ಮುಂಬೈ: ಬಿಜೆಪಿ (BJP) ಭದ್ರಕೋಟೆ ಬಂಕಿಪುರ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor), ಮಹಾರಾಷ್ಟ್ರದ (Maharastra) ಡಿಸಿಎಂ ಸುನೇತ್ರಾ ಪವಾರ್ (Sunetra Pawar) ಅವರನ್ನು ಭೇಟಿಯಾಗಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಸುನೇತ್ರಾ ಭೇಟಿಯಾಗಿರುವುದು ಇದು ಎರಡನೇ ಬಾರಿಯಾಗಿದೆ. ಈ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಭೇಟಿಯಿಂದ ಮೈತ್ರಿಕೂಟಕ್ಕೆ ಯಾವುದೇ ಹಾನಿಯಾಗಬಾರದು ಎಂದು ಬಿಜೆಪಿ ಎಚ್ಚರಿಸಿದೆ. ಇದನ್ನೂ ಓದಿ: ಬಿಜೆಪಿ ಭದ್ರಕೋಟೆ ಛಿದ್ರ – ಬಂಕಿಪುರ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್‌ಗೆ ಗೆಲುವು


ಎನ್‌ಡಿಎಯ ಒಂದು ಘಟಕವು ಬಿಜೆಪಿಯ ಎದುರಾಳಿಯೊಂದಿಗೆ ತೊಡಗಿಸಿಕೊಳ್ಳುವುದು ಸೂಕ್ತವಲ್ಲ. ಒಂದು ಭೇಟಿಯನ್ನು ಸೌಜನ್ಯದ ಸಭೆ ಎಂದು ಹೇಳಬಹುದು. ಪುನರಾವರ್ತಿತ ಭೇಟಿ, ಗುಪ್ತ ಸಭೆಗಳು, ಚರ್ಚೆಗಳು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುತ್ತವೆ. ಬಿಜೆಪಿಯನ್ನು ಸೋಲಿಸಿದ ವ್ಯಕ್ತಿಯನ್ನು ಹೀಗೆ ಭೇಟಿಯಾದರೆ ಮುಂದೆ ನಾವು ಒಟ್ಟಾಗಿ ಚುನಾವಣೆಗಳನ್ನು ಎದುರಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಕಾರ್ಯಕಾರಿಣಿಯೊಬ್ಬರು ಹೇಳಿಕೊಂಡಿದ್ದಾರೆ.

ಆ.3 ರಂದು ಬಂಕಿಪುರ ಉಪಚುನಾವಣೆ (Bankipur By-Election) ಫಲಿತಾಂಶ ಪ್ರಕಟಗೊಂಡಿತ್ತು. ಬಿಜೆಪಿ (BJP) ಭದ್ರಕೋಟೆಯಲ್ಲಿ ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಐತಿಹಾಸಿಕ ಗೆಲುವು ದಾಖಲಿಸಿದ್ದರು. ಜನ್ ಸುರಾಜ್‌ಗೆ (Jan Suraaj) ಇದು ಮೊದಲ ಗೆಲುವಾಗಿದೆ. ಬಿಜೆಪಿ ಪ್ರತಿಸ್ಪರ್ಧಿ ನೀರಜ್ ಕುಮಾರ್ ಅವರನ್ನು ಸೋಲಿಸಿ 19,000 ಕ್ಕೂ ಹೆಚ್ಚು ಮತಗಳಿಂದ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಜಯಗಳಿಸಿ ಬೀಗಿದ್ದರು.
ಚುನಾವಣಾ ತಂತ್ರಜ್ಞ-ರಾಜಕಾರಣಿಯಾಗಿ ಅವರ ಗೆಲುವು, 1995 ರಿಂದ ಬಂಕಿಪುರ ಕ್ಷೇತ್ರದ ಮೇಲಿನ ಬಿಜೆಪಿಯ ಮೂರು ದಶಕಗಳ ಹಿಡಿತವನ್ನು ಕೊನೆಗೊಳಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಲವಾರು ಅವಧಿಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

