಅತ್ಯುತ್ತಮ ಕೆಲಸ ಎಂದು ಪೋಷಕರು ಹೇಳುತ್ತಿದ್ದಾರೆ.
Advertisement
Advertisement
ಇಂದು ಬೆಳಗ್ಗೆ 9:30 ಯಿಂದ ಸಂಜೆ 6:30 ವರೆಗೂ ಏಕ್ಸ್ ಪೋ ನಡೆಯಲಿದೆ. ಸೆಕೆಂಡ್ ಡೇಯಲ್ಲಿ ಎಕ್ಸ್ ಪೋಗೆ ಬರುವ ಪೋಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಪ್ರೊಫೆಸರ್ ಶ್ರೀಧರ್ ಮೂರ್ತಿ ಅವರು ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಮಕ್ಕಳ ಮೇಲೆ ಶಿಕ್ಷಣದ ಜೊತೆ ಮ್ಯೂಸಿಕ್ ಎಷ್ಟು ಪ್ರಭಾವ ಬೀರುತ್ತೆ..? ಮ್ಯೂಸಿಕ್‍ನ ಅಗತ್ಯದ ಬಗ್ಗೆ ವಿಶ್ವನಾಥ್ ಪ್ರಸಾದ್ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಇದರೊಂದಿಗೆ ಮಕ್ಕಳಿಗಾಗಿ ಡ್ರಾಯಿಂಗ್ ಅಂಡ್ ಪೇಂಟಿಂಗ್ ಸ್ಪರ್ಧೆ ಕೂಡ ಇರಲಿದೆ.
Advertisement
ಪಬ್ಲಿಕ್ ಟಿವಿ ಆಯೋಜಿಸಿರುವ ಎಕ್ಸ್ ಪೋನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಠಿತ 25 ಕ್ಕೂ ಹೆಚ್ಚು ವಿದ್ಯಾಕೇಂದ್ರಗಳು ಒಂದೇ ಸೂರಿನಡಿಯಲ್ಲಿ ತಮ್ಮ ಸಂಸ್ಥೆಯ ಬಗ್ಗೆ ವಿವರಗಳನ್ನ ಪೋಷಕರಿಗೆ ತಿಳಿಸುತ್ತಿದ್ದಾರೆ. ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‍ನ ಕಾಳಿಂಗ ಹಾಲ್‍ನಲ್ಲಿ ನಡೆಯುತ್ತಿರುವ ಈ ಎಕ್ಸ್ ಪೋಗೆ ಎಲ್ಲರಿಗೂ ಉಚಿತ ಪ್ರವೇಶವಿದೆ. ತಮ್ಮ ಮಕ್ಕಳಿಗಾಗಿ ಪೋಷಕರು ಮಿಸ್ ಮಾಡ್ದೇ ಈ ಎಕ್ಸ್ ಪೋ ಗೆ ಬಂದು ತಮಗೆ ಬೇಕಾದ ಡ್ರೀಮ್ ಸ್ಕೂಲ್ ಬಗ್ಗೆ ಮಾಹಿತಿ ಪಡೆದುಕೊಂಡು, ಅಡ್ಮಿಶನ್ ಕೂಡ ಮಾಡಿಕೊಳ್ಳಬಹುದಾಗಿದೆ. ಮತ್ತೆಕೇ ತಡ ಮಾಡ್ತಿದ್ದೀರಾ ಬನ್ನೀ ಪಬ್ಲಿಕ್ ಟಿವಿ ಆಯೋಜಿಸಿರೋ ಸಾಮಾಜಿಕ ಕಳಕಳಿಯ ಡ್ರೀಮ್ಸ್ ಸ್ಕೂಲ್ ಎಜುಕೇಶನ್ ನಲ್ಲಿ ಭಾಗಿಯಾಗಿ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv