– ವಿಶ್ವದ ಅತಿ ಹಿರಿಯ ಜೀವಂತ ಪ್ರಾಣಿ ಎಂಬ ಖ್ಯಾತಿ ಪಡೆದು ಗಿನ್ನೀಸ್ ದಾಖಲೆ ಸೇರಿರೋ ಆಮೆ
ವಿಕ್ಟೋರಿಯಾ: ಸಿಶೆಲ್ಸ್ (Seychelles) ದೇಶದ ನ್ಯಾಷನಲ್ ಡೇಗೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು, ಈ ವೇಳೆ 194 ವರ್ಷದ ಜೋನಥನ್ ಎಂಬ ದೈತ್ಯ ಆಮೆಯನ್ನು ಭೇಟಿ ಮಾಡಲಿದ್ದಾರೆ.
ಜೂ.29ರಂದು ಸಿಶೆಲ್ಸ್ ದೇಶವು ತನ್ನ ರಾಷ್ಟ್ರೀಯ ದಿನ್ನವನ್ನು ಆಚರಿಸಲಿದೆ. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಈ ಹಿನ್ನೆಲೆ ಮುಂದಿನ ವಾರ ಮೋದಿ ಸಿಶೆಲ್ಸ್‌ಗೆ ತೆರಳಿದ್ದು, ಈ ವೇಳೆ ವಿಶ್ವದ ಅತ್ಯಂತ ಹಿರಿಯ ಭೂಚರ 194 ವರ್ಷದ ಜೋನಥನ್ (Jonathan) ಆಮೆಯನ್ನು ಭೇಟಿ ಮಾಡಲಿದ್ದಾರೆ. ಬಳಿಕ ಅವರು ಸಿಶೆಲ್ಸ್‌ನ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ತೆರಳಲಿದ್ದು, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಸಾರಲು ಅಲ್ಲಿ ಸಸಿಯೊಂದನ್ನು ನೆಡಲಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ – ಮಾರ್ಕೊ ರುಬಿಯೋ

ಭಾರತ ಮತ್ತು ಸೀಶೆಲ್ಸ್ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಬೆಳೆದು 50 ವರ್ಷ ತುಂಬಿದ ಸ್ಮರಣಾರ್ಥವಾಗಿ ಈ ಭೇಟಿ ನಡೆಯುತ್ತಿದೆ. ಈ ವೇಳೆ ಪ್ರಧಾನಿ ಮೋದಿ ಅಲ್ಲಿನ ನಾಯಕರ ಜೊತೆ ಕಾರ್ಯತಂತ್ರ, ಆರ್ಥಿಕ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರದ ಕುರಿತು ಮಾತುಕತೆ ನಡೆಸಲಿದ್ದಾರೆ.
ಜೋನಥನ್ ಹಿನ್ನೆಲೆ:
ವಿಶ್ವದ ಅತ್ಯಂತ ಹಿರಿಯ ಪ್ರಾಣಿ ಎಂದು ಖ್ಯಾತಿ ಹೊಂದಿರುವ ದೈತ್ಯ ಆಮೆ ಜೋನಥನ್ ಜನಿಸಿದ್ದು 1832ರಲ್ಲಿ. ಸದ್ಯ ಇದರ ವಯಸ್ಸು 194 ವರ್ಷ. ಇದು ಸಿಶೆಲ್ಸ್‌ನ ಮೂಲ ಆಮೆಯಾಗಿದೆ. ಸುಮಾರು ಎರಡು ಶತಮಾನಗಳಿಂದ ಬದುಕಿರುವ ಜೋನಥನ್, ಜಗತ್ತಿನಲ್ಲಿ ತಲೆಮಾರುಗಳು ಬದಲಾಗುವುದನ್ನು ಮತ್ತು ಐತಿಹಾಸಿಕ ಘಟನೆಗಳನ್ನು ಕಂಡಿದೆ.

ಜೋನಥನ್‌ಗೆ ಅತಿ ಹೆಚ್ಚು ವಯಸ್ಸಾಗಿದ್ದರೂ ಸಹ, ಪಶುವೈದ್ಯರ ನಿರಂತರ ಕಾಳಜಿ ಮತ್ತು ಶ್ರಮದಿಂದಾಗಿ ಉತ್ತಮ ಆರೋಗ್ಯ ಹೊಂದಿದ್ದಾನೆ. ಕಣ್ಣಿನ ಪೊರೆಯಿಂದಾಗಿ ಕಣ್ಣಿನ ದೃಷ್ಟಿ ಮಂಜಾಗಿದ್ದರೂ ಮತ್ತು ವಾಸನೆ ಗ್ರಹಿಸುವ ಶಕ್ತಿ ಕಡಿಮೆಯಾಗಿದ್ದರೂ, ಜೋನಥನ್ ಆರೋಗ್ಯವಾಗಿ ಇದ್ದಾನೆ. ಸದ್ಯ ಇದು ಸಿಶೆಲ್ಸ್‌ನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಆಮೆಯು ದೀರ್ಘಾಯುಷ್ಯದ ಬಗ್ಗೆ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳಿಗೆ ಅಧ್ಯಯನ ಮಾಡಲು ಒಂದು ಕುತೂಹಲಕಾರಿ ಜೀವಿಯಾಗಿದೆ.ಇದನ್ನೂ ಓದಿ: ವೆನೆಜುವೆಲಾದಲ್ಲಿ ಮತ್ತೆ ಕಂಪಿಸಿದ ಭೂಮಿ – 4.9 ತೀವ್ರತೆ ದಾಖಲು, 900ರ ಗಡಿದಾಟಿದ ಸಾವಿನ ಸಂಖ್ಯೆ
