ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅಮ್ಮನಾಗಿರುವ ವಿಚಾರ ತಿಳಿಸಿದ ಬೆನ್ನಲ್ಲೇ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್ ಮುಗಿಸಿ ಕೊಟ್ಟಿದ್ದಾರೆ. ಸದ್ಯ ಹಾಲಿವುಡ್ ಚಿತ್ರದ ಶೂಟಿಂಗ್ ಮುಗಿಸಿ, ಮುಂಬೈಗೆ ಇಳಿದ ಆಲಿಯಾಗೆ ಪತಿ ರಣ್ಬೀರ್ ಕಪೂರ್ ಸರ್ಪ್ರೈಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
View this post on Instagram
ರಣ್ಬೀರ್ ಕಪೂರ್ ಜತೆ ಆಲಿಯಾ ಭಟ್ ಇತ್ತೀಚೆಗಷ್ಟೇ ಹಸೆಮಣೆ ಏರಿದ್ದರು. ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು.ಈ ಮೊದಲೇ ಒಪ್ಪಿಕೊಂಡಿದ್ದ ಸಿನಿಮಾಗಳಲ್ಲಿ ಆಲಿಯಾ ಬ್ಯುಸಿಯಾಗಿದ್ದಾರೆ. ಹಾಲಿವುಡ್ನ ಆಲಿಯಾ ನಟನೆಯ ಮೊದಲ ಚಿತ್ರ `ಹಾರ್ಟ್ ಆಫ್ ಸ್ಟೋನ್’ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಇದೀಗ ಮುಂಬೈಗೆ ಹಿಂದಿರುಗಿದ ಆಲಿಯಾಗೆ ಪತಿಯಿಂದ ಸರ್ಪ್ರೈಸ್ ಸಿಕ್ಕಿದೆ. ಇದನ್ನೂ ಓದಿ:ನಿತ್ಯಾನಂದನನ್ನ ಮದುವೆ ಆಗೋಕೆ ರೆಡಿ ಎಂದ ನಟಿ: ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಪ್ರಿಯಾ ಆನಂದ್
View this post on Instagram
ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿ, ಮುಂಬೈ ಏರ್ಪೋರ್ಟ್ಗೆ ಆಲಿಯಾ ಬಂದಿಳಿದಿದ್ದಾರೆ. ಈ ವೇಳೆ ಪಾಪರಾಜಿಗಳು ಫೋಟೋಗೆ, ವಿಡಿಯೋಗಾಗಿ ಆಲಿಯಾ ಹಿಂದೆ ಬಿದ್ದಿದ್ದಾರೆ. ಬಳಿಕ ತಮ್ಮ ಕಾರಿನ ಬಳಿ ಹೋದಾಗ ಪತಿ ರಣ್ಬೀರ್ ಬಂದಿರೋದು ನೋಡಿ ಆಲಿಯಾ ಫುಲ್ ಖುಷ್ ಆಗಿದ್ದಾರೆ. ರಣ್ಬೀರ್ ಏರ್ಪೋರ್ಟ್ ಬಳಿ ಬರುತ್ತಾರೆ ಎಂಬ ಊಹೆಯೂ ಇಲ್ಲದೆ ಇದ್ದ ಆಲಿಯಾಗೆ, ಪತಿಯ ಆಗಮನ ಖುಷಿ ಕೊಟ್ಟಿದೆ. ಈ ವೇಳೆ ಪತಿಯನ್ನು ತಬ್ಬಿ ಆಲಿಯಾ ಖುಷಿ ಹಂಚಿಕೊಂಡಿದ್ದಾರೆ.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Live Tv
[brid partner=56869869 player=32851 video=960834 autoplay=true]