ಲಕ್ನೋ: ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ(Noida) ತಡರಾತ್ರಿ ಪೊಲೀಸರಿಂದ ಎನ್ಕೌಂಟರ್ ನಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ವೇಳೆ ಪೊಲೀಸರ ಪ್ರತಿದಾಳಿಗೆ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನೋಯ್ಡಾದ ಸೆಕ್ಟರ್ 63 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದ್ದು, ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದೆ. ಇನ್ನು ಪರಾರಿಯಾಗಲು ಯತ್ನಿಸಿದ ಮತ್ತಿಬ್ಬರನ್ನು ಸುತ್ತುವರಿದು ಬಂಧಿಸಿದ್ದಾರೆ.
ಬಂಧಿತರಿಂದ ಎರಡು ಅಕ್ರಮ ಪಿಸ್ತೂಲ್ಗಳು, ಕಾರ್ಟ್ರಿಡ್ಜ್ಗಳು, ಎರಡು ಚಾಕುಗಳು ಹಾಗೂ ಎರಡು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 417ಕ್ಕೆ ಏರಿಕೆ – ಸವಾರರಿಗೆ ಮೊದಲ ದಿನವೇ 68.4 ಲಕ್ಷ ದಂಡ
ಲಿಫ್ಟ್ ನೀಡುವ ನೆಪದಲ್ಲಿ ದರೋಡೆ
ಆರೋಪಿಗಳು ಲಿಫ್ಟ್ ನೀಡುವ ನೆಪದಲ್ಲಿ ಜನರನ್ನು ತಮ್ಮ ವಾಹನಗಳಲ್ಲಿ ಕರೆದೊಯ್ದು, ನಿರ್ಜನ ಪ್ರದೇಶಗಳಲ್ಲಿ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಈ ನಾಲ್ವರು ಆರೋಪಿಗಳ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಸ್ಟಿಂಗ್ ವಿವಾದ ಬೆನ್ನಲ್ಲೇ ಇಂದು ರಾಹುಲ್, ಸಿದ್ದರಾಮಯ್ಯ ಮಹತ್ವದ ಭೇಟಿ
