ಚಿಕ್ಕಮಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿಯಲ್ಲಿ ಕಾರಿನಿಂದ ಕೆಳಗಿಳಿದು ಮಕ್ಕಳಿಗೆ ವಿಶ್ ಮಾಡಿದ್ದಾರೆ. ಅವರು ಇಂದು ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಶೃಂಗೇರಿ ದೇವಸ್ಥಾನಕ್ಕೆ ಬಂದ ಅವರು ಸಂಜೆ ನಾಲ್ಕು ಗಂಟೆವರೆಗೂ ಮಠದಲ್ಲೇ ಇದ್ದರು. 11 ಗಂಟೆಗೆ ದೇವಾಲಯದ ಆವರಣಕ್ಕೆ ಬಂದ ರಾಷ್ಟ್ರಪತಿಗಳು ಶೃಂಗೇರಿಶಾರದಾಂಬೆ ದರ್ಶನ ಪಡೆದು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶೃಂಗೇರಿ ಮಠದ ಜಗದ್ಗುರುಗಳಾದ ಭಾರತೀ ತೀರ್ಥ ಶ್ರೀಗಳು ಹಾಗೂ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದರು. ಸುಮಾರು ಅರ್ಧ ಗಂಟೆಗಳ ಕಾಲ ಶ್ರೀಗಳ ಜೊತೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಗೋಕರ್ಣದಲ್ಲಿ ಪೂಜೆ, ದಕ್ಷಿಣೆ ಕಾಸಿಗಾಗಿ ಜಗಳ – ಕೊನೆಗೂ ಭಕ್ತರಿಗೆ ಅವಕಾಶ, ಅರ್ಚಕರಿಗೆ ಶಾಕ್
Advertisement
Advertisement
ಈ ವೇಳೆ, ರಾಷ್ಟ್ರಪತಿಗೆ ಶಾಲು ಹೊದಿಸಿ, ಸನ್ಮಾನಿಸಿ ಶಂಕರಾಚಾರ್ಯರ ವಿಗ್ರಹ, ಫಲ ಮಂತ್ರಾಕ್ಷತೆ ಮತ್ತು ಬೆಳ್ಳಿಯ ಪದಕವನ್ನ ರಾಷ್ಟ್ರಪತಿ ಅವರಿಗೆ ನೀಡಲಾಯಿತು. ಮಧ್ಯಾಹ್ನ ಮಠದಲ್ಲೇ ಊಟ ಮಾಡಿದ ರಾಷ್ಟ್ರಪತಿ ಅವರಿಗೆ ಚಪಾತಿ ಅನ್ನ, ತಿಳಿಸಾರು, ಸಾಂಬಾರು, ಹುಳಿತೊವೆ, ಮಜ್ಜಿಗೆ ಹುಳಿ, ಎರಡು ತರಹದ ಕೋಸಂಬರಿ, ಎರಡು ರೀತಿಯ ಪಲ್ಯ, ಚಿಪ್ಸ್, ಮಿಕ್ಸರ್,ಡ್ರೈ ಜಾಮೂನು, ಗೋಡಂಬಿ ಬರ್ಫಿಯನ್ನ ಸಿದ್ಧಪಡಿಸಲಾಗಿತ್ತು. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್
Advertisement
Advertisement
ರಾಷ್ಟ್ರಪತಿ ಅವರು ಭೇಟಿ ಹಿನ್ನೆಲೆ ಶೃಂಗೇರಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಸುಮಾರು 800-1000 ಪೊಲೀಸರು ಶೃಂಗೇರಿಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಹೆಲಿಪ್ಯಾಡ್ ನಿಂದ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ನಾಯಿ, ದನಕರುಗಳು ರಸ್ತೆಯಲ್ಲಿ ಅಡ್ಡ ಸಂಚರಿಸದಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪತ್ನಿ, ಪುತ್ರಿ ಜೊತೆ ಬಂದಿದ್ದ ರಾಮನಾಥ್ ಕೋವಿಂದ್ ಅವರು ಶಾರದಾಂಬೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ
ಶಾರದಾಂಬೆ ದರ್ಶನದ ಬಳಿಕ ಶಕ್ತಿಗಣಪತಿಯ ದರ್ಶನ ಪಡೆದರು. ರಾಷ್ಟ್ರಪತಿಯವರ ಆಗಮನದ ಹಿನ್ನೆಲೆ ಇಂದು ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ನಿಬರ್ಂಧಿಸಲಾಗಿತ್ತು. ಶಾರದಾಂಭೆ ದರ್ಶನಕ್ಕೆ ಬಂದ ನೂರಾರು ಜನ ಹೊರಗಡೆಯೇ ಕಾಯುವಂತಾಗಿತ್ತು. ಮತ್ತೊಂದೆಡೆ ಅವರನ್ನ ನೋಡಲೆಂದೇ ದೇವಸ್ಥಾನದ ಎದುರು ಜನ ಜಾತಕಪಕ್ಷಿಗಳಂತೆ ಕಾಯುತ್ತಿದ್ದರು. ಇದನ್ನೂ ಓದಿ: ನನಗೆ ಅಕ್ರಮ ಸಂಬಂಧ ಇಲ್ಲ- ಟ್ರೋಲಿಗರ ವಿರುದ್ಧ ಕುಟುಕಿದ ಸಮಂತಾ
ಸಂಜೆ ದೇವಸ್ಥಾನದಿಂದ ಹಿಂದಿರುಗುವಾಗ ನೆರೆದಿದ್ದ ಜನ ಸಾಮಾನ್ಯರತ್ತ ಕೈ ಬೀಸಿ ಹೊರಟರು. ಹೆಲಿಪ್ಯಾಡ್‍ಗೆ ಹೋಗುವ ಮಾರ್ಗದಲ್ಲಿನ ಕುರುಬಗೇರೆ ಗ್ರಾಮದಲ್ಲಿ ಮಕ್ಕಳು ರಾಷ್ಟ್ರಪತಿಯನ್ನ ನೋಡಲು ಶಾಲಾ ಕಾಂಪೌಂಡ್ ಒಳಗೆ ಕಾಯುತ್ತಿದ್ದರು. ರಾಮನಾಥ್ ಕೋವಿಂದ್ ಅವರು ಕಾರಿನಿಂದ ಕೆಳಗಿಳಿದು ಮಕ್ಕಳಿಗೆ ವಿಶ್ ಮಾಡಿ ಹೊರಟಿದ್ದಾರೆ.