ನವದೆಹಲಿ: ನೀಟ್ (NEET UG 2026) ಅಭ್ಯರ್ಥಿಗಳಿಗೆ ತೊಂದರೆ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ದೆಹಲಿ ವಿಮಾನ ನಿಲ್ದಾಣದಲ್ಲೇ (Delhi Airport) 45 ನಿಮಿಷಗಳ ಕಾಲ ತಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿ ಕಾದರು.
ಮೋದಿಯವರು ಯೋಗ ದಿನಾಚರಣೆ ಮುಗಿಸಿ ಕೋಲ್ಕತ್ತಾದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ವಿದ್ಯಾರ್ಥಿಗಳು ನೀಟ್-ಯುಜಿ ಮರು ಪರೀಕ್ಷೆಗೆ ತೆರಳುತ್ತಿದ್ದರು. ಇದರಿಂದ ಸಂಚಾರ ಸುಗಮವಾಗಿಡಲು ಮತ್ತು ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಯೋಗವು ಕೇವಲ ದೈಹಿಕ ಕಸರತ್ತಲ್ಲ, ಇದು ಮಾನವ ಚೇತನದ ಅದ್ಭುತ ಅಭಿವ್ಯಕ್ತಿ: ಮೋದಿ
ಅಧಿಕೃತ ಮಾಹಿತಿಯ ಪ್ರಕಾರ, ಮಧ್ಯಾಹ್ನ 1:15ರ ಸುಮಾರಿಗೆ ಮೋದಿಯವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದರು. ನೀಟ್ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತು. ಅವರ ಪ್ರಯಾಣದ ವೇಳೆ ಭದ್ರತೆ ದೃಷ್ಟಿಯಿಂದ ಬೇರೆ ವಾಹನಗಳಿಗೆ ಮಾರ್ಗ ಮುಚ್ಚಲಾಗಿರುತ್ತದೆ. ಇದರಿಂದ ಪರೀಕ್ಷೆಗೆ ತೆರಳುವವರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಅದಕ್ಕಾಗಿ ತಕ್ಷಣ ಅವರು ತಮ್ಮ ನಿವಾಸಕ್ಕೆ ತೆರಳದೆ ವಿಮಾನ ನಿಲ್ದಾಣದಲ್ಲಿಯೇ ಸ್ವಲ್ಪ ಹೊತ್ತು ಇರಲು ನಿರ್ಧರಿಸಿದರು.
ನೀಟ್-ಯುಜಿ ಮರುಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ನಂತರ, ವಿಮಾನ ನಿಲ್ದಾಣದಿಂದ ತಮ್ಮ ನಿವಾಸಕ್ಕೆ ಅವರು ತೆರಳಿದರು. ಇದನ್ನೂ ಓದಿ: ನಾಗಪುರದ ನೀಟ್ ವಿದ್ಯಾರ್ಥಿಯೇ ಅಬುಧಾಬಿಯನ್ನು ಆಯ್ಕೆ ಮಾಡಿದ್ದ- ಡಿಜಿಟಲ್ ಪುರಾವೆ ಪ್ರಕಟಿಸಿದ NTA
