ನಟಿ ಪೂಜಾ ಹೆಗ್ಡೆ ಟಾಲಿವುಡ್ನ ಪ್ರತಿಭಾವಂತ ಕಲಾವಿದೆ, ಇತ್ತೀಚೆಗೆ ಈ ನಟಿಯ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋತಿತ್ತು. ಆದರೆ ಈಗ ಬಂಪರ್ ಆಫರ್ಗಳು ಪೂಜಾಗೆ ಅರಸಿ ಬರುತ್ತಿವೆ. ಇದೀಗ ನಟ ವಿಜಯ್ ದೇವರಕೊಂಡ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ.
ಬ್ಯೂಟಿ ಜತೆ ಟ್ಯಾಲೆಂಟ್ಯಿರೋ ಪ್ರತಿಭಾವಂತ ಪೂಜಾ, ಬೊಟ್ಟಬೊಮ್ಮ ಆಗಿ ಸೂಪರ್ ಸಕ್ಸಸ್ ಕಂಡಿದ್ರು. ಅದ್ಯಾಕೋ ಅವರಿಗೆ ಲಕ್ಕು ಕೈ ಕೊಟ್ಟಂತಿದೆ. ಇತ್ತೀಚಿಗೆ ನಟಿಸಿದ `ರಾಧೆ ಶ್ಯಾಮ್’,`ಬೀಸ್ಟ್’ ಮತ್ತು `ಆಚಾರ್ಯ’ ಚಿತ್ರಗಳು ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡೋದ್ರರಲ್ಲಿ ಸೋತಿದೆ. ಆದರೂ ಪೂಜಾಗೆ ಭರ್ಜರಿ ಆಫರ್ಗಳು ಅರಸಿ ಬರುತ್ತಿದೆ. ಇದೀಗ ನಟ ವಿಜಯ್ ದೇವರಕೊಂಡ ಜತೆ ರೊಮ್ಯಾನ್ಸ್ ಮಾಡಲು ಪೂಜಾ ರೆಡಿಯಾಗಿದ್ದಾರೆ.
ಪೂಜಾ ಹೆಗ್ಡೆ ನಟಿಸಿರೋ ಚಿತ್ರಗಳು ಸೋಲು ಕಂಡಿವೆ ಆದರೂ ಅವರ ಡಿಮ್ಯಾಂಡ್ ಎನು ಕಮ್ಮಿಲ್ಲ ಆಗಿಲ್ಲ. ಸಿನಿಮಂದಿ ಈ ನಟಿಯನ್ನ ಐರೆನ್ ಲೆಗ್ ಅಂತಾ ಕರೀತಾ ಇದ್ರು. ನಿರ್ಮಾಪಕರು ಕ್ಯಾರೆ ಎನ್ನದೇ ಪೂಜಾನೇ ಬೇಕು ಅಂತಾ ಅಫರ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ಚಿತ್ರ `ಜನಗಣಮನ’ ಸಿನಿಮಾಗೆ ನಾಯಕಿಯಾಗಿ ಪೂಜಾ ಅವರನ್ನೇ ಫೈನಲ್ ಮಾಡಲಾಗಿದೆ. ಇದನ್ನೂ ಓದಿ: ಡಾಲಿ-ಅದಿತಿ ನಟನೆಯ `ಜಮಾಲಿಗುಡ್ಡ’ ಚಿತ್ರದ ಡಬ್ಬಿಂಗ್ ಸ್ಟಾರ್ಟ್
`ಜನಗಣಮನ’ ಚಿತ್ರ ಇತ್ತೀಚೆಗಷ್ಟೇ ಲಾಂಚ್ ಆಗಿದ್ದು, ಚಿತ್ರಕ್ಕೆ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಾರ್ಮಿ ಕೌರ್ ಪ್ರೋಡಕ್ಷನ್ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ವಿಜಯ್ ಆರ್ಮಿ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಲು ಸಾಲು ಸೋಲುಗಳನ್ನೇ ಕಂಡಿರೋ ಪೂಜಾಗೆ ಈ ಪ್ರಾಜೆಕ್ಟ್ನಿಂದ ಲಕ್ ಬದಲಾಗುತ್ತಾ ಅಂತಾ ಕಾದು ನೋಡಬೇಕಿದೆ.