ನವದೆಹಲಿ: ನಾನು ದಿಮಾಗಿ ನಕ್ಸಲ್ (ಬೌದ್ಧಿಕ ನಕ್ಸಲ) ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಹೇಳಿದ್ದಾರೆ.

ಪ್ರಧಾನಿ ಮೋದಿ (PM Narendra Modi) ಅವರ ಹೇಳಿಕೆಗೆ ಎಕ್ಸ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ನೀಡಿದ ಅವರು, ನಾನು ನಿಜವಾದ ದೇಶಭಕ್ತನಾಗಿದ್ದೇನೆ. ಭಾರತದ ವಿರುದ್ಧ ಯಾರೇ ಮಾತನಾಡಿದರೂ ನಾನು ಅದನ್ನು ಪೂರ್ಣ ಬಲದಿಂದ ವಿರೋಧಿಸುತ್ತೇನೆ. ಬಿಜೆಪಿಗೆ ಹೆದರುವುದಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿಯವರ ಪ್ರಕಾರ, ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ತೋರುವವರು ಮತ್ತು ಬಿಜೆಪಿಗೆ ಹೆದರದವರೆಲ್ಲರೂ ದಿಮಾಗಿ ನಕ್ಸಲರು. ಇಂದು ಭಗತ್ ಸಿಂಗ್ ಅಥವಾ ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿದ್ದರೆ ಪ್ರಧಾನಿಯವರ ಪ್ರಕಾರ ಅವರನ್ನೂ ದಿಮಾಗಿ ನಕ್ಸಲರು(Dimagi Naxal) ಎಂದೇ ಕರೆಯಲಾಗುತ್ತಿತ್ತು ಎಂದು ಕುಟುಕಿದರು. ಇದನ್ನೂಓದಿ: ದಿಮಾಗಿ ನಕ್ಸಲರು ಯಾರು? ಶಾರ್ಜಿಲ್ ಇಮಾಮ್ ಭಾಷಣದ ವಿಡಿಯೋ ಹಾಕಿ ಪಟ್ಟಿ ಬಿಡುಗಡೆ ಮಾಡಿದ ಕಿರಣ್ ರಿಜಿಜು
हाँ। मैं दिमाग़ी नक्सल हूँ। क्योंकि मैं देशभक्त हूँ। और मुझे इस पर गर्व है। pic.twitter.com/ADE3YRfvSJ
— Arvind Kejriwal (@ArvindKejriwal) August 17, 2026
ಭ್ರಷ್ಟಾಚಾರ ಮುಕ್ತ ವ್ಯವಸ್ಥೆ, ಉತ್ತಮ ಚರಂಡಿ ವ್ಯವಸ್ಥೆ ಮತ್ತು ಉತ್ತಮ ಆಸ್ಪತ್ರೆಗಳಂತಹ ಮೂಲಭೂತ ಸೌಲಭ್ಯಗಳನ್ನು ಬಯಸುವ ಪ್ರತಿಯೊಬ್ಬ ನಾಗರಿಕರನ್ನು ಮೋದಿ ಅವರು ‘ದಿಮಾಗಿ ನಕ್ಸಲರುʼ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಕೂಡ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ನಾನು ಕೂಡ ‘ದಿಮಾಗಿ ನಕ್ಸಲ್’ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ” ಎಂದು ಹೇಳಿದ್ದರು.
ಯಾರಿದು ದಿಮಾಗಿ ನಕ್ಸಲ್?
ದಿಮಾಗಿ ನಕ್ಸಲ್ ಎಂದರೆ ಬೌದ್ಧಿಕ ಅಥವಾ ವಿಚಾರವಾದಿ ನೆಲೆಗಟ್ಟಿನಲ್ಲಿ ನಕ್ಸಲ್ ಅಥವಾ ಮಾವೋವಾದಿ ಚಿಂತನೆಗಳನ್ನು ಹೊಂದಿರುವ ವ್ಯಕ್ತಿಗಳು ಎಂದರ್ಥ. ಕನ್ನಡದಲ್ಲಿ ಇದನ್ನು ‘ಬೌದ್ಧಿಕ ನಕ್ಸಲ್’ ಅಥವಾ ‘ಮನಸ್ಸಿನಲ್ಲಿ ನಕ್ಸಲ್ ಭಾವನೆ ಹೊಂದಿರುವ ವ್ಯಕ್ತಿಗಳುʼಎಂದು ಕರೆಯಬಹುದು. ಇದನ್ನೂ ಓದಿ: ಮಾಡೆಲ್‌ಗಳಾದ ಬುಡಕಟ್ಟು ಸುಂದರಿಯರು – ಮಾಜಿ ನಕ್ಸಲ್ ಮಹಿಳೆಯರ ರ‍್ಯಾಂಪ್ ವಾಕ್ ವೈರಲ್
ಈ ದಿಮಾಗಿ ನಕ್ಸಲರು ಯುವಕರ ತಲೆಗೆ ತಪ್ಪು ಕಲ್ಪನೆಗಳನ್ನು ತುಂಬಿ ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಾರೆ. ಇವರು ಸಮಾಜದ ಮುಖ್ಯವಾಹಿನಿಯಲ್ಲಿ ಅಥವಾ ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ಕುಳಿತುಕೊಂಡು ಅದೇ ರೀತಿಯ ಹಿಂಸಾತ್ಮಕ, ಒಡೆದು ಆಳುವ ಮತ್ತು ವಿಧ್ವಂಸಕ ಸಿದ್ಧಾಂತಗಳನ್ನು ಪ್ರಚಾರ ಮಾಡುವವರನ್ನು ‘ದಿಮಾಗಿ ನಕ್ಸಲ್’ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
