ನ್ಯೂಯಾರ್ಕ್: ಭಾನುವಾರ ಮಿಯಾಮಿಯಲ್ಲಿ ನಡೆದ FIFA ವಿಶ್ವಕಪ್ 2026 ರ (FIFA World Cup 2026) ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ 0-0 ಅಂತರದ ಡ್ರಾ ಸಾಧಿಸಿದ ನಂತರ ಪೋರ್ಚುಗಲ್ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಅವಕಾಶವನ್ನು ಕಳೆದುಕೊಂಡಿತು.
ಕೊಲಂಬಿಯಾ ಮತ್ತು ಪೋರ್ಚುಗಲ್ (Portugal vs Colombia) ತಂಡಗಳು ಗೋಲುರಹಿತ ಡ್ರಾದೊಂದಿಗೆ ನಾಕೌಟ್ ಹಂತಕ್ಕೆ ಪ್ರವೇಶಿಸಿದವು. ಎರಡೂ ತಂಡಗಳು ಬಿಕ್ಕಟ್ಟನ್ನು ಮುರಿಯಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದವು. ಇದನ್ನೂ ಓದಿ: FIFA World Cup| ಮುಸ್ಲಿಂ ಆಟಗಾರರಿಗೆ ವಿಭಿನ್ನ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ನೀಡೋದು ಯಾಕೆ?
ಕೊಲಂಬಿಯಾ ಆರು ಅಂಕಗಳೊಂದಿಗೆ ಪಂದ್ಯವನ್ನು ಆಡಿತ್ತು. ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲು ಕೇವಲ ಒಂದು ಡ್ರಾ ಅಗತ್ಯವಿತ್ತು. ಆದರೆ, ನಾಲ್ಕು ಅಂಕಗಳೊಂದಿಗೆ ಪೋರ್ಚುಗಲ್‌ಗೆ ಮೊದಲ ಸ್ಥಾನ ಪಡೆಯಲು ಗೆಲುವು ಅಗತ್ಯವಿತ್ತು. ಇದು ವಿಶ್ವಕಪ್ ಪಂದ್ಯದಲ್ಲಿ ಕೊಲಂಬಿಯಾ ತಂಡದ ಮೊದಲ ಗೋಲುರಹಿತ ಡ್ರಾ ಆಗಿದೆ. ಆ ಮೂಲಕ ಕೆ ಗುಂಪಿನಲ್ಲಿ ಕೊಲಂಬಿಯಾ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಪೋರ್ಚುಗಲ್ ೨ ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಮುಂದಿನ ಶುಕ್ರವಾರ ಟೊರೊಂಟೊದಲ್ಲಿ ನಡೆಯಲಿರುವ 32 ನೇ ಸುತ್ತಿನಲ್ಲಿ ಪೋರ್ಚುಗಲ್ ಕ್ರೊಯೇಷಿಯಾವನ್ನು ಎದುರಿಸಲಿದೆ, ಆದರೆ ಕೊಲಂಬಿಯಾ ಒಂದು ದಿನದ ನಂತರ ಘಾನಾ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ವಿರುದ್ಧ 2-1 ಅಂತರದ ಜಯ – ಈಕ್ವೆಡಾರ್ ದೇಶದಲ್ಲಿ ರಜೆ ಘೋಷಣೆ
41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಆರನೇ ವಿಶ್ವಕಪ್‌ನಲ್ಲಿ ಮುಂಚೂಣಿಯಲ್ಲಿ ಮುಂದುವರಿದಿದ್ದಾರೆ. ಜೋವೊ ಫೆಲಿಕ್ಸ್ ಮತ್ತು ಪೆಡ್ರೊ ನೆಟೊ ವಿಂಗ್ಸ್‌ನಲ್ಲಿ ಆಡುತ್ತಿದ್ದಾರೆ. ಬ್ರೂನೋ ಫೆರ್ನಾಂಡಿಸ್ ಪ್ಲೇಮೇಕರ್ ಆಗಿ ಆಯ್ಕೆಯಾಗಿದ್ದಾರೆ. ಈ ವರ್ಷದ ವಿಶ್ವಕಪ್‌ನಲ್ಲಿ ರೊನಾಲ್ಡೊ ಎರಡು ಗೋಲುಗಳನ್ನು ಗಳಿಸಿದ್ದಾರೆ. ಪುರುಷರ ವಿಶ್ವಕಪ್‌ನ ಆರು ಆವೃತ್ತಿಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ರೊನಾಲ್ಡೊ ಬರೆದಿದ್ದಾರೆ.
