ಬೆಂಗಳೂರು: ಪತಿಯೊಬ್ಬ ಪೋರ್ನ್ ವಿಡಿಯೋದಲ್ಲಿದ್ದ ಮಹಿಳೆ ದೇಹದ ಮಚ್ಚೆ ನೋಡಿ ಈ ವಿಡಿಯೋದಲ್ಲಿರುವುದು ನನ್ನ ಪತ್ನಿಯೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ವೆಂಕಟೇಶ್ (ಹೆಸರು ಬದಲಾಯಿಸಲಾಗಿದೆ) (37) ಪೋರ್ನ್ ವಿಡಿಯೋ ನೋಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ. ವೆಂಕಟೇಶ್ ಪೋರ್ನ್ ವಿಡಿಯೋಗೆ ಆಡಿಕ್ಟ್ ಆಗಿದ್ದನು. ಹೀಗೆ ಒಂದು ವಿಡಿಯೋ ನೋಡುವಾಗ ಆ ದೃಶ್ಯದಲ್ಲಿದ ಮಹಿಳೆಯ ದೇಹದ ಮೇಲೆ ಮಚ್ಚೆ ಇರುವುದನ್ನು ನೋಡಿ ಇದು ನನ್ನ ಪತ್ನಿ ಲಕ್ಷ್ಮಿ(ಹೆಸರು ಬದಲಾಯಿಸಲಾಗಿದೆ) ಎಂದು ಗಲಾಟೆ ಮಾಡಿದ್ದಾನೆ. ತನ್ನ ಪತ್ನಿ ಪೋರ್ನ್ ವಿಡಿಯೋದಲ್ಲಿ ನಟಿಸಿದ್ದಾಳೆ ಎಂದು ಸಾಬೀತು ಪಡಿಸಲು ತನ್ನ ಗರ್ಭಿಣಿ ಪತ್ನಿಯನ್ನು ಬೆಂಗಳೂರು ಕಮಿಶನರ್ ಬಳಿ ಕರೆದುಕೊಂಡು ಹೋಗಿದ್ದಾನೆ.
ವೆಂಕಟೇಶ್ ಹಾಗೂ ಲಕ್ಷ್ಮಿ ಆರು ವರ್ಷದ ಹಿಂದೆ ಮದುವೆಯಾಗಿದ್ದರು. ವೆಂಕಟೇಶ್ ತನ್ನ ಪತ್ನಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ತನ್ನ ಪತಿ ವೆಂಕಟೇಶ್ ಕಿರುಕುಳ ತಾಳಲಾರದೇ ಲಕ್ಷ್ಮಿ ಆಂಧ್ರಪ್ರದೇಶದಲ್ಲಿರುವ ತನ್ನ ತವರು ಮನೆ ಸೇರಿಕೊಂಡಿದ್ದಾರೆ. ವೆಂಕಟೇಶ್ ಹಾಗೂ ಲಕ್ಷ್ಮಿಗೆ ಒಂದು ಮಗುವಿದ್ದು, ಲಕ್ಷ್ಮಿ ಈಗ 2ನೇ ಮಗುವಿನ 4 ತಿಂಗಳು ಗರ್ಭಿಣಿಯಾಗಿದ್ದಾರೆ.
ಕಳೆದ ತಿಂಗಳು ವೆಂಕಟೇಶ್ ಪೋರ್ನ್ ವಿಡಿಯೋವನ್ನು ನೋಡಿದ್ದಾನೆ. ಆ ವಿಡಿಯೋದಲ್ಲಿದ್ದ ಮಹಿಳೆಯ ದೇಹದ ಮೇಲಿನ ಮಚ್ಚೆ ಹಾಗೂ ಆತನ ಪತ್ನಿಯ ಮಚ್ಚೆ ಒಂದೇ ರೀತಿಯಲ್ಲಿ ಒಂದೇ ಅಂಗದಲ್ಲಿರುವುದನ್ನು ನೋಡಿ ವೆಂಕಟೇಶ್ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ. ಅಲ್ಲದೇ ವಿಡಿಯೋದಲ್ಲಿರುವುದು ತನ್ನ ಪತ್ನಿಯೆಂದು ಸಾಬೀತು ಪಡಿಸಲು ಆತ ಲಕ್ಷ್ಮಿಯನ್ನು ಎಚ್‍ಎಎಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾನೆ ಎಂಬುದು ವನಿತಾ ಸಹಾಯವಾಣಿ ಮೂಲಗಳಿಂದ ತಿಳಿದುಬಂದಿದೆ.
ಎಚ್‍ಎಎಲ್ ಪೊಲೀಸರು ವೆಂಕಟೇಶ್ ಹಾಗೂ ಲಕ್ಷ್ಮಿಯನ್ನು ಇನ್ಫ್ಯಾಂಟರಿ ರಸ್ತೆಯಲ್ಲಿರುವ ವನಿತಾ ಸಹಯವಾಣಿಗೆ ಕೌನ್ಸಿಲಿಂಗ್‍ಗೆ ಎಂದು ಕಳುಹಿಸಿದರು. ವೆಂಕಟೇಶ್ ವಿಡಿಯೋದಲ್ಲಿರುವುದು ತನ್ನ ಪತ್ನಿ ಎಂದು ಹಠ ಹಿಡಿಯುತ್ತಿದ್ದನು. ಅಲ್ಲದೇ ಸೈಬರ್ ಕ್ರೈಂ ಪೊಲೀಸರು ಕೂಡ ವಿಡಿಯೋವನ್ನು ಪರಿಶೀಲಿಸಿ ಇದು ಆತನ ಪತ್ನಿಯಲ್ಲ ಎಂದು ಸಾಬೀತು ಪಡಿಸಿದ್ದಾರೆ. ಈ ವಿಡಿಯೋ ಸೆರೆಹಿಡಿದಿದ್ದು ಹೊರದೇಶದಲ್ಲಿ ಎಂದು ವನಿತಾ ಸಹಾಯವಾಣಿಯ ಕೌನ್ಸಿಲರ್ ತಿಳಿಸಿದ್ದಾರೆ.
ವೆಂಕಟೇಶ್ ಮೊಂಡು ಹಿಡಿದು ಆ ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಹುಡುಕಲು ಶುರು ಮಾಡಿದನು. ತನ್ನ ಪತ್ನಿ ಶೀಲದ ಮೇಲೆ ಅನುಮಾನ ಹಾಗೂ ಪೋರ್ನ್ ವಿಡಿಯೋ ಚಟದಿಂದ ಆತನಿಗೆ ಪತ್ನಿ ಹಾಗೂ ಪೋರ್ನ್ ನಟಿಯ ನಡುವೆ ವ್ಯತ್ಯಾಸ ತಿಳಿಯುತ್ತಿಲ್ಲ. ಆತನಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದ್ದು, ಆತನನ್ನು ನಿಮ್ಹಾನ್ಸ್ ಗೆ ದಾಖಲು ಮಾಡಲು ಸಲಹೆ ನೀಡಲಾಗಿದೆ ಎಂದು ಕೌನ್ಸಿಲರ್ ಹೇಳಿದ್ದಾರೆ. ಸದ್ಯ ವೆಂಕಟೇಶ್ ಚಿಕಿತ್ಸೆ ಪಡೆದು ಈಗ ಗುಣಮುಖನಾಗಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv