– ನನ್ನ ಮಾತಿಗೆ ಗೌರವ ಸಿಗುತ್ತೆ ಅನ್ನೋ ವಿಶ್ವಾಸ ನನಗೆ ಇದೆ
ಬೆಂಗಳೂರು: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ. ನನ್ನ ಮಾತಿಗೆ ಗೌರವ ಸಿಗುತ್ತದೆ ಅನ್ನೋ ವಿಶ್ವಾಸ ನನಗೆ ಇದೆ. ಎರಡು ಕ್ಷೇತ್ರದಲ್ಲಿ ಗೆಲ್ಲೋ ವಿಶ್ವಾಸವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪಚುನಾವಣೆ ಕುರಿತಾಗಿ ಮಾತನಾಡಿದ್ದಾರೆ. ಎರಡು ಕಡೆ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ. ಬಸವಕಲ್ಯಾಣದಲ್ಲೂ ನಾವು ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ. ನಾರಾಯಣರಾವ್ ನನ್ನ ಶಿಷ್ಯನೇ ಆಗಿದ್ದಾನೆ. ಆದರೆ ನಾನು ಯಾರನ್ನು ಜಾತಿ ಮೇಲೆ ಬೆಳೆಸಲಿಲ್ಲ. ಅವತ್ತು ಕೂಬಾ ಅನ್ನೋರನ್ನ ಚುನಾವಣೆ ನಿಲ್ಲಲು ಹೇಳಿದ್ದೆವು. ಆದರೆ ಅವರು ಒಪ್ಪಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದು ಯಾವುದೇ ಜಾತಿ ಆಧಾರದಲ್ಲಿ ಹಾಕಿಲ್ಲ ಎಂದು ಹೇಳಿದ್ದಾರೆ. ನಾನು RSS ಬಗ್ಗೆ ಹೊಗಳಿದ್ದೇನೆ ಎನ್ನುವುದು ಸುಳ್ಳು: ಹೆಚ್.ಡಿ ದೇವೇಗೌಡ
Advertisement
Advertisement
ಸಿಂದಗಿಯಲ್ಲಿ ಮೊದಲು ಜೆಡಿಎಸ್ ನಿಂದ ಟಿಕೆಟ್ ಕೊಟ್ಟವನು ನಾನೇ. ಅವಿಭಾಜ್ಯ ಬಿಜಾಪುರ ಆಗಿತ್ತು. ನಾನು ಬಿಜಾಪುರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನ ಗೆಲ್ಲಿಸಿದ್ದೇನೆ. ಕಾಂಗ್ರೆಸ್ ಅವರು ಒಬ್ಬೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಈವರೆಗೂ ಗೆಲ್ಲಿಸಿಲ್ಲ. ನಾನು ಸಿಂದಗಿ ನೀರಾವರಿ ಯೋಜನೆ ಕೊಟ್ಟಿದ್ದೇನೆ. ಇದಕ್ಕಾಗಿ ನನ್ನ ಪ್ರತಿಮೆ ಅಲ್ಲಿ ಸ್ಥಾಪನೆ ಮಾಡಿದ್ದಾರೆ. ನಾನು ನೀರಾವರಿ ಯೋಜನೆ ಕೊಟ್ಟಿದ್ದಕ್ಕೆ ಪ್ರತಿಮೆ ಮಾಡಿಸಿದ್ದಾರೆ. ಮನುಗುಳಿ ಸತ್ತ ಮೇಲೆ ನನ್ನ ಅಭ್ಯರ್ಥಿಯನ್ನ ಕಾಂಗ್ರೆಸ್ ಅವರು ಕರೆದುಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ದೇವೇಗೌಡ ಕಿಡಿ ಕಾರಿದ್ದಾರೆ. ಕೆಜಿಎಫ್ 2 ಚಿತ್ರೀಕರಣದ ಫೋಟೋ ವೈರಲ್
Advertisement
ವಿಜಯಪುರದಲ್ಲಿ ಕಾಂಗ್ರೆಸ್ ಎಷ್ಟು ಮುಸ್ಲಿಂ ನಾಯಕರನ್ನು ಗೆಲ್ಲಿಸಿದ್ದಾರೆ. ಇವರು ಅಲ್ಪಸಂಖ್ಯಾತರ ಬಗ್ಗೆ ಚರ್ಚೆ ಮಾಡುತ್ತಾರೆ. ಮನಗೂಳಿಗೆ ಮನೆ ಮಗನಂತೆ ಬೆಳೆಸಿಕೊಂಡು ಬಂದೆ. ಜೀವನದ ಕೊನೆ ಹಂತದಲ್ಲಿದ್ದ ಮನಗೂಳಿಗೆ ಮಂತ್ರಿ ಮಾಡು ಎಂದೆ. ಸಿಂದಗಿಗೆ ಆಲಮಟ್ಟಿಯಿಂದ ನೀರು ಕೊಟ್ಟ ಕಾರಣ ಪ್ರತಿಮೆ ಮಾಡಿಸಿದ್ದ. ಹೆಗಡೆ ಸಿಎಂ ಇದ್ದಾಗ, ಅಧಿವೇಶನದಲ್ಲಿ ಮನಗೂಳಿ ಮಾತನಾಡಿದ್ದರು. ನಿಮ್ಮಪ್ರತಿಮೆ ಮಾಡುತ್ತೇನೆ ಎಂದು ಮನಗೂಳಿ ಹೇಳಿದ್ದರು. ಸಿಎಂ ಹೆಗಡೆ ಅವರಿಂದಲೇ ಪ್ರತಿಮೆಗೆ ಶಂಕುಸ್ಥಾಪನೆ ಮಾಡಿದ್ದರು ಎಂದಿದ್ದಾರೆ. ಇದನ್ನೂ ಓದಿ: ನಾಳೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ
Advertisement
ಕಾಂಗ್ರೆಸ್ ಅವರು ಬಿಜೆಪಿ ಗೆಲ್ಲಿಸೋ ಟಿಕೆಟ್ ಕೊಟ್ಟಿದ್ದೇನೆ ಅಂತಾರೆ. ನಾನೇ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಮನೆ ಮನೆಗೆ ಹೋಗಿ ನಾನು ಮತ ಯಾಚನೆ ಮಾಡುತ್ತೇನೆ. ಕೊನೆ ಕಾಲದಲ್ಲಿ ನಿಮ್ಮ ಮನಗೆ ಬಂದಿದ್ದೇನೆ ಮತ ಹಾಕಿ ಅಂತ ಕೇಳುತ್ತೇನೆ. ನಾನು ಸುಮ್ಮನೆ ಕೂರೋದಿಲ್ಲ. ಮುಸ್ಲಿಂಮರಿಗೆ ನಾನು ಏನು ಮಾಡಿದ್ದೇನೆ ಅಂತ ಎಲ್ಲರಿಗೂ ಗೊತ್ತು. ನಾನೇ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಕಾಂಗ್ರೆಸ್ ವಿರುದ್ಧ ದೇವೇಗೌಡ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಅಪ ಪ್ರಚಾರ ಮಾಡುತ್ತಿದೆ. ಪ್ರಾದೇಶಿಕ ಪಕ್ಷ ಅಂತ ಮುಗಿಸಲು ಹೋದರೆ ನಾವು ಅದರ ವಿರುದ್ಧ ಈಜುತ್ತೇವೆ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಅದರ ಪರಿಸ್ಥಿತಿ ಏನ್ ಆರುತ್ತಿದೆ ಅಂತ ನೋಡುತ್ತಿದ್ದೇವೆ ಎಂದು ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಡಿಎಪಿ,ಪೊಟ್ಯಾಷ್‍ಗಾಗಿ ರಾಜ್ಯದಿಂದ ಕೇಂದ್ರಕ್ಕೆ ಬೊಮ್ಮಾಯಿ ಮನವಿ
ಮನಗೂಳಿ ಕಾಲವಾದ ನಂತರ ಅವರ ಮಗನನ್ನು ಕಾಂಗ್ರೆಸ್ ಕರೆದುಕೊಂಡು ಹೋದರು. ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ? ಬಿಜೆಪಿ ಅಭ್ಯರ್ಥಿ ಗಾಣಿಗ ಸಮುದಾಯ ಇದೆ. ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ ನಾವು ಸುಮ್ಮನಿರಬೇಕಾ? ಹೀಗಾಗಿ ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ. ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ಮುಸ್ಲಿಂರನ್ನು ನೀವು ಗುತ್ತಿಗೆ ಪಡೆದಿಲ್ಲ. ನಾನು ಬೆಳಸಿದ್ದ ಮುಸ್ಲಿಂ ಮುಖಂಡ ಈಗ ಅವರ ಬಲಗೈ ಶಕ್ತಿ ಕೊಟ್ಟವರು. ಬಲಗೈ ಭಂಟ ಎನ್ನಲ್ಲ, ಜಮೀರ್ ವಿಷಯ ಪ್ರಸ್ತಾಪಿಸಿದ ಹೆಚ್ಡಿಡಿ. ರೋಷನ್ ಬೇಗ್, ಇಬ್ರಾಹಿಂ ಹೆಸರು ಪ್ರಸ್ತಾಪ ಮಾಡಿದ್ದಾರೆ.
2023ರ ಚುನಾವಣೆಗೆ ಮುಸ್ಲಿಂಮರ ಒಲೈಕೆಗೆ ನಾವು ಮುಸ್ಲಿಂರಿಗೆ ಟಿಕೆಟ್ ಕೊಟ್ಟಿಲ್ಲ. ಎರಡು ಕ್ಷೇತ್ರದ ಸನ್ನಿವೇಶ ನಾನು ಈಗಾಗಲೇ ಹೇಳಿದ್ದೇನೆ. ನಮ್ಮ ಅಭ್ಯರ್ಥಿಯನ್ನ ಕರೆದುಕೊಂಡು ಹೋಗಿದ್ದಾರೆ. ನಮ್ಮ ವಿರೋಧಿ ಪಕ್ಷದವರು ಬೇರೆ ಬೇರೆ ಅಭ್ಯರ್ಥಿ ಹಾಕಿದ್ದಾರೆ. ಹೀಗಾಗಿ ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ. ರಾಮನಗರ, ಮಂಡ್ಯ, ಹಾಸನದಲ್ಲಿ ಯಾಕೆ ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ ಅನ್ನೋ ಸಿದ್ದರಾಮಯ್ಯ ಆರೋಪ ಮಾಡುತ್ತಾರೆ. ನಮಗೆ ಈ ಕ್ಷೇತ್ರದಲ್ಲಿ ಸರಿಯಾದ ಅಭ್ಯರ್ಥಿ ಸಿಗಲಿಲ್ಲ ಅದಕ್ಕೆ ಹಾಕಿಲ್ಲ. ಆದರೆ ಎಂಎಲ್ಸಿ ಮಾಡಿದ್ದೇವೆ. ಜಮೀರ್‍ಗೆ ಟಿಕೆಟ್ ಕೊಟ್ಟಿದ್ದೇವೆ, ಇಬ್ರಾಹಿಂ ಸ್ಥಾನ ಕೊಟ್ಟಿದ್ದೇವೆ. ನನ್ನ ಬಳಿ ಮಾತಾಡೋವಾಗ ಯೋಚನೆ ಮಾಡಿ ಮಾತಾಡಬೇಕು. ಇವತ್ತು ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ ನೋಡಿ. ನೆಹರು ಕಾಲದ ಕಾಂಗ್ರೆಸ್ ಏನಾಗಿದೆ ನೋಡಿ. ನಾನು ಯಾರ ಬಗ್ಗೆಯೂ ಮಾತಾಡೊಲ್ಲ. ಯಾವ ಮುಸ್ಲಿಂ ನಾಯಕನ ಬಗ್ಗೆಯೂ ನಾನು ಮಾತಾಡಿಲ್ಲ. ಜಮೀರ್ ಬಗ್ಗೆಯೂ ಮಾತಾಡಿಲ್ಲ. ಬಿಜೆಪಿ ಗೆಲ್ಲಿಸೋಕೆ ನಾವು ಅಭ್ಯರ್ಥಿ ಹಾಕಿಲ್ಲ ಎಂದಿದ್ದಾರೆ.