ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಅವರ ನಟನೆಯ ಸಾಲು ಸಾಲು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿದೆ. ಹೀಗಿರುವಾಗ ಮಹೇಶ್ ಬಾಬು (Mahesh Babu) ನಟನೆಯ ಮುಂದಿನ ಸಿನಿಮಾ ‘ಗುಂಟೂರು ಖಾರಂ’ ಪ್ರಾಜೆಕ್ಟ್‌ನಿಂದ ಪೂಜಾ ಹೆಗ್ಡೆ ಹೊರಬಂದಿದ್ದಾರೆ.
ರಶ್ಮಿಕಾ, ಶ್ರೀಲೀಲಾ (Sreeleela) ಬಂದ ಮೇಲೆ ಪೂಜಾ ಹೆಗ್ಡೆಗೆ ಸೋಲು ಶುರುವಾಗಿದೆ. ಒಂದ್ ಕಡೆ ಸಿನಿಮಾ ಆಯ್ಕೆಯ ವಿಚಾರದಲ್ಲಿ ಸೋತರೆ, ಮತ್ತೊಂದೆಡೆ ಮಾಡಿದ ಸಿನಿಮಾವೆಲ್ಲಾ ಸೋಲುತ್ತಿದೆ. ಇತ್ತೀಚಿಗೆ ಸಲ್ಮಾನ್ ಖಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅದ್ದೂರಿ ಎಂಟ್ರಿ ಕೊಟ್ಟಿದ್ದರು. ಆದರೂ ಬಾಲಿವುಡ್‌ನಲ್ಲೂ ಲಕ್ ಇಲ್ಲದೇ ಆಯ್ತು. ಆದ್ರೂ ಅವರಿಗೆ ಅವಕಾಶಗಳೇನು ಕಮ್ಮಿಯಾಗುತ್ತಿಲ್ಲ. ಐರೆನ್ ಲೆಗ್ ಅಂತಾ ಹೆಸರು ಬರುವ ಮುನ್ನವೇ ಅವರಿಗೆ ಗೆಲುವಿನ ಅವಶ್ಯಕತೆಯಿದೆ.
‘ಗುಂಟೂರು ಖಾರಂ’ ಸಿನಿಮಾ ಶೂಟಿಂಗ್ ಪದೇ ಪದೇ ತಡವಾಗುತ್ತಿದೆ. ಚಿತ್ರಕಥೆಯಲ್ಲಿ ಬದಲಾವಣೆ ಮಾಡುತ್ತಿದ್ದು ಬರುವ ಸಂಕ್ರಾಂತಿಗೂ ಸಿನಿಮಾ ರಿಲೀಸ್ ಆಗಲ್ಲ ಎನ್ನುವ ವಾದ ಶುರುವಾಗಿದೆ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ಪೂಜಾ ಹೆಗ್ಡೆಗೆ ಈಗ ಡೇಟ್ಸ್ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಈ ಚಿತ್ರಕ್ಕಾಗಿ ಕಾಲ್‌ಶೀಟ್ ಕೊಟ್ಟಿದ್ದರು. ಆದರೆ ಈವರೆಗೆ ಚಿತ್ರೀಕರಣ ಮುಗಿದಿಲ್ಲ. ಈ ವರ್ಷ ಜೂನ್‌ನಿಂದ ಡಿಸೆಂಬರ್‌ವರೆಗೆ ಬೇರೆ ಸಿನಿಮಾಗಳಿಗೆ ಕಾಲ್‌ಶೀಟ್ ಕೊಟ್ಟಿದ್ದಾರಂತೆ. ಆ ಸಿನಿಮಾಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮಹೇಶ್ ಬಾಬು ಚಿತ್ರದಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಶೂಟ್ ಮಾಡಿದ ಭಾಗ ಮಹೇಶ್ ಬಾಬು ಅವರಿಗೆ ತೃಪ್ತಿ ಸಿಗದ ಕಾರಣ ಮತ್ತೊಮ್ಮೆ ರೀ-ಶೂಟ್ ಮಾಡಲಾಗುತ್ತಿದೆ. ಹಾಗಾಗಿ ಡೇಟ್ ಸಮಸ್ಯೆಯಿಂದ ಪೂಜಾ ಸಿನಿಮಾಗೆ ಬೈ ಬೈ ಹೇಳಿದ್ದಾರೆ.
ಸದ್ಯ ಚಿತ್ರದಿಂದ ಪೂಜಾ ಹೆಗ್ಡೆ ಹೊರನಡೆದಿದ್ದಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದರ ನಡುವೆ ತ್ರಿಷಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಯನ್ನು ಕೆಲವರು ತೇಲಿಬಿಟ್ಟಿದ್ದಾರೆ. ಈ ಹಿಂದೆ ಮಹೇಶ್ ಬಾಬು ಹಾಗೂ ತ್ರಿಷಾ ‘ಅತಡು’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರಕ್ಕೂ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದರು. ‘ಪೊನ್ನಿಯಿನ್ ಸೆಲ್ವನ್’ 2 (Ponniyin Selvan 2) ಸರಣಿ ಚಿತ್ರದಿಂದ ತ್ರಿಷಾ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ:ಜಗ್ಗೇಶ್ ಗೆ ಕನ್ನಡ ಪಾಠ ಮಾಡಿದ ನಾಗ್ತಿ ಮೇಷ್ಟ್ರು
‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯರಾಗಿ ಪೂಜಾ ಹೆಗ್ಡೆ, ಶ್ರೀಲೀಲಾ ಸ್ಕ್ರೀನ್ ಶೇರ್ ಮಾಡಿದ್ದರು. ಅರ್ಧ ಭಾಗ ಚಿತ್ರೀಕರಣ ಮುಗಿದಿರೋ ಬೆನ್ನಲ್ಲೇ ಪೂಜಾ ಹೆಗ್ಡೆ ಹೊರನಡೆದಿದ್ದಾರೆ. ತ್ರಿಷಾ, ಶ್ರೀಲೀಲಾ ಲೀಡ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.